ಬೆಂಗಳೂರು: ಅಮಾಯಕ ಸಾರ್ವಜನಿಕರಿಗೆ ಹಣದ ಆಮಿಷ ಒಡ್ಡಿ, ಅವರುಗಳ ಹೆಸರಿನಲ್ಲಿ ನಕಲಿ ಕಂಪನಿ ಹಾಗೂ ಮ್ಯೂಲ್ ಖಾತೆಗಳನ್ನು ತೆರೆದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚಿರುವ ನಗರದ ಸೈಬರ್ ಕ್ರೈಮ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
ಗ್ಯಾಂಗ್ ನಲ್ಲಿದ್ದ ನಾಗದೇವನಹಳ್ಳಿಯ ಲಕ್ಷ್ಮೇಶ್ (33)ಅಗರದ ಪ್ರಕಾಶ್ (33) ಸಂತೃಪ್ತಿನಗರದ ಸುನೀಲ್ ಕುಮಾರ್ (45) ರಾಮನಗರದ ಅರ್ಚಕರಹಳ್ಳಿಯ ಪುಟ್ಟಸ್ವಾಮಯ್ಯ(54) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ನಗರದ ವಿವಿಧ ಕಡೆಗಳಲ್ಲಿ ಅಮಾಯಕ ಸಾರ್ವಜನಿಕರಿಗೆ ಹಣದ ಆಮೀಷ ಒಡ್ಡಿ ಅವರುಗಳ ಹೆಸರಿನಲ್ಲಿ ನೂರಾರು ನಕಲಿ ಕಂಪನಿಗಳನ್ನು ಸೃಷ್ಟಿಸಿ, ಆ ಕಂಪನಿಗಳ ಹೆಸರಿನಲ್ಲಿ ನೂರಾರು ಬ್ಯಾಂಕ್ ಖಾತೆಗಳನ್ನು ತೆರೆದು, ಅವುಗಳನ್ನು ಸೈಬರ್ ವಂಚಕರ ತಂಡಗಳಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅದರಲ್ಲಿದ್ದ, ನಾಲ್ವರನ್ನು ಬಂಧಿಸಲಾಗಿದೆ ಎಂದರು.
ಬಂಧಿತರ ಗ್ಯಾಂಗ್ ದೇಶಾದ್ಯಂತ ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 357 ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನು ಪತ್ತೆ ಹಚ್ಚಲಾಗಿರುತ್ತದೆ. ಅಂತಹ ಅಕೌಂಟ್‌ಗಳಲ್ಲಿ ಕೋಟ್ಯಂತರ ಹಣ ವಹಿವಾಟು ನಡೆದಿರುವುದು ಮತ್ತು ದೇಶಾದ್ಯಂತ ಎನ್ ಸಿಆರ್ ಪಿ ಪೋರ್ಟಲ್ ನಲ್ಲಿ 100 ಪ್ರಕರಣಗಳು ದಾಖಲಾಗಿರುವುದು, ಇದುವರೆಗಿನ ತನಿಖೆಯಿಂದ ಕಂಡುಬಂದಿದೆ ಎಂದರು.
ಇದುವರೆಗೆ ಒಟ್ಟು ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದು, ಇನ್ನೂ ಹಲವಾರು ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡುಬಂದಿರುತ್ತದೆ. ತನಿಖೆ ಮುಂದುವರೆದಿದೆ. ಇದರಲ್ಲಿ ಮ್ಯೂಲ್ ಅಕೌಂಟ್ ಓಪನ್ ಮಾಡಿಕೊಡುವಲ್ಲಿ ವಿವಿಧ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಬಂಧಿತ ನಾಲ್ವರಿಂದ 1 ಲ್ಯಾಪ್ ಟಾಪ್ 4 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು. ವಿವಿಧ ಬ್ಯಾಂಕ್‌ನ ಚೆಕ್ ಪುಸ್ತಕಗಳು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.




