ಬೆಂಗಳೂರು: ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರ, ಅನುದಾನ ಬಿಡುಗಡೆ ಸಚಿವರುಗಳ ನಿರ್ಲಕ್ಷ್ಯ ಸೇರಿದಂತೆ ಹಲವಾರು ವಿಚಾರಗಳನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿರುವ ಶಾಸಕ ರಾಜು ಕಾಗೆ ತಮಗೆ ಮಂತ್ರಿ ಸ್ಥಾನ ಕೊಟ್ಟರೂ ಬೇಡ ಎಂದು ಹೇಳಿದ್ದಾರೆ.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಕೆಪಿಸಿಸಿ ಕಚೇರಿಯಲ್ಲಿ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಮಂತ್ರಿಗಳ ವಿರುದ್ಧ ಹೇಳಿಕೆ ನೀಡಿಲ್ಲ. ತಮಗೆ ಆಗುತ್ತಿರುವ ನೋವನ್ನು ತೋಡಿಕೊಂಡಿದ್ದೇನೆ ಎಂದರು.
ಮಂತ್ರಿ ಸ್ಥಾನ ಪಡೆಯಲು ಇಂತಹ ಆರೋಪ ಮಾಡಲಾಗುತ್ತಿದೆ ಎನ್ನುವುದು ಸಂಪೂರ್ಣ ಸುಳ್ಳು. ತಮ್ಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಿದ್ದೇನೆ. ನನಗೆ ಮಂತ್ರಿ ಸ್ಥಾನ ಬೇಕಾಗಿಲ್ಲ. ಅಗತ್ಯ ಬಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ಇದನ್ನು ಸುರ್ಜೇವಾಲ ಅವರಿಗೆ ತಿಳಿಸಿದ್ದೇನೆ ಎಂದರು.
ನನಗೆ ಯಾರನ್ನೂ ಓಲೈಸುವ ಅಗತ್ಯ ಇಲ್ಲ. ಸಚಿವರ ಬಳಿ ಹೋದರೆ ನನ್ನ ಕೆಲಸಕ್ಕೆ ಸೀಮಿತವಾಗಿ ಮಾತನಾಡಿ ಸಮಯ ವ್ಯರ್ಥ ಮಾಡದೇ ಎದ್ದು ಬರುತ್ತೇನೆ. ಗಂಟೆಗಟ್ಟಲೆ ಅವರ ಜೊತೆ ಹರಟೆ ಹೊಡೆಯುವ ಉದ್ದೇಶವಾಗಲೀ, ಅಗತ್ಯವಾಗಲೀ ನನಗಿಲ್ಲ. ಸಚಿವನಾಗಬೇಕು, ಅಧಿಕಾರ ಬೇಕು ಎಂಬ ಯಾವ ಉಮೇದು ನನ್ನದಲ್ಲ ಎಂದರು.
ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ, ಶಾಸಕ ಸ್ಥಾನ ಬೇಡ ಎಂದರೂ ಅದಕ್ಕೂ ರಾಜೀನಾಮೆ ನೀಡಲು ನಾನು ಸಿದ್ಧ. ನನ್ನ ಮನೆಯಲ್ಲಿ ಅಜ್ಜ, ಮುತ್ತಜ್ಜ ಏನು ಶಾಸಕರಾಗಿರಲಿಲ್ಲ. ಹೀಗಾಗಿ ಹೆದರಿಕೆಯಿಲ್ಲದೆ ನನ್ನ ಅಭಿಪ್ರಾಯಗಳನ್ನು ಮಂಡಿಸುತ್ತೇನೆ ಎಂದರು.
ನಾನು ಜನರ ಪ್ರತಿನಿಧಿ. ನನ್ನ ಮನೆಯ ಆಸ್ತಿ ಬಗ್ಗೆ ಮಾತನಾಡುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅವರ ಧ್ವನಿಯಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ಎಂದರು.




