ಪಂಜಾಬ್ ಮುಖ್ಯಮಂತ್ರಿ ಮದುವೆ : ಸರಳ ವಿವಾಹಕ್ಕೆ ಸಾಕ್ಷಿಯಾಗಲಿರುವ ಕೇಜ್ರಿವಾಲ್

4 years ago

ಅಮೃತಸರ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುರುವಾರ ವಿವಾಹ ಬಂಧನಕ್ಕೆ ಒಳಪಡುತ್ತಿದ್ದಾರೆ. ಕುಟುಂಬದ ಕೆಲವೇ ಮಂದಿ, ಆಪ್ತರು ಭಾಗವಹಿಸುವ ಈ ಮದುವೆ ಸಮಾರಂಭವು ಜುಲೈ 7ರಂದು ಚಂಡೀಗಡದಲ್ಲಿ ನಡೆಯಲಿದೆ.

ಡಾ. ಗುರ್‌ಪ್ರೀತ್ ಕೌರ್ ಅವರನ್ನು ಭಗವಂತ್ ಮಾನ್ ವರಿಸಲಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಾನ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕುಟುಂಬದ ಆಪ್ತ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮಾನ್ ಅವರ ಸಂಪುಟದ ಸಚಿವರು, ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಹಾಜರಾಗುವ ಸಾಧ್ಯತೆ ಇದೆ.

ಭಗವಂತ್ ಮಾನ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಅವರು ಆರು ವರ್ಷಗಳ ಹಿಂದೆ (2015) ವಿಚ್ಛೇದನ ಪಡೆದಿದ್ದರು. ಅವರ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್ ಅವರು ತಮ್ಮ ಇಬ್ಬರು ಮಕ್ಕಳ ಜತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇದಕ್ಕೂ ಮುನ್ನ ಮಾನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರ ಮಕ್ಕಳಾದ ದಿಲ್ಶಾನ್ ಮತ್ತು ಸೀರತ್ ಹಾಜರಿದ್ದರು.

Leave a Reply