ರಾಷ್ಟ್ರ ಹಿತಾಸಕ್ತಿ, ರಾಷ್ಟ್ರದ ಸಾರ್ವಭೌಮತ್ವ ಹಾಗೂ ಸುರಕ್ಷತೆಯ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಎಂದೂ ತೆರೆದ ಮನಸ್ಸಿನಿಂದ ನಡೆದುಕೊಂಡ ಉದಾಹರಣೆಯಿಲ್ಲ, ನೈಜ ಬದ್ಧತೆ ತೋರಿದ ನಿದರ್ಶನಗಳಿಲ್ಲ. ತನ್ನ ಪಕ್ಷದಲ್ಲಿನ ರಾಷ್ಟ್ರ ನಿಷ್ಠೆ ಹಾಗೂ ಕಾಳಜಿ ತೋರುವವರನ್ನು ಬದಿಗೆ ಸರಿಸಿದ್ದು ಅವರೆನ್ನಲ್ಲ ರಾಜಕೀಯವಾಗಿ ಮೂಲೋತ್ಪಾಟನೆ ಮಾಡಿದ್ದೇ ಹೆಚ್ಚು, ಆ ಸಾಲಿಗೆ ಈಗ Shashi Tharoor ಅವರು ಸೇರಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಪಾಕಿಸ್ತಾನದ ಉಗ್ರ ಪೋಷಕ ಮುಖವಾಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಚ್ಚಿಡಲು ರಾಜತಾಂತ್ರಿಕ ಮಾರ್ಗದ ಮೂಲಕ ವಿವಿಧ ರಾಷ್ಟ್ರಗಳಿಗೆ ಭಾರತದ ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ಶಶಿತರೂರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ತನ್ನ ಅಸೂಯೆ ಕಕ್ಕುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದ ವಿದೇಶಾಂಗ ನೀತಿಯ ಅವರ ಅನುಭವ ಹಾಗೂ ಸಾಮರ್ಥ್ಯವನ್ನು ಪರಿಗಣಿಸಿ ಪ್ರಧಾನಿ ಶ್ರೀ Narendra Modi ಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ ತನ್ನ ನಿಯೋಗದಲ್ಲಿ ಕರ್ನಾಟಕದ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿಸಿದ್ದ ಸೈಯ್ಯದ್ ನಾಸೀರ್ ಹುಸೇನ್ ಹಾಗೂ ಗೌರವ್ ಗೊಗೊಯ್ ರಂತಹ ಪಾಕಿಸ್ತಾನಿ ಪರ ಸಹಾನುಭೂತಿ ಇರುವವರನ್ನು ನಿಯೋಗಕ್ಕೆ ನಾಮನಿರ್ದೇಶನ ಮಾಡಿದ್ದು ಇದು ಕಾಂಗ್ರೆಸ್ ಪಕ್ಷದ ನಕಲಿ ರಾಷ್ಟ್ರಪ್ರೇಮದ ಅಸಲಿ ಮುಖವಾಡವನ್ನು ಕಳಚಿಟ್ಟಿದೆ.
“ದೇಶ ಮೊದಲು ಪಕ್ಷ ನಂತರ ಎಂಬ ತತ್ವ ಬಿಜೆಪಿಯದ್ದು”, ‘ಅಧಿಕಾರ, ಪಕ್ಷ ಮೊದಲು ದೇಶ ಆನಂತರ ಎಂಬ ಸಿದ್ಧಾಂತ ಕಾಂಗ್ರೆಸ್ ನದ್ದು’ ಎಂಬುದು ಕಾಂಗ್ರೆಸ್ ಪಕ್ಷದ ನಡವಳಿಕೆಯಿಂದ ಸಾಬೀತಾಗುತ್ತಿದೆ. ಭಾರತದ ಸರ್ವಪಕ್ಷಗಳ ಸಂಸದರ ನಿಯೋಗದ ಭಾಗವಾಗಲು ಬಹುತೇಕ ವಿರೋಧ ಪಕ್ಷಗಳೆಲ್ಲವೂ ಸರ್ವಸಮ್ಮತಿ ಸೂಚಿಸಿ ಇದು ರಾಷ್ಟ್ರದ ಘನತೆಯ ವಿಚಾರ ಹೆಮ್ಮೆಯ ಭಾರತವನ್ನು ಪ್ರತಿನಿಧಿಸಲು ತಮಗೆ ದೊರೆತಿರುವ ವಿಶೇಷ ಅವಕಾಶ ಎಂದು ಪರಿಗಣಿಸಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಅಪಸ್ವರ ಹಾಗೂ ಅಸೂಯೆಯ ಪ್ರತಿಕ್ರಿಯೆ ವ್ಯಕ್ತಪಡಿಸುವ ಮೂಲಕ ರಾಷ್ಟ್ರ ಹಿತಾಸಕ್ತಿಗಿಂತಲೂ ತನ್ನ ಸ್ವಾರ್ಥವೇ ಹೆಚ್ಚು ಎಂಬುದನ್ನು ಬಹಿರಂಗಪಡಿಸಿಕೊಂಡಿದೆ.
– ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ




