ಬಂಜಾರ ಸಾಮಾಜಿಕ ಸಂಘ ವತಿಯಿಂದ ಅಂಬೇಡ್ಕರ್ ಜಯಂತಿ

4 years ago

ಬೆಂಗಳೂರು: ಬಂಜಾರ ಸಾಮಾಜಿಕ ಸಂಘದ ವತಿಯಿಂದ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್‍ ಅವರ 131ನೇ ಜಯಂತಿ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನಯನ ಸಭಾಂಗಣದಲ್ಲಿ ಆಚರಿಸಲಾಯಿತು. ಸಮಾರಂಭವನ್ನು ಸಾಮಾಜಿಕ ಹೋರಾಟಗಾರ ಡಾ.ಎಂ.ವೆಂಕಟಸ್ವಾಮಿ, ಕಲಾವಿದ ಹಾಗೂ ಪ್ರಗತಿಪರಚಿಂತಕ, ಡಾ.ಎ.ಆರ್.ಗೋವಿಂದಸ್ವಾಮಿ, ಬಂಜಾರ ಗುರು ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮುಂತಾದವರು ಉದ್ಘಾಟಿಸಿ ಮಾತನಾಡಿದರು.

ಬಂಜಾರ ಮುಖಂಡರಾದ ಜಯರಾಮ್ ನಾಯಕ್,  ಸಮಾಜ ಸೇವಕ ರವಿ, ಸಮಾಜ ಸೇವಕಿ ರೇವತಿರಾಜ್, ವಕೀಲ ಅನಂತನಾಯಕ್, ಸರ್ದಾರ್s ಸೇವಾಲಾಲ್ ಸ್ವಾಮೀಜಿ, ನಾಗರಾಜ್, ಡಾ.ಎಂ.ವೆಂಕಟಸ್ವಾಮಿ, ಬಂಜಾರ ಮುಖಂಡ, ಹನುಮಂತ ನಾಯಕ್, ಹಿಂದೂ ವೇದಿಕೆಯ ಮಹಿಳಾ ಅಧ್ಯಕ್ಷೆ,  ಗಿರಿಜ ಗಣೇಶ್, ಹನುಮಂತನಾಯಕ್, ವಿಜಯ್, ನಾಗೇಂದ್ರ ನಾಯಕ್, ರೇವತಿ, ಅನಂತ, ಸ್ವಾಮೀಜಿ, ರವಿ ಮುಂತಾದವರು ಉಪಸ್ಥಿತರಿದ್ದರು.

Leave a Reply