ಕೋಟ್ಯಂತರ ಧ್ವನಿ ಇಲ್ಲದ ಜನರ ಧ್ವನಿ ಡಾ||ಬಿ.ಆರ್.ಅಂಬೇಡ್ಕರ್: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ಸಮಾನತೆಯ ಪ್ರತೀಕ ಡಾ||ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಕೋಟ್ಯಂತರ ಧ್ವನಿ ಇಲ್ಲದ ಜನರಿಗೆ ಧ್ವನಿಯಾದವರು, ಧ್ವನಿಕೊಟ್ಟ ಧೀಮಂತ ನಾಯಕರು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ, ದಯಾನಂದ ನಗರ ವಾರ್ಡ್ ನಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಮತ್ತು ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಮತ್ತು ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರಿಗೆ ಪಿಂಚಣೆ ಮಂಜೂರಾತಿ ಆದೇಶ ಪತ್ರ ವಿತರಣಾ ಸಮಾರಂಭದಲ್ಲಿ ಮಾತಾಡಿದ ಅವರು, ದೇಶದ ಪ್ರತಿಯೊಬ್ಬ ಸಂವಿಧಾನದ ಮಹತ್ವ ತಿಳಿದಿದೆ. ಸಂವಿಧಾನದಿಂದ ಎಲ್ಲರಿಗೂ ಸಮಾನ ಹಕ್ಕು,ಸಮಾನ ಅವಕಾಶ ದೊರಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರದು ಜೀವನ ಪೂರ್ತಿ ಹೋರಾಟದ ಬದುಕು. ಲಂಡನ್ ಗೆ ತೆರಳಿ ಅಲ್ಲಿ ಬ್ಯಾರಿಸ್ಟರ್ ವಿದ್ಯಾಭ್ಯಾಸ ಮಾಡಿ ನಮಗೆ ಉತ್ತಮ ಸಂವಿಧಾನ ಕೊಟ್ಟಿದ್ದಾರೆ. ಡಾ||ಬಿ.ಆರ್.ಅಂಬೇಡ್ಕರ್ ರವರ ಆದರ್ಶ, ಸಿದ್ದಾಂತ ಮತ್ತು ವಿಚಾರಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.
ಲೋಕಸಭೆ ಸದಸ್ಯ ಪಿ.ಸಿ.ಮೋಹನ್ ಮಾತನಾಡಿ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ ಇಂದು ದೇಶದ್ಯಾಂತ ಅದ್ದೂರಿಯಾಗಿ ಅಚರಣೆ ಮಾಡುತ್ತಿದ್ದಾರೆ. ಕಟ್ಟಕಡೆಯ ಸಮಾಜದವರು ಮುಖ್ಯವಾಹಿನಿ ತರಲು ಸಂವಿಧಾನ ಸಹಕಾರಿಯಾಗಿದೆ. ಪ್ರಧಾನಿ ನರೇಂದ್ರಮೋದಿ ರವರು ಡಾ||ಬಿ.ಆರ್.ಅಂಬೇಡ್ಕರ್ ರವರು ಪಂಚರತ್ನಗಳು ಎಂಬ ಬಾಬಸಾಹೇಬ್ ಅಂಬೇಡ್ಕರ್ ಜನ್ಮಸ್ಥಳ, ಲಂಡನ್ ವಿದ್ಯಾಭ್ಯಾಸ ಮಾಡಿದ ಸ್ಥಳ, ಸಮಾಧಿ ಐದು ಸ್ಥಳಗಳನ್ನು ತೀರ್ಥಕ್ಷೇತ್ರಗಳಾಗಿ ಮಾಡಿ ಅಭಿವೃದ್ದಿ ಪಡಿಸಿದ್ದಾರೆ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮುನಿರಾಜು, ಶಕೀಲ, ಬಿ.ಜೆ.ಪಿ. ಮಂಡಲ ಅಧ್ಯಕ್ಷ ರಾಘವೇಂದ್ರರಾವ್, ರಾಜಾಜಿನಗರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಸಂಜಯ್, ಡಾ||ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ,ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Leave a Reply