ಪ್ಲಾಸ್ಟಿಕ್ ಉದ್ದಿಮೆದಾರರಿಗೆ ದಂಡ

1 year ago

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಎಂ.ಜಿ ರಸ್ತೆ ವಿಕಾಸ್ ಪಾಲಿ ಪ್ಯಾಕ್ಸ್, ಕರ್ನಾಟಕ ಪ್ಲಾಸ್ಟಿಕ್, ಪ್ರೇಮ್ ಪ್ಲಾಸ್ಟಿಕ್ ಉದ್ದಿಮೆಗಳ ತಪಾಸಣೆ ಮಾಡಿ 240 ಕೆ.ಜಿ ಏಕ ಬಳಕೆ ಪ್ಲಾಸ್ಟಿಕನ್ನು ವಶ ಪಡಿಸಿಕೊಂಡು ಉದ್ದಿಮೆದಾರರಾದ ಪುಕ್ರಾಜ್, ವಿಕಾಸ್ ಕುಮಾರ್, ಬುದ್ದರಾಂ ಇವರುಗಳಿಗೆ ರೂ.1,05,000 ರೂ.ಗಳ ದಂಡವನ್ನು ವಿಧಿಸಲಾಗಿದೆ. ಈ ವೇಳೆ ಪರಿಸರ ವಿಭಾಗದ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಗಳು, ಆರಕ್ಷಕರು ಹಾಗೂ ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.

Leave a Reply