ಯಾವ ರೀತಿಯಲ್ಲೂ ದೇಶದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳದ ಮತ್ತು ಧರ್ಮದ ಆಧಾರದಲ್ಲಿ ದ್ವೇಷ ಮೂಡಿಸಿ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುವ ಮತ್ತು ಸಂವಿಧಾನದ ಆಶಯಕ್ಕೆ ಪೂರಕವಾಗಿ ಯಾವುದೇ ಜನಪರ ಯೋಜನೆಗಳನ್ನು ರೂಪಿಸದ ಬಿಜೆಪಿಗರು ಇದೀಗ “ಸಂವಿಧಾನ ಗೌರವ ಅಭಿಯಾನ” ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದು, ಸಂವಿಧಾನದ ಆಶಯಗಳನ್ನು ಯಾವ ಕಾರಣಕ್ಕೂ ಪಾಲಿಸದ ಇವರ ಈ ಅಭಿಯಾನ ಹೇಗೆ ಇರಬಹುದು ಎಂಬ ಕುತೂಹಲ ನನಗೆ ಮೂಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅತ್ತ ಈ ಹಿಂದೆ ಚಡ್ಡಿಗಳನ್ನು ಹೊರುವ ಕೆಲಸ ಮಾಡಿದ್ದ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಮತ್ತು ಇತ್ತ ಬಹುಜನ ಚಳುವಳಿಯ ಹೆಸರಲ್ಲಿ ಗೆದ್ದು ಸಿದ್ಧಾಂತ ಮರೆತು ಯುವಕರನ್ನು ವಂಚಿಸಿ ಪಕ್ಷಾಂತರ ಮಾಡಿದ್ದ ಜನರು ಇದೀಗ ಸಂವಿಧಾನದ ಅಭಿಯಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದನ್ನು ನೋಡುತ್ತಿದ್ದರೆ ನನಗೆ ನಿಜಕ್ಕೂ ಆತಂಕ ಆಗುತ್ತಿದೆ.
ನಮ್ಮ ಸರ್ಕಾರವು ಸಂವಿಧಾನದ ಕುರಿತು ಮಾಡಿದ ಅರಿವಿನ ಪ್ರಯತ್ನಗಳಿಂದಾಗಿ ವಿಚಲಿತರಾಗಿರುವ ಬಿಜೆಪಿಗರು ಚುನಾವಣೆಯಲ್ಲಿ ಹಿನ್ನಡೆ ಆಗುತ್ತಿರುವಂತೆಯೇ ಇದೀಗ ಸಂವಿಧಾನದ ವಿಷಯಕ್ಕೆ ಕೈ ಹಾಕಿದ್ದು ಸಂವಿಧಾನದ ವಿಷಯವನ್ನೇ ಬಳಸಿಕೊಂಡು ಅದರ ಆಶಯಗಳನ್ನು ಭ್ರಷ್ಟಗೊಳಿಸುವ ಮತ್ತು ಯುವ ಜನತೆಯನ್ನು ದಾರಿ ತಪ್ಪಿಸುವ ಎಲ್ಲಾ ಸಾಧ್ಯತೆಗಳಿವೆ.
ಈ ನಿಟ್ಟಿನಲ್ಲಿ ನಾವೆಲ್ಲರೂ ಸಂವಿಧಾನ ವಿರೋಧಿಗಳೇ ಮಾಡುತ್ತಿರುವ ಸಂವಿಧಾನದ ಪರವಾದ ಅಭಿಯಾನದ ಕುರಿತಂತೆ ಸದಾ ಎಚ್ಚರದ ಕಣ್ಣುಗಳಿಂದ ಗಮನಿಸಬೇಕು.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




