ತನಿಖೆಗೆ ಆದೇಶಿಸಿದ ಸಭಾಪತಿ ಜಗದೀಪ್ ಧನಕರ್
ದೆಹಲಿ: ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನಿಯೋಜಿಸಲಾದ ಆಸನ ಸಂಖ್ಯೆ 222ರಲ್ಲಿ ನೋಟುಗಳ ಕಂತೆಗಳು ಪತ್ತೆಯಾಗಿವೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಾಮಾನ್ಯ ವಿಧ್ವಂಸಕ ವಿರೋಧಿ ಪರಿಶೀಲನೆ ವೇಳೆ, ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಹಂಚಿಕೆ ಮಾಡಲಾದ ಆಸನ ಸಂಖ್ಯೆ 222ರಲ್ಲಿ ನೋಟುಗಳ ಕಂತೆಗಳು ಪತ್ತೆಯಾಗಿವೆ. ಸದರಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದರು.
ನಿನ್ನೆ ಸದನವನ್ನು ಮುಂದೂಡಿದ ನಂತರ ಸದನದ ಸಾಮಾನ್ಯ ವಿಧ್ವಂಸಕ ವಿರೋಧಿ ಪರಿಶೀಲನೆ ಸಮಯದಲ್ಲಿ, ತೆಲಂಗಾಣ ರಾಜ್ಯದಿಂದ ಚುನಾಯಿತರಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪ್ರಸ್ತುತ ನೀಡಲಾಗಿರುವ ಆಸನ ಸಂಖ್ಯೆ 222 ರಿಂದ ಭದ್ರತಾ ಅಧಿಕಾರಿಗಳು ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಷಯವನ್ನು ನನ್ನ ಗಮನಕ್ಕೆ ತರಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಈ ಸಂಗತಿಯನ್ನು ಸದನದ ಗಮನಕ್ಕೆ ತರಬಯಸುತ್ತೇನೆ ಎಂದು ಅವರು ಹೇಳಿದರು.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ಮನು ಸಿಂಘ್ವಿ, ನಾನು ಅದರ ಬಗ್ಗೆ ಕೇಳಿ ಆಶ್ಚರ್ಯಚಕಿತನಾಗಿದ್ದೇನೆ. ನಾನು ನಿನ್ನೆ ಮಧ್ಯಾಹ್ನ 12.57ಕ್ಕೆ ಸದನದ ಒಳಬಂದೆ. ಮಧ್ಯಾಹ್ನ 1 ಗಂಟೆಗೆ ಸದನ ಆರಂಭವಾಯಿತು. ಮಧ್ಯಾಹ್ನ 1 ರಿಂದ 1:30 ರವರೆಗೆ, ನಾನು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಉಪಾಹಾರ ಗೃಹದಲ್ಲಿ ಕುಳಿತು ಊಟ ಮಾಡಿದೆ. ಮಧ್ಯಾಹ್ನ 1:30ಕ್ಕೆ ನಾನು ಸಂಸತ್ತಿನಿಂದ ಹೊರಟೆ. ಹಾಗಾಗಿ ನಿನ್ನೆ ಸದನದಲ್ಲಿ ನನ್ನ ಒಟ್ಟು ವಾಸ್ತವ್ಯದ ಅವಧಿ 3 ನಿಮಿಷಗಳು ಮತ್ತು ಕ್ಯಾಂಟೀನ್‌ನಲ್ಲಿ ನನ್ನ ವಾಸ್ತವ್ಯದ ಅವಧಿ 30 ನಿಮಿಷಗಳು ಎಂದು ತಮ್ಮ ವಿರುದ್ಧದ ಆರೋಪದ ಕುರಿತು ಪ್ರತಿಕ್ರಿಯಿಸಿದರು.
ಇಂತಹ ವಿಷಯಗಳಲ್ಲಿಯೂ ರಾಜಕೀಯವನ್ನು ಮಾಡುವುದು ನನಗೆ ವಿಲಕ್ಷಣವಾಗಿ ಕಾಣುತ್ತಿದೆ. ಜನ ಹೇಗೆ ಬಂದು ಯಾವ ಸೀಟಿನಲ್ಲಿ ಎಲ್ಲಿ ಏನು ಬೇಕಾದರೂ ಹಾಕುತ್ತಾರೆ ಎಂಬ ವಿಚಾರ ಖಂಡಿತಾ ವಿಚಾರಣೆ ಆಗಬೇಕು. ಇದರರ್ಥ ನಮ್ಮಲ್ಲಿ ಪ್ರತಿಯೊಬ್ಬರೂ ಲಾಕ್ ಮಾಡಬಹುದಾದ ಆಸನವನ್ನು ಹೊಂದಿರಬೇಕು ಮತ್ತು ಕೀಲಿಯನ್ನು ಸಂಸದರು ಮನೆಗೆ ಒಯ್ಯಬೇಕು. ಏಕೆಂದರೆ, ಪ್ರತಿಯೊಬ್ಬರ ಆಸನದ ಮೇಲೆ ಈ ಬಗೆಯ ಆರೋಪಗಳನ್ನು ಮಾಡಬಹುದು. ಇದರ ಕುರಿತು ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಜಗದೀಪ್ ಹೇಳಿಕೆ ವಿಪಕ್ಷಗಳ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ತನಿಖೆ ಪೂರ್ಣಗೊಳ್ಳದೆ ಸದಸ್ಯರ ಹೆಸರನ್ನು ಹೇಳಬಾರದು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್, ರಿಜಿಜು, ಹೆಸರು ಹೇಳಿದ್ದಕ್ಕೆ ಆಕ್ಷೇಪವೇಕೆ? ಅಧ್ಯಕ್ಷರು ಆಸನ ಸಂಖ್ಯೆ ಮತ್ತು ಅದನ್ನು ಆಕ್ರಮಿಸಿಕೊಂಡಿರುವ ಸದಸ್ಯರನ್ನು ಸೂಚಿಸಿದ್ದಾರೆ. ಅದರಲ್ಲಿ ಸಮಸ್ಯೆ ಏನು ಎಂದರು.
ಸದನದಲ್ಲಿ ನೋಟುಗಳ ಕಂತೆಗಳನ್ನು ಒಯ್ಯುವುದು ಸೂಕ್ತವಲ್ಲ. ಈ ವಿಷಯದ ಕುರಿತು ಗಂಭೀರ ತನಿಖೆಯಾಗಬೇಕು ಎಂದರು.




