ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದ ಮರುದಿನವೇ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಖಾಲಿ ಸೈಟ್ನ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾಗಿದ್ದು, ಅನುಮಾನ ಹುಟ್ಟು ಹಾಕಲು ಕಾರಣವಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ಅನುಮಾನದ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ, ಶಿಗ್ಗಾಂವಿ ಉಪಚುನಾವಣೆಗೂ ಮತ್ತು ಈ ಬ್ಯಾಲೆಟ್ ಬಾಕ್ಸ್ಗಳಿಗೂ ಸಂಬಂಧ ಇಲ್ಲ. ಉಪ ಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಈ ಬ್ಯಾಲೆಟ್ ಬಾಕ್ಸ್ ಗಳು ನಿರುಪಯಕ್ತವಾಗಿದ್ದವು ಎಂದರು.
ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸ್ ಗಳು ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ. ಹೀಗಾಗಿ, ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿತ್ತು ಎಂದರು.
ಹಲವು ವರ್ಷಗಳ ಹಿಂದೆಯೇ ಗೋದಾಮಿನಲ್ಲಿ ತಂದಿಡಲಾಗಿತ್ತು. ಕಿಡಿಗೇಡಿಗಳು ಬಾಕ್ಸ್ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಆದರೆ, ಸಾಗಿಸಲು ಸಾಧ್ಯವಾಗದೇ, ಕಾಲುವೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದರು.
ಬಳಕೆಯಲ್ಲಿಲ್ಲದ ಈ ಬ್ಯಾಲೆಟ್ ಬಾಕ್ಸ್ಗಳನ್ನು ಇಟ್ಟಿದ್ದ ಗೋದಾಮಿಗೆ ಭೇಟಿ ನೀಡಿದ ಪೊಲೀಸರು ಮತ್ತು ಹಾವೇರಿ ತಹಶೀಲ್ದಾರ್ ಶರಣಮ್ಮ ಪರಿಶೀಲನೆ ನಡೆಸಿದರು. ಪೊಲೀಸರು ಕಂದಾಯ ಇಲಾಖೆಯವರಿಂದ ದೂರು ಪಡೆದು ತನಿಖೆ ಮುಂದುವರೆಸಿದ್ದಾರೆ.




