ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಭಾಷ್ ನಗರ ವಾರ್ಡ್ ನಲ್ಲಿ ಜೆ.ಡಿ.ಎಸ್. ಮುಖಂಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಟಿ.ಮಲ್ಲೇಶ್ ಸ್ಲಮ್ ಪ್ರದೇಶದ ನಿವಾಸಿಗಳಿಗೆ ದಿನಸಿ ಕಿಟ್ ಮತ್ತು ಕಬ್ಬು, ಎಳ್ಳುಬೆಲ್ಲವನ್ನು ವಿತರಿಸಿದರು. ಈ ವೇಳೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತಾಡಿದ ಟಿ.ಮಲ್ಲೇಶ್, ಜೆ.ಡಿ.ಎಸ್. ಮುಖಂಡರಾದ ನಾರಾಯಣಸ್ವಾಮಿರವರ ಮಾರ್ಗದರ್ಶನದಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸುಭಾಷ್ ನಗರ ವಾರ್ಡ್ ಪ್ರದೇಶದಲ್ಲಿ ಬಡವರು, ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಬಡವರಿಗೆ ಕೂಲಿ ಕೆಲಸವಿಲ್ಲ ಮತ್ತು ಸರ್ಕಾರದಿಂದ ಯಾವುದೇ ಸಹಾಯವಿಲ್ಲ. ಬಡಜನರು ನೋವು, ಸಂಕಷ್ಟದಲ್ಲಿ ಇದ್ದಾರೆ. ಅವರ ನೋವಿಗೆ ಧ್ವನಿಯಾಗಬೇಕು, ಬಡವರ ಕಣ್ಣಿರಿಗೆ ಆಸರೆಯಾಗಿ ನಿಲ್ಲಬೇಕು ಎಂದು ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಅಚರಿಸುವಂತೆ ಬಡವರು ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಕಾಣಬೇಕು ಎಂದು ಅಕ್ಕಿ, ಅಡುಗೆ ಎಣ್ಣೆ, ಸಕ್ಕರೆ, ಗೋಧಿ ದಿನಸಿ ಸಾಮಗ್ರಿಗಳ ಕಿಟ್ ಮತ್ತು ಕಬ್ಬು, ಎಳ್ಳು, ಬೆಲ್ಲವನ್ನು ನೂರಾರು ಕುಟುಂಬಗಳಿಗೆ ವಿತರಿಸಲಾಗಿದೆ ಎಂದರು.




