ಬೀರೇಶ್ವರ ಬ್ಯಾಂಕ್ ಸಾವಳಗಿ ಶಾಖೆಯಲ್ಲಿ 1.5 ಕೋಟಿ ರೂ. ಸಾಲ ವಿತರಣೆ

4 years ago

ಬಾಗಲಕೋಟೆ: ಬೀರೇಶ್ವರ ಬ್ಯಾಂಕ್ ಸಾವಳಗಿ ಶಾಖೆಯಲ್ಲಿ ವಿವಿಧ ಯೋಜನೆಯಡಿ 1.5 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಶಾಖಾ ವ್ಯವಸ್ಥಾಪಕ ಭೀಮರಾವ್ ಶಿಂಧೆ ಹೇಳಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಸೇರಿ 153 ಶಾಖೆಗಳನ್ನು ಹೊಂದಿರುವ ಬ್ಯಾಂಕ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ಪ್ರಾರಂಭಿಸಲಾಗುವುದು. ಸಲಹಾ ಸಮಿತಿ ಅಧ್ಯಕ್ಷ ಸುಭಾಷ ಯಕ್ಸಂಬೆ, ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಬೀರೇಶ್ವರ ಬ್ಯಾಂಕ್ ಸಂಸ್ಥಾಪಕ ಅಣ್ಣಾಸಾಹೇಬ್ ಜೋಲ್ಲೆ, ಸಚಿವೆಯಾಗಿ ಸೇವೆ ಸಲ್ಲಿಸುತ್ತಿರುವ ಶಶಿಕಲಾ ಜೊಲ್ಲೆ ಇವರ ಸಾಮಾಜಿಕ ಕಳಕಳಿ ಸೇವೆ ಶ್ಲಾಘನೀಯ ಎಂದರು.

ಇತ್ತೀಚೆಗೆ ಆಕಸ್ಕಿಕವಾಗಿ ಸಾವನ್ನಪ್ಪಿದ ಬಿರೇಶ್ವರ ಬ್ಯಾಂಕಿನ ಗ್ರಾಹಕರಾದ ದುಂಡವ್ವಾ ರಾಮಪ್ಪ ಹೂಗಾರ ಮತ್ತು ಪತಿ ರಾಮಪ್ಪಾ ಸಿದ್ದಪ್ಪಾ ಹೂಗಾರ ಇವರ ಕುಟುಂಬಕ್ಕೆ ಮೆಂಬರ್ ವೆಲಫೇರ್ ಫಂಡ್ ಯೋಜನೆಯಡಿಯಲ್ಲಿ ಮಗ ಸಿದ್ದಪ್ಪನಿಗೆ ತಾಯಿ ಮೃತ  ಧನ ಸಹಾಯ 30,000, ತಂದೆಯ ಮೃತ ಧನ ಸಹಾಯ 30,000 ಸಹಾಯ ಧನ ವಿತರಿಸಿದರು. ಈ ಯೋಜನೆಯಡಿ 6 ಗ್ರಾಹಕರಿಗೆ 1,80,000 ಧನ ಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಜೀತಗೌಡ ಪಾಟೀಲ, ಸುರೇಶ ಯಕ್ಸಂಬೆ, ಬಸವರಾಜ ಹಟ್ಟಿ, ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply