ಬೆಂಗಳೂರು: ಅತ್ಯಾಚಾರ, ಹನಿಟ್ರಾಪ್, ಇಂಜೆಕ್ಷನ್ ಚುಚ್ಚುವ ಪಿತೂರಿ ಸೇರದಂತೆ ಹಲವಾರು ಗಂಭೀರ ಆರೋಪ ಪ್ರಕರಣಗಳಲ್ಲಿ ಬಂಧಿಯಾಗಿ ಜೈಲು ಸೇರಿರುವ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಮುನಿರತ್ನ ವಿರುದ್ಧದ ಮತ್ತೊಂದು ಗಂಭೀರ ಸ್ವರೂಪದ ಆರೋಪ ಕೇಳಿಬಂದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಾಸಕ ಮುನಿರತ್ನ ವಿರುದ್ಧ ಅವರದೇ ಪಕ್ಷದ ಮಹಿಳಾ ನಾಯಕಿ ಅತ್ಯಾಚಾರ ಮತ್ತು ಹನಿಟ್ರಾಪ್ ಗೆ ಬಳಕೆ ಮಾಡಿರುವ ದೂರು ಸಲ್ಲಿಸಿದ್ದಾರೆ. ಈ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಈ ತನಿಖಾ ತಂಡದ ಮುಂದೆ ಹಾಜರಾದ ಅತ್ಯಾಚಾರ ಸಂತ್ರಸ್ತೆ ಮುನಿರತ್ನ ವಿರುದ್ಧ ಹಲವು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ಬೆತ್ತಲೆ ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಮುನಿರತ್ನ ಅವರು ಆಡಳಿತದ ಶಕ್ತಿ ಕೇಂದ್ರ ಎಂದು ಕರೆಯಲಾಗುವ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಮಂತ್ರಿಗಳಿಗಾಗಿ ನಿಗದಿಪಡಿಸಿದ್ದ ಕಚೇರಿಯಲ್ಲಿನ ಆಂಟಿ ಚೇಂಬರ್ ನಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದ ಮುನಿರತ್ನ ಅವರು ಸರ್ಕಾರಿ ಕಾರಿನಲ್ಲೂ ಕೂಡ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಅತ್ಯಂತ ಸುದೀರ್ಘವಾದ ಇವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಮತ್ತೊಮ್ಮೆ ಅದನ್ನು ಮರುಪರಿಶೀಲನೆ ಮಾಡಿ ತನಿಖೆ ಮುಂದುವರಿಸಲಿದ್ದಾರೆ.




