ದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟ್ಟರ್ ಖಾತೆಗೆ ಹ್ಯಾಕರ್ ಗಳು ಕನ್ನ ಹಾಕಿದ ಘಟನೆ ನಡೆದಿದೆ. ಡಿಸೆಂಬರ್ 11ರ ಮಧ್ಯರಾತ್ರಿ 2.24ರ ವೇಳೆಗೆ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಯಿತು.
The Twitter handle of PM @narendramodi was very briefly compromised. The matter was escalated to Twitter and the account has been immediately secured.
In the brief period that the account was compromised, any Tweet shared must be ignored.
— PMO India (@PMOIndia) December 11, 2021
ಈ ಟ್ವೀಟ್ ನಲ್ಲಿ ದೇಶ, ಬಿಟ್ ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದೆ. ಸರ್ಕಾರವೇ ಅಧಿಕೃತವಾಗಿ 500 ಬಿಟ್ ಕಾಯಿನ್ ಗಳನ್ನು ಖರೀದಿಸಿದ್ದು, ದೇಶದ ನಾಗರಿಕರಿಗೆ ಹಂಚಲಾಗುವುದು ಎಂದು ಹೇಳಲಾಗಿತ್ತು. ಮೋದಿಯವರ ಟ್ವೀಟ್ ಖಾತೆಯಲ್ಲಿ ಈ ವಿಷಯ ಪೋಸ್ಟ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿತ್ತು.
ಈ ಘಟನೆ ನಡೆದ ಒಂದೇ ಗಂಟೆಯ ನಂತರ ಪ್ರಧಾನಿ ಕಾರ್ಯಾಲಯ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಪ್ರಧಾನಿ ಟ್ವೀಟ್ ಖಾತೆ ಹ್ಯಾಕ್ ಆಗಿತ್ತು, ಈಗ ಸರಿಯಾಗಿದೆ, ಆಗ ಮಾಡಿದ್ದ ಟ್ವೀಟ್ ನಿಜವಲ್ಲ ಎಂದಿದೆ. ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಖಾತೆಯೇ ಹ್ಯಾಕ್ ಆಗುವುದಾದರೆ ಇನ್ನುಳಿದವರ ಕತೆ ಏನು? ಸುರಕ್ಷಿತತೆಯ ಮಟ್ಟವೇನು? ಎಂಬಿವೆ ಪ್ರಶ್ನೆಗಳು ಇದೀಗ ಎದುರಾಗಿವೆ.




