ಕುಡಿಯುವ ನೀರಿನ ನಿಷೇಧ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಜಲ ಸ್ವಾತಂತ್ರ್ಯ ಕೃತಿ ಬಿಡುಗಡೆ ಸಮಾರಂಭ
ಬೆಂಗಳೂರು: ಪುಟ್ಟಣ್ಣಚೆಟ್ಟಿ ಟೌನ್ ಹಾಲ್ ಸಭಾಂಗಣದಲ್ಲಿ ಗಂಗಾಧರ್ ಮಾವಳ್ಳಿ ರಚಿತ ಜಲ ಸ್ವಾತಂತ್ರ್ಯ ಕೃತಿ ಬಿಡುಗಡೆ ಸಮಾರಂಭ
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ದೀಪ ಬೆಳಗಿಸಿ ಕೃತಿ ಬಿಡುಗಡೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಡಿ.ವೈ.ಎಸ್.ಪಿ ಮಹಾನಂದ, ಲೇಖಕರು, ವಿಚಾರವಾದಿಗಳಾದ ಪ್ರೊ.ಅಬ್ದುಲ್ ರೆಹಮಾನ್, ಬಿಬಿಎಂಪಿ ಜಂಟಿ ಆಯುಕ್ತರಾದ ಲಕ್ಷ್ಮಿದೇವಿ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಎ.ಅಮೃತ್ ರಾಜ್, ಉಪ ಆಯುಕ್ತ ಡಿ.ಕೆ.ಬಾಬು, ಬಿಎಂಟಿಎಫ್ ತಹಶೀಲ್ದಾರ್ ಬಿ.ರಾಜಶೇಖರ್ ಮೂರ್ತಿ,(ನಾಗ ಸಿದ್ದಾರ್ಥ ಹೊಲೆಯರ್), ಸ್ಯಾಮ್ ಆಡಿಯೊ ಸಿದ್ದಾರ್ಥ ಆನಂದ್ ಮೂಲೂರು, ಪೌರ ಕಾರ್ಮಿಕ ಮುಖಂಡ ಬಾಬು, ವಕೀಲರಾದ ಹರಿರಾಮ್, ನವೀನ್ ಮತ್ತು ಕೆ.ಜಿ.ರವಿ, ಲೋಹಿತ್ ನಾಯಕ್ ರವರು, ಕೃತಿಯ ಲೇಖಕರಾದ ಗಂಗಾಧರ್ ಮಾವಳ್ಳಿರವರು ಕಾರ್ಯಕ್ರಮ ಉದ್ಘಾಟನೆ ಮಾಡಿ, ಕೃತಿ ಬಿಡುಗಡೆಗೊಳಿಸಿದರು.
ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಕೃತಿ ಬರೆಯಬೇಕು ಎಂದರೆ ಮಗು ಜನನವಾದಂತೆ, ಓದುಗರು ಸುಲಭವಾಗಿ ಪರ, ವಿರೋಧ ಮಾತನಾಡಬಹುದು. ಕೃತಿ ಬರೆಯಲು ಲೇಖಕನಿಗೆ ಜೀವಂತಿಕೆ ಇರಬೇಕು. 40 ವರ್ಷಗಳ ಹಿಂದೆ ಇದ್ದ ಜೀವನಶೈಲಿ ಇಂದಿನ ಜೀವನಶೈಲಿಯ ಕುರಿತು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೀರು ಬಳಸಲು ನಿಷೇಧ ಮಾಡುವ ಧರ್ಮ, ಧರ್ಮವೆ. ಬೆಳಕು, ಗಾಳಿ ಅವರ ಹತೋಟಿಯಲ್ಲಿ ಇದ್ದಿದ್ದರೆ ನಮಗೆ ಕೊಡುತ್ತಿರಲಿಲ್ಲ. ಮನೆಗಳಲ್ಲಿ ಮಕ್ಕಳಿಗೆ ಅಂಬೇಡ್ಕರ್ ಜೀವನ ಚರಿತ್ರೆ ತಿಳಿಸಿಕೊಡಬೇಕು, ಊರಿನ ಹೊರಗೆ ಇದ್ದ ನಮಗೆ, ಊರಿನ ಒಳಗೆ ಬರಲು ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣವಾಯಿತು. ಕುಡಿತ ಬಿಡಿ, ವಿದ್ಯಾವಂತರಾಗಿ ತಿಳಿಸಿದರು.
ಬಾಬ್ ಸಾಹೇಬ್ ಅಂಬೇಡ್ಕರ್ ಸಾಗಿದ ದಾರಿಯೆ ನಮಗೆಲ್ಲ ಪುಣ್ಯ ಕ್ಷೇತ್ರವಾಗಬೇಕು. ಇತಿಹಾಸವನ್ನು ವೈದಿಕ ಸಂತತಿಯವರು ಮುಚ್ಚಿಟ್ಟಿದ್ದರು. ಸಿಂಹಗಳ ಚರಿತ್ರೆ, ಸಿಂಹಗಳೆ ಬರೆಯಬೇಕು. ರಾಜಸ್ಥಾನ ದಲಿತ ಸಮುದಾಯ ಕುಡಿಯುವ ನೀರಿಗಾಗಿ ಮತ್ತು ರಾಮನಗರದಲ್ಲಿ ದಲಿತ ಮಹಿಳೆ ಕುಡಿಯುವ ನೀರು ಹಿಡಿಯಲು ಹೋದಾಗ ಕೊಡದ ನೀರು ಮೇಲ್ವರ್ಗ ಜಾತಿಯವರಿಗೆ ನೀರು ಬಿಟ್ಟರು ಎಂದು ದಂಡ ವಿಧಿಸಿದರು. ಇದನ್ನ ಮಹಿಳೆ ವಿರೋಧಿಸಿದರು. ನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು. ಇದರ ವಿರುದ್ಧ ನಾವು ಹೋರಾಟ ಮಾಡಿದ ಪ್ರತಿಫಲ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿತ್ತು. ಇಂದು ಸಹ ಸಮಾಜದಲ್ಲಿ ಜಾತಿವಾದ ಅಸ್ಪೃಶ್ಯತೆ ತಾಂಡವಾಡುತ್ತಿದೆ ಎಂದರು.




