ಈಗ ಯಾವ ನೆರೇಟಿವ್ ಸೆಟ್ ಮಾಡಲಾಗುತ್ತಿದೆಯೋ ಅದು ಮೋಸದ ಸಿದ್ಧತೆಯೂ ಆಗಿರಬಹುದು

2 years ago

ನಾಡಿದ್ದಿನ ಫಲಿತಾಂಶ ನಿನ್ನೆಯ Exit Poll ರೀತಿಯಲ್ಲಿಯೇ ಇರಲೂ ಬಹುದು. ಅದು ಬೇರೆ ವಿಚಾರ. ಆದರೆ ಈ Exit Poll, Opinion Poll ವಿಚಾರದಲ್ಲಿ ಫಲಿತಾಂಶ ಊಹಿಸುವ ಸಂಸ್ಥೆಗಳ ವಿಶ್ವಾಸಾರ್ಹತೆಯೇನು? ಅವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುತ್ತಿವೆಯೇ? ಸಮೀಕ್ಷೆಯ Sample size ಎಷ್ಟು? ಸಮೀಕ್ಷೆ ಫೀಲ್ಡ್ ನಲ್ಲಿ ನಡೆಸಿದ್ದೇ, ಟಿವಿ ಸ್ಟುಡಿಯೋ ದಲ್ಲಿಯೇ, ಎಂದು ಜನರು ಪ್ರಶ್ನಿಸಿದ್ದಿದೆಯೇ?

ಉದಾಹರಣೆಗೆ ಈ ಪ್ರದೀಪ ಭಂಡಾರಿ ‘ಜನ ಕಿ ಬಾತ್’ ಹೆಸರಿನಲ್ಲಿ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಬಗ್ಗೆ ಮಾಡಿದ ಊಹೆ ನೋಡಿ. ಇದನ್ನು ಸುವರ್ಣ ವಾಹಿನಿ ಅಜಿತ ಮತ್ತು ನಾಥೂ ಪೌರೋಹಿತ್ಯದಲ್ಲಿ ಅತ್ಯಂತ ಖುಷಿಯಿಂದ ಪ್ರಸಾರ ಮಾಡಿತ್ತು.  ಈ ಮನುಷ್ಯನ ಊಹೆ ಯಾವತ್ತೂ ಬಿಜೆಪಿ ಪರವೇ ಇರುತ್ತದೆ. ಬಂಗಾಳದಲ್ಲಿಯೂ ಹಾಗೇ ಇತ್ತು.

ನಿನ್ನೆಯೂ ಇದೇ ಮನುಷ್ಯ 400 ರ ವರೆಗೆ  ಬಿಜೆಪಿಗೆ ಸೀಟು ಘೋಷಿಸಿದ್ದು ಮಾಧ್ಯಮಗಳ ಡಿಬೇಟ್ ಸಮಯದಲ್ಲಿ ಈ ಅಂಕಿ ಅಂಶವನ್ನೂ  ಪ್ರಸ್ತಾವಿಸಲಾಗಿದೆ! ಅತ್ಯಂತ ವಿಶ್ವಾಸಾರ್ಹ ಎನ್ನುವ‌ Axis My India ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಅಂದಿತ್ತು. ಮತ ಎಣಿಕೆ ನಡೆದಾಗ ಬಿಜೆಪಿಗೆ ನೂರು ಸ್ಥಾನವೂ ಬಂದಿರಲಿಲ್ಲ. ಈಗ ಯಾವ ನೆರೇಟಿವ್ ಸೆಟ್ ಮಾಡಲಾಗುತ್ತಿದೆಯೋ ಅದು ನಾಡಿದ್ದು ಮಾಡಬಯಸುವ ಮೋಸದ ಸಿದ್ಧತೆಯೂ ಆಗಿರಬಹುದು.

ಪಶ್ಚಿಮ ಬಂಗಾಳ ವಿಧಾನಸಭೆ ಎಕ್ಸಿಟ್ ಪೋಲ್

ಅದೇನೇ ಇರಲೀ ಜೂನ್ 4 ರ ಫಲಿತಾಂಶ ಬಹುಮಟ್ಟಿಗೆ ನಿಜವಿರುತ್ತದೆ. ಆನಂತರವೂ ಜನ ಹೋರಾಟ ಹೇಗೂ ನಡೆಯುತ್ತಲೇ ಇರುತ್ತದೆ. ನ್ಯಾಯಾಲಯಗಳಲ್ಲಿಯೂ ಹೋರಾಟ ನಡೆಯುತ್ತದೆ. ಅಂತಿಮ ಸತ್ಯ ಏನೆಂದರೆ, ಇಲ್ಲಿ ಯಾರೂ ಯಾವುದೂ ಶಾಶ್ವತ ಅಲ್ಲ. ನಾನು ಅನಿವಾರ್ಯ ಎಂದು ಅಬ್ಬರಿಸಿದ ಸರ್ವಾಧಿಕಾರಿಗಳ ಸಮಾಧಿಗಳಿಂದ ಜಗತ್ತಿನ ಸ್ಮಶಾನಗಳು ತುಂಬಿ ಹೋಗಿವೆ.

– ಶ್ರೀನಿವಾಸ್ ಕಾರ್ಕಳ, ಸಾಮಾಜಿಕ ಹೋರಾಟಗಾರರು

Leave a Reply