ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನಿರೂಪಣಾ ಕಾರ್ಯಾಗಾರ

2 years ago

ಬೆಂಗಳೂರು: ವಿಜಯ ಕಾಲೇಜು, ಆರ್.ವಿ ರಸ್ತೆ, ಬಸವನಗುಡಿ, ಬೆಂಗಳೂರು ಇಲ್ಲಿ ವಿದ್ಯಾರ್ಥಿಗಳಿಗಾಗಿ “ನಾನೇಕೆ ನಿರೂಪಕನಾಗಬಾರದು” ಎಂಬ ವಿಷಯನ್ನಾಧರಿಸಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನುಪ್ರಥಮ ಬಾರಿಗೆ ನಡೆಸಲಾಯಿತು.

ನೋಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿದ್ದ ಈ ಕಾರ್ಯಾಗಾರದಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ವಿಜಯ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಶಾಂತರಾಜು, ವಿಜಯ ಕಾಲೇಜಿನ ಉಪ ಪ್ರಾಂಶುಪಾಲ ಮತ್ತು ಇಂಗ್ಲಿಷ್ ಅಧ್ಯಾಪಕ ಎನ್.ಜಿ.ನರಸಿಂಹನ್, ನಟ ಡಾ.ಎ.ಆರ್ ಗೋವಿಂದಸ್ವಾಮಿ ಕಾರ್ಯಾಗಾರನಡೆಸಿಕೊಟ್ಟರು.

ಈ ಕಾರ್ಯಾಗಾರದಲ್ಲಿ ನಿರೂಪಕನಾಗಬೇಕಾದರೆ ಇರಬೇಕಾದ ಅರ್ಹತೆಗಳು, ಜವಾಬ್ದಾರಿಗಳು, ವಿಷಯ ಗ್ರಹಿಕೆಮತ್ತು ತಾಂತ್ರಿಕ ಅಂಶಗಳ ಅರಿವು ಹೇಗಿರಬೇಕೆಂಬುದನ್ನು ವಿವರಿಸಿ ಪ್ರಯೋಗಾತ್ಮಕವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದಷ್ಟೆ ಅಲ್ಲದೇತರಬೇತಿಯನ್ನು ನೀಡಲಾಯಿತು. ಈ ರೀತಿಯ ಕಾರ್ಯಾಗಾರ ಕಾಲೇಜು ಮಟ್ಟದಲ್ಲಿ ನಡೆದದ್ದುಇದೇ ಮೊದಲು ಎಂದರೆ ತಪ್ಪಾಗಲಾರದು.

ಈ ಕಾರ್ಯಾಗಾರವನ್ನು ಬಹಳಅಚ್ಚು ಕಟ್ಟಾಗಿ ಆಯೋಜಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ.ಎಸ್.ಶೈಲಜಾ ಹಾಗೂ ಸಂಚಾಲಕರಾದ ವಿದ್ವಾನ್ ಹೆಚ್.ಎನ್ ಸುರೇಶ್ ಅವರ ಜೊತೆಯಲ್ಲಿ ಸಾಂಸ್ಕೃತಿಕ ತಂಡದ ಎಲ್ಲ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಿದರು.

Leave a Reply