ನಿಗೂಢ ಕಾಯಿಲೆ: 165 ಮಕ್ಕಳು ಸಾವು

5 years ago

ಕಿನ್ಶಾಸಾ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ನೈರುತ್ಯ ಭಾಗದ ಗುಂಗು ಪ್ರದೇಶದಲ್ಲಿ 2 ತಿಂಗಳಲ್ಲಿ ಕನಿಷ್ಠ 165 ಮಕ್ಕಳು ಅಜ್ಞಾತ ರೋಗಕ್ಕೆ ಬಲಿಯಾಗಿದ್ದಾರೆ. 2021ರ ಆಗಸ್ಟ್ ಕೊನೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ರೋಗ ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹಲವು ವರದಿಗಳು ಸೂಚಿಸಿವೆ. ಮಲೇರಿಯಾ ಚಿಹ್ನೆಗಳು ರೋಗಪೀಡಿ ಮಕ್ಕಳಲ್ಲಿ ಕಂಡುಬಂದಿವೆ ಎಂದು ಪ್ರಾಂತೀಯ ಆರೋಗ್ಯ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

Leave a Reply