ವಾಟ್ಸಾಪ್, FB ಕ್ರ್ಯಾಶ್: ಶ್ರೀಮಂತನಿಗೆ ಶಾಕ್!

5 years ago

ದೆಹಲಿ: ವಾಟ್ಸಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳು 4/10/2021ರ ಸಂಜೆ ಸ್ಥಗತಿವಾಗಿದ್ದರಿಂದ ಮಾರ್ಕ್ ಜುಕರ್ ಬರ್ಗ್ ವೈಯಕ್ತಿಕ ಸಂಪತ್ತಿನಲ್ಲಿ 7 ಬಿಲಿಯನ್ ಡಾಲರ್ ಕುಸಿತವಾಗಿದೆ ಎಂದು ಬ್ಲೂಮ್ ಬರ್ಗ್ನ ಸ್ಕಾಟ್ ಕಾರ್ಪೆಂಟರ್ ವರದಿ ಹೇಳಿದೆ.

ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಮೆಸೆಂಜರ್ನಂತಹ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್ಗಳು ನಿನ್ನೆ ಸಂಜೆ ಜಾಗತಿಕ ಮಟ್ಟದಲ್ಲಿ ಸ್ಥಗಿತವಾಗಿದ್ದವು. ಈ ಹಿನ್ನೆಲೆಯಲ್ಲಿ ಫೇಸ್ಬುಕ್ ಇಂಕ್ ನೆಟ್ವರ್ಕ್ನಿಂದ ಜಾಹೀರಾತನ್ನು ವಾಪಸ್ ಪಡೆದಿದ್ದು, ಬರೋಬ್ಬರಿ 121.6 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಜುಕರ್ಬರ್ಗ್ ಬಿಲ್ ಗೇಟ್ಸ್ ಗಿಂತ ಅವರಿಗಿಂತ ಹಿಂದುಳಿದಿದ್ದಾರೆ.

ಜುಕರ್ ಬರ್ಗ್ ಬ್ಲೂಮ್ ಬರ್ಗ್ನ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿ ಇದ್ದರು. ಬ್ಲೂಮ್ಬರ್ಗ್ ಪ್ರಕಾರ, ಫೇಸ್ಬುಕ್ನ ಸ್ಟಾಕ್ಗಳು ಸೋಮವಾರ ಶೇಕಡ 5 ರಷ್ಟು ಕುಸಿದಿವೆ. ಸೆ. ಮಧ್ಯಭಾಗದಿಂದ ಶೇ.15ರಷ್ಟು ಇಳಿದಿವೆ.

ನಿನ್ನೆ ಸಂಜೆ ವಾಟ್ಸಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದ ಕಾರಣ ಲಕ್ಷಾಂತರ ಬಳಕೆದಾರರು ಪರದಾಡಿ, ಕಡೆಗೆ ಟ್ವೀಟರ್ ಮೊರೆಹೋದರು. ಅಲ್ಲಿ ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ ಹ್ಯಾಷ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ್ದ ಫೇಸ್ ಬುಕ್, ನಮ್ಮ ಅಪ್ಲಿಕೇಶನ್ಗಳು ಮತ್ತು ಉತ್ಪನ್ನಗಳನ್ನು ಪ್ರವೇಶಿಸಲು ಕೆಲವಗೆ ತೊಂದರೆಯಾಗಿದೆ ಎಂದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಯಾವುದೇ ಅನಾನುಕೂಲಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಫೇಸ್ಬುಕ್ ಸಂವಹನ ಕಾರ್ಯನಿರ್ವಾಹಕ ಆಂಡಿ ಸ್ಟೋನ್ ಟ್ವೀಟ್ ಮಾಡಿದ್ದರು.

ವಾಟ್ಸಪ್ ಸ್ಥಗಿತವಾದ ಕುರಿತು ಸಂಶೋಧನೆ ಮಾಡುವ ವೆಬ್ಸೈಟ್ ಡೌನ್ಟೆಕ್ಟರ್ ಪ್ರಕಾರ, ಶೇ .40 ರಷ್ಟು ಬಳಕೆದಾರರಿಗೆ ಆಪ್, ಡೌನ್ಲೋಡ್ ಮಾಡಲು ಸಾಧ್ಯವಾಗಲಿಲ್ಲ, ಶೇ.30ರಷ್ಟು ಜನರಿಗೆ ಸಂದೇಶ ಕಳುಹಿಸಲಾಗಿರಲಿಲ್ಲ ಹಾಗೂ ಶೇ.22 ರಷ್ಟು ಜನರಿಗೆ ಅಂತರ್ಜಾಲದಲ್ಲಿ ಸಮಸ್ಯೆಯಾಗಿತ್ತು.

Leave a Reply