ಬೆಂಗಳೂರು: “ನಾವೇನು 5, 6 ಸೀಟು ಕೇಳುತ್ತಿದ್ದೇವಾ, 3 ಕ್ಷೇತ್ರ ಕೇಳುತ್ತಿದ್ದೇವೆ ಅಷ್ಟೇ, 2 ಕ್ಷೇತ್ರ ಪಡೆಯುವುದಕ್ಕೆ ಬಿಜೆಪಿಯವರ ಹತ್ತಿರ ಬರಬೇಕಿತ್ತಾ“ ಎಂದು ಕುಮಾರಸ್ವಾಮಿಯವರು ಗೋಳಾಡುತ್ತಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಅಸಮಾಧಾನ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಕ್ಷೇತ್ರ ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ H D Kumaraswamy ಅವರು ತಮ್ಮ ಪಕ್ಷದ ಇತರ ನಾಯಕರ ಕುರಿತು ಯೋಚಿಸುವುದುಂಟೇ! ಎಂದಿದೆ.
ಇವರು ಕೇಳುತ್ತಿರುವ 3 ಕ್ಷೇತ್ರ ತಮ್ಮ ಫ್ಯಾಮಿಲಿಗೆ ಮಾತ್ರ, ಕಾರ್ಯಕರ್ತರು, ಇತರ ನಾಯಕರು ರಾಜಕೀಯ ಸನ್ಯಾಸ ಸ್ವೀಕರಿಸುವುದೇ ಉತ್ತಮ. ಜೆಡಿಎಸ್ ನಂಬಿಕೊಂಡಿರುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಭವಿಷ್ಯವಿಲ್ಲ ಎನ್ನುವುದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಷ್ಟೇ ಸತ್ಯ ಎಂದಿದೆ.




