ಬೆಂಗಳೂರು: ರಂಗಸಮುದ್ರ, ಕಾವ್ಯಮಂಡಲ ಮತ್ತು ಜನಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ದಿನಾಂಕ 11/03/2021ರಂದು ಕಾವ್ಯಶಿವರಾತ್ರಿಯನ್ನು ಆಯೋಜಿಸಲಾಗಿದೆ. ರಾಜ್ಯಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ ಮತ್ತು ಬಂಗಾರಶಿಟ್ಟಿ ತಂಡದವರು ಜನಪದ ಮಹಾಕಾವ್ಯಗಳಾದ ಮಂಟೇಸ್ವಾಮಿ ಮಲೆ ಮಾದೇಶ್ವರ ಮಹಾಕಾವ್ಯಗಳನ್ನು ಹಾಡಲಿದ್ದಾರೆ.

ಸ್ವಾಗತ: ಹೋ.ಬೋ. ಪುಟ್ಟೇಗೌಡ ಅಧ್ಯಕ್ಷರು, ರಂಗ ಸಮುದ್ರ
ಕಾವ್ಯ ಶಿವರಾತ್ರಿ ಪ್ರಸ್ತಾವನೆ: ಡಾ. ಕೆ.ಸಿ. ಶಿವಾರೆಡ್ಡಿ, ಮುಖ್ಯಸ್ಥರು, ಡಾ. ರಾಜಕುಮಾರ ಕನ್ನಡ ಅಧ್ಯಯನ ಕೇಂದ್ರ ಕ.ವಿ.ವಿ., ಹಂಪಿ ವಿಸ್ತರಣಾ ಕೇಂದ್ರ, ಬೆಂಗಳೂರು
ಕಾವ್ಯಶಿವರಾತ್ರಿ ಉದ್ಘಾಟನೆ: ಶೂದ್ರ ಶ್ರೀನಿವಾಸ್, ಸಂಸ್ಕೃತಿ ಚಿಂತಕರು
ಅಧ್ಯಕ್ಷತೆ: ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಕವಿಗಳು
ಉಪಸ್ಥಿತಿ: ಡಾ. ಕೆ.ಎನ್. ಕವನ, ಸಹಾಯಕ ನಿರ್ದೆಶಕರು, ವಾರ್ತಾ ಮತ್ತು ಪ್ರಸಾರ ಇಲಾಖೆ
ಡಾ. ಹನುಮಂತಪ್ಪ ಸಿ.ಎಸ್., ಅಧ್ಯಕ್ಷರು, ಮಿದುಳತ್ವ ಸಂಸ್ಥೆ, ಬೆಂಗಳೂರು
ನವೀನ್ ಬಿಡದಿ, ಮಾಲೀಕರು, ಡಿ.ಸಿ. ಗ್ರೂಪ್ ವಿಜಯಕುಮಾರ್, ಮಾಲೀಕರು, ಶಿವಶ್ರೀ ಗ್ರೂಪ್
ವಂದನಾರ್ಪಣೆ: ಡಾ. ಪ್ರದೀಪ್ ಮಾಲ್ಗುಡಿ ಅಧ್ಯಕ್ಷರು, ಜನಸಂಸ್ಕೃತಿ ಪ್ರತಿಷ್ಠಾನ
ಕಾರ್ಯಕ್ರಮವು ಬೆಂಗಳೂರಿನ ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ 11 ಮಾರ್ಚ್ 2021 ಗುರುವಾರ ಸಂಜೆ 6 ಗಂಟೆ ಆರಂಭವಾಗಿ 12 ಮಾರ್ಚ್ 2021ರ ಬೆಳಿಗ್ಗೆ 6 ರವರೆಗೆ ನಡೆಯಲಿದೆ.
ಇದೇ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದ್ದು, ಅಧ್ಯಕ್ಷತೆಯನ್ನು ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಹಿಸಿಕೊಳ್ಳಿದ್ದಾರೆ. ಕವಿಗೋಷ್ಠಿಯಲ್ಲಿ ಮುದಲ್ ವಿಜಯ್, ಡಾ. ಬ್ಯಾಡರಹಳ್ಳಿ ಶಿವರಾಜ್, ಉದಂತ ಶಿವಕುಮಾರ್, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ನಿರ್ಮಲಾ ನಾದನ್, ರಘು ಬೆಟ್ಟಳ್ಳಿ, ಗೀತಾ ಹೆಗಡೆ, ಶಶಿಕಾಂತ್ ರಾವ್, ವೆಂಕಟೇಶ್ ಆರ್. ದಾಸ್, ಗುರುನಾಥ ಬೋರಗಿ, ಪುಷ್ಪ ಹೆಚ್.ಡಿ., ರಮೇಶ್ ಚಂದ್ರ, ಶ್ರೀಧರ ಹೊಳಲಕೆರೆ, ಜಯಶಂಕರ ಪ್ರಕಾಶ್, ತಲಕಾಡು ಶ್ರೀನಿಧಿ, ಡಾ.ಭಾಗ್ಯ, ಚಂದ್ರಶೇಖರ ಗುಪ್ತ, ಎಸ್.ವಿ. ಮಠಪತಿ, ರಾಜೇಶ್ವರಿ ಚಲುವಯ್ಯ, ಇಂದ್ರಾಣಿ ಪ್ರಕಾಶ್, ಮುಕ್ತಶ್ರೀ, ಕೃಷ್ಣಪ್ಪ ಬಿ.ಎಂ.ಟಿ.ಸಿ., ಮಯ ಬ್ರಹ್ಮಾಚಾರ್, ಲಲಿತರಾಜು, ಟಿ. ರಮೇಶ್, ಬಸವರಾಜ್ ಕಲ್ಲುಸಕ್ಕರೆ, ಆನೇಕಲ್ ಭೈರಪ್ಪ ಭಾಗವಹಿಸಲಿದ್ದಾರೆ.
ಕಾವ್ಯಶಿವರಾತ್ರಿ ಕುರಿತು
ಪ್ರೊ ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.
ಕಿರಂ ಸಾಹಿತ್ಯ ಲೋಕಕ್ಕೆ ಗುಂಗು ಹಿಡಿಸಿದ ಮಂಟೇಸ್ವಾಮಿ ಮತ್ತು ಮಲೆಮಾದೇಶ್ವರ ಕಾವ್ಯಗಳನ್ನು ದೊಡ್ಡಗವಿ ಬಸಪ್ಪ ಮತ್ತು ತಂಡ ನಿರಂತರವಾಗಿ ಕಾವ್ಯಶಿವರಾತ್ರಿಯಲ್ಲಿ ಹಾಡುತ್ತಿದ್ದಾರೆ. ಶ್ರೀಯುತರಿಗೆ ಕಾವ್ಯ ಶಿವರಾತ್ರಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಹಾಗೆ ದೊಡ್ಡಗವಿ ಬಸಪ್ಪನವರಿಗೆ 2019ರಲ್ಲಿ ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಯುತರು ಈ ವರ್ಷವು ಅಹೋರಾತ್ರಿ ಕಾವ್ಯವನ್ನು ಹಾಡಲಿದ್ದಾರೆ.
ಈ ವರ್ಷ ಜನಸಂಸ್ಕೃತಿ ಪ್ರತಿಷ್ಠಾನವು ರಂಗಸಮುದ್ರ ರಾಜರಾಜೇಶ್ವರಿನಗರ, ಬೆಂಗಳೂರು ಇವರ ಸಹಯೋಗದೊಂದಿಗೆ ಕಾವ್ಯ ಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.




