ಕಾಟನ್ ಕ್ಯಾಂಡಿ ರಾಜ್ಯದಲ್ಲಿ ಬ್ಯಾನ್ ಆಗುವ ಸಾಧ್ಯತೆ

2 years ago

ಬೆಂಗಳೂರು: ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಟನ್ ಕ್ಯಾಂಡಿ ರಾಜ್ಯದಲ್ಲಿ ಬ್ಯಾನ್ ಆಗುವ ಸಾಧ್ಯತೆಗಳಿವೆ. ಮಕ್ಕಳ ಅತ್ಯಂತ ಇಷ್ಟವಾದ ಈ ತಿಂಡಿ ತಯಾರಿಸಲು ಅತಿಯಾದ ಬಣ್ಣ ಹಾಗೂ ರಾಸಾಯನಿಕ ಬೆರಕೆ ಹೊಂದಿರುವ ಸಕ್ಕರೆ ಬಳಸಲಾಗುತ್ತದೆ. ಇದರಿಂದ ಅದನ್ನು ಸೇವಿಸುವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ತಮಿಳುನಾಡು ಮತ್ತು ಗೋವಾದಲ್ಲಿ ಈಗಾಗಲೇ ಇದನ್ನು ನಿಷೇಧಿಸಲಾಗಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಮಾರಾಟ ಮಾಡುವ ಕಾಟನ್ ಕ್ಯಾಂಡಿ ಮಾದರಿಯನ್ನು ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈ ವರದಿ ಕಾಟನ್ ಕ್ಯಾಂಡಿ ಯಲ್ಲಿ ರೋಡಮೈನ್-ಬಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು ತಿಳಿಸಿದೆ. ಈ ರಾಸಾಯನಿಕ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ರೋಗಗಳು ಬರುತ್ತವೆ ಎಂಬ ಅಂಶ ದೃಢಪಟ್ಟಿರುವುದರಿಂದ ಕಾಟನ್ ಕ್ಯಾಂಡಿ ನಿಷೇಧಕ್ಕೆ ಸರ್ಕಾರ ಮುಂದಾಗಿದೆ.

Leave a Reply