ವೈರಲ್ ಮಾಡಲಾಗಿರುವ ಪೋಸ್ಟ್ ನಕಲಿ. ಇಲ್ಲಿದೆ ನಕಲಿ ಮತ್ತು ಅಸಲಿ ಕತೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ನಲ್ಲಿ ಇರುವುದೇನು?

“ಮೋದಿಯ ಎರಡನೇ ಹೊಡೆತ ಬರಲಿದೆ, 30-A ಕಾಯಿದೆಯನ್ನು ರದ್ದುಗೊಳಿಸಬಹುದು. ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿ ಜಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.
ನೀವು “ಕಾನೂನು 30” ಮತ್ತು ಕಾನೂನು “30A” ಬಗ್ಗೆ ಕೇಳಿದ್ದೀರಾ? ಹಿಂದಿಯಲ್ಲಿ “30A” ಎಂದರೆ ಏನು ಎಂದು ನಿಮಗೆ ತಿಳಿದಿದೆಯೇ? ಇನ್ನಷ್ಟು ತಿಳಿದುಕೊಳ್ಳಲು ತಡಮಾಡಬೇಡಿ.

30-ಎ ಸಂವಿಧಾನದಲ್ಲಿ ಒಳಗೊಂಡಿರುವ ಕಾನೂನು. ನೆಹರೂ ಈ ಕಾನೂನನ್ನು ಸಂವಿಧಾನದಲ್ಲಿ ಸೇರಿಸಲು ಪ್ರಯತ್ನಿಸಿದಾಗ, ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಬಲವಾಗಿ ವಿರೋಧಿಸಿದರು.
ಸರ್ದಾರ್ ಪಟೇಲ್ ಹೇಳಿದರು, “ಈ ಕಾನೂನು ಹಿಂದೂಗಳಿಗೆ ದ್ರೋಹ, ಆದ್ದರಿಂದ ಈ ಕಾನೂನನ್ನು ಸಂವಿಧಾನಕ್ಕೆ ತಂದರೆ, ನಾನು ಅದರ ವಿರುದ್ಧ ಕ್ಯಾಬಿನೆಟ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಅಂತಿಮವಾಗಿ ನೆಹರೂ ಸರ್ದಾರ್ ಪಟೇಲರ ಆಶಯಕ್ಕೆ ತಲೆಬಾಗಬೇಕಾಯಿತು.
ಆದರೆ ದುರದೃಷ್ಟವಶಾತ್ ಗೊತ್ತಿಲ್ಲ. ಈ ಘಟನೆ ನಡೆದ ಕೆಲವೇ ತಿಂಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಠಾತ್ತನೆ ಸಾವನ್ನಪ್ಪಿದ್ದಾರಾ? ಸರ್ದಾರ್ ಪಟೇಲರ ಮರಣದ ನಂತರ, ನೆಹರು ತಕ್ಷಣವೇ ಈ ಕಾನೂನನ್ನು ಸಂವಿಧಾನದಲ್ಲಿ ಸೇರಿಸಿದರು.
30-A ಎಂದರೇನು, ಅದರ ವೈಶಿಷ್ಟ್ಯಗಳನ್ನು ನಾನು ನಿಮಗೆ ಹೇಳುತ್ತೇನೆ!
ಈ ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ “ಹಿಂದೂ ಧರ್ಮ” ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ. “ಆಕ್ಟ್ 30-A” ಅವನಿಗೆ ಅವಕಾಶ ನೀಡುವುದಿಲ್ಲ ಅಥವಾ ಅಧಿಕಾರ ನೀಡುವುದಿಲ್ಲ…..
ಆದ್ದರಿಂದ ಹಿಂದೂಗಳು ತಮ್ಮ ಖಾಸಗಿ ಕಾಲೇಜುಗಳಲ್ಲಿ ಹಿಂದೂ ಧರ್ಮವನ್ನು ಕಲಿಸಬಾರದು. ಹಿಂದೂ ಧರ್ಮವನ್ನು ಕಲಿಸಲು ಕಾಲೇಜುಗಳನ್ನು ಪ್ರಾರಂಭಿಸಬಾರದು. ಹಿಂದೂ ಧರ್ಮವನ್ನು ಕಲಿಸಲು ಹಿಂದೂ ಶಾಲೆಗಳನ್ನು ಪ್ರಾರಂಭಿಸಬಾರದು. ಕಾಯಿದೆ 30-ಎ ಅಡಿಯಲ್ಲಿ ಸಾರ್ವಜನಿಕ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಲಿಸಲು ಯಾರಿಗೂ ಅವಕಾಶವಿಲ್ಲ.
ಇದು ವಿಚಿತ್ರವೆನಿಸುತ್ತದೆ, (30-A) ನೆಹರು ತಮ್ಮ ಸಂವಿಧಾನದಲ್ಲಿ ಮತ್ತೊಂದು ಕಾನೂನನ್ನು ಮಾಡಿದರು “ಕಾನೂನು 30”. ಈ “ಕಾನೂನು 30” ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್, ಸಿಖ್, ಕ್ರಿಶ್ಚಿಯನ್ ಧಾರ್ಮಿಕ ಶಾಲೆಗಳನ್ನು ಪ್ರಾರಂಭಿಸಬಹುದು. ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು ಕಲಿಸಬಹುದು.
ಕಾನೂನು 30 ಮುಸ್ಲಿಮರಿಗೆ ತಮ್ಮದೇ ಆದ ‘ಮದ್ರಸಾ’ ಪ್ರಾರಂಭಿಸಲು ಸಂಪೂರ್ಣ ಹಕ್ಕು ಮತ್ತು ಅನುಮತಿಯನ್ನು ನೀಡುತ್ತದೆ ಮತ್ತು ಸಂವಿಧಾನದ 30 ನೇ ವಿಧಿಯು ಕ್ರಿಶ್ಚಿಯನ್ನರಿಗೆ ತಮ್ಮದೇ ಆದ ಧಾರ್ಮಿಕ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಕಲಿಸಲು ಸಂಪೂರ್ಣ ಹಕ್ಕು ಮತ್ತು ಅನುಮತಿಯನ್ನು ನೀಡುತ್ತದೆ. ನಿಮ್ಮ ಧರ್ಮವನ್ನು ಉಚಿತವಾಗಿ ಬೋಧಿಸಿ… ಇದರ ಇನ್ನೊಂದು ಕಾನೂನು ಅಂಶವೆಂದರೆ ಹಿಂದೂ ದೇವಾಲಯಗಳ ಎಲ್ಲಾ ಹಣ ಮತ್ತು ಆಸ್ತಿಯನ್ನು ಸರ್ಕಾರದ ವಿವೇಚನೆಗೆ ಬಿಡಬಹುದು, ಹಿಂದೂ ಭಕ್ತರು ಹಿಂದೂ ದೇವಾಲಯಗಳಿಗೆ ನೀಡುವ ಎಲ್ಲಾ ಹಣ ಮತ್ತು ಇತರ ದೇಣಿಗೆಗಳು ರಾಜ್ಯದ ಖಜಾನೆಗೆ ಹೋಗುತ್ತವೆ. ಒಳಗೆ ತೆಗೆದುಕೊಳ್ಳಬಹುದು.
ಅದೇ ಸಮಯದಲ್ಲಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಸೀದಿಗಳಿಂದ ದೇಣಿಗೆ ಮತ್ತು ಭಿಕ್ಷೆಯನ್ನು ಕ್ರಿಶ್ಚಿಯನ್-ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡಲಾಗುತ್ತದೆ. ಈ “ಕಾನೂನು 30” ನ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
ಆದ್ದರಿಂದ, ಆಕ್ಟ್ 30-ಎ” ಮತ್ತು “ಆಕ್ಟ್ 30” ಹಿಂದೂಗಳ ವಿರುದ್ಧ ಉದ್ದೇಶಪೂರ್ವಕ ತಾರತಮ್ಯ ಮತ್ತು ದೊಡ್ಡ ಪ್ರಮಾಣದ ಉದ್ದೇಶಪೂರ್ವಕ ವ್ಯವಸ್ಥಿತ ದ್ರೋಹವಾಗಿದೆ. ಇಂದು ಹಿಂದೂ ಜನಪದ ಕಥೆಗಳಿಗೆ ಸೀಮಿತವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಹಿಂದೂಗಳಿಗೆ ಅವರ ಧರ್ಮಗ್ರಂಥಗಳ ಜ್ಞಾನವಿಲ್ಲ. ಕಲಿ ಇತರರ ಬಗ್ಗೆ ಅರಿವು ನಾವೆಲ್ಲರೂ ಸನಾತನ ಧರ್ಮವನ್ನು ರಕ್ಷಿಸೋಣ. ಓದಿ, ಕಲಿಯಿರಿ ಮತ್ತು ಹರಡಿ..
ಇದಕ್ಕೆ ಕಾರಣ ಆರ್ಟಿಕಲ್ 30-A. ನಮ್ಮ ದೇಶದಲ್ಲಿ ಎಲ್ಲಿಯೂ ಭಗವದ್ಗೀತೆಯನ್ನು ಕಲಿಸಲು ಸಾಧ್ಯವಿಲ್ಲ. ಓದಿದ ನಂತರ, ನೀವು ಅದನ್ನು ಸರಿಯಾಗಿ ಕಂಡುಕೊಂಡರೆ, ದಯವಿಟ್ಟು ಅದನ್ನು ಫಾರ್ವರ್ಡ್ ಮಾಡಿ. ಎಲ್ಲರೂ ಇದನ್ನು ದಯವಿಟ್ಟು ಕನಿಷ್ಠ 5 ಜನರಿಗೆ ಫಾರ್ವರ್ಡ್ ಮಾಡಿ.
ಧನ್ಯವಾದಗಳು. ಯಾರೋ ಕಳಿಸಿದ್ದು….?”

ನಿಜಕ್ಕೂ ಆರ್ಟಿಕಲ್ 30ಎ ಇದೆಯೇ? ವಾಸ್ತವ ಸಂಗತಿ ಇಲ್ಲಿದೆ…
ಮೇಲಿನ ಸಂದೇಶ ಬಹುತೇಕ ಸಂಘ ಪರಿವಾರದ ಮತ್ತು ಬಿಜೆಪಿ ಸಕ್ರಿಯ ಕಾರ್ಯಕರ್ತರು ಇರುವ ಗುಂಪುಗಳಲ್ಲಿ ಹರಿದಾಡುತ್ತಿದೆ. ಇದನ್ನು ಒಂದು ಪ್ರಾಪಗಾಂಡ ಆಗಿ ಎಲ್ಲ ಗುಂಪುಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ ಇದು ನಿಜವಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಮತ್ತು ಸಮಾಜವನ್ನು ತಪ್ಪುದಾರಿಗೆಳೆಯುವ ಸಂಗತಿಗಳೊಂದಿಗೆ ವ್ಯಾಪಕವಾಗಿ ಪ್ರಚಾರ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಇಂತಹ ನೂರಾರು ಸಂದೇಶಗಳು ನಿಜದ ವೇಷ ಧರಿಸಿ ಸುಳ್ಳು ಮಾಹಿತಿಗಳು ಪ್ರಚಾರವಾಗುತ್ತಿವೆ. ದುರಂತವೆಂದರೆ ಇಂತಹ ಸುಳ್ಳುಗಳನ್ನು ದೇಶದ ನಾಗರಿಕರು ನಿಜವೆಂದು ನಂಬುತ್ತಿದ್ದು, ವ್ಯಾಪಕವಾಗಿ ಪ್ರಸಾರಾವಾಗುತ್ತಿವೆ.
ಭಾರತೀಯ ಸಂವಿಧಾನದ 30ಎ ವಿಧಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿವೆ. ಪೋಸ್ಟ್ ನಲ್ಲಿ, ಆರ್ಟಿಕಲ್ 30 ಮದರಸಾಗಳಲ್ಲಿ ಕುರಾನ್ ಕಲಿಸುವ ಹಕ್ಕನ್ನು ನೀಡಿದರೆ, ಆರ್ಟಿಕಲ್ 30ಎ ಶಾಲೆಗಳಲ್ಲಿ ಗೀತಾ ಬೋಧನೆಯನ್ನು ತಡೆಯುತ್ತದೆ ಎಂದು ಹೇಳಲಾಗಿದೆ.
Malgudi Express ನಡೆಸಿದ ಫ್ಯಾಕ್ಟ್ ಚೆಕ್ ತನಿಖೆಯಲ್ಲಿ ವೈರಲ್ ಆಗಿರುವ ಪೋಸ್ಟ್ ನಕಲಿ ಎಂದು ಕಂಡುಹಿಡಿದಿದೆ. ಭಾರತೀಯ ಸಂವಿಧಾನದಲ್ಲಿ ಯಾವುದೇ ಪರಿಚ್ಛೇದದಲ್ಲಿ 30A ಇಲ್ಲ ಮತ್ತು 30 ನೇ ವಿಧಿ ಅಲ್ಪಸಂಖ್ಯಾತರು ಸ್ಥಾಪಿಸಿದ ಮತ್ತು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿರುವ ಹಕ್ಕುಗಳ ಬಗ್ಗೆ ತಿಳಿಸುತ್ತದೆ.

ಆರ್ಟಿಕಲ್ 30 ಹೇಳುವುದೇನು?: “ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳಿತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು:- (1) ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಎಲ್ಲಾ ಅಲ್ಪಸಂಖ್ಯಾತ ವರ್ಗಗಳವರೂ ತಮ್ಮ ಇಷ್ಟಕ್ಕನುಗುಣವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತವನ್ನು ನಡೆಸಲು ಹಕ್ಕುಳ್ಳವರಾಗಿರತಕ್ಕದ್ದು.
(1ಎ)(1)ನೇ ಖಂಡದಲ್ಲಿ ಉಲ್ಲೇಖಿಸಲಾದ ಅಲ್ಪಸಂಖ್ಯಾತ ವರ್ಗವು ಸ್ಥಾಪಿಸಿದ ಮತ್ತು ಆಡಳಿತ ನಡೆಸುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯ ಯಾವುದೇ ಸ್ವತ್ತನ್ನು ಕಡ್ಡಾಯವಾಗಿ ಅರ್ಜನೆ ಮಾಡುವುದಕ್ಕಾಗಿ ಉಪಬಂಧ ಕಲ್ಪಿಸುವ ಯಾವುದೇ ಕಾನೂನನ್ನು ಮಾಡುವಾಗ ರಾಜ್ಯವು, ಅಂಥ ಸ್ವತ್ತಿನ ಆರ್ಜನೆಗಾಗಿ ಅಂಥ ಕಾನೂನಿನ ಮೂಲಕ ನಿಗದಿಪಡಿಸಿದ ಅಥವಾ ಅದರ ಮೇರೆಗೆ ನಿರ್ಧರಿಸಿದ ಮೊಬಲಗು ಆ ಖಂಡದ ಮೇರೆಗೆ ಖಾತ್ರಿಗೊಳಿಸಿದ ಹಕ್ಕನ್ನು ನಿರ್ಬಂಧಿಸುವುದಿಲ್ಲವೆಂದು ಅಥವಾ ಅಂಥ ಹಕ್ಕನ್ನು ರದ್ದುಪಡಿಸುವುದಿಲ್ಲವೆಂದು ಸುನಿಶ್ಚಿತಪಡಿಸಿಕೊಳ್ಳತಕ್ಕದ್ದು.)
(2) ಶೈಕ್ಷಣಿಕ ಸಂಸ್ಥೆಗಳಿಗೆ ನೆರವನ್ನು ನೀಡುವಲ್ಲಿ, ರಾಜ್ಯವು ಯಾವುದೇ ಶೈಕ್ಷಣಿಕ ಸಂಸ್ಥೆಯು ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಅಲ್ಪಸಂಖ್ಯಾತ ವರ್ಗದವರ ಆಡಳಿತದಲ್ಲಿ ಇದೆ ಎಂಬ ಕಾರಣದ ಮೇಲೆ ಅಂಥ ಸಂಸ್ಥೆಯ ವಿರುದ್ಧ ಯಾವುದೇ ತಾರತಮ್ಯ ಮಾಡತಕ್ಕದ್ದಲ್ಲ” ಎಂದು ಸಂವಿಧಾನ ಹೇಳುತ್ತದೆ.
ಆದರೆ ಈ ವಾಸ್ತವ ಸಂಗತಿಗಳನ್ನು ಮರೆಮಾಚಿ ಆರ್ಟಿಕಲ್ 30ಎಯನ್ನು ನರೇಂದ್ರ ಮೋದಿಯವರು ರದ್ದುಗೊಳಿಸಲಿದ್ದಾರೆ ಎಂದು ಸುಳ್ಳು ಪ್ರಚಾರಗಳನ್ನು ಮಾಡಲಾಗುತ್ತಿದೆ.



