ಕೋವ್ಯಾಕ್ಸಿನ್ ಪಡೆದ ಸಚಿವ ವಿ.ಸೋಮಣ್ಣ

5 years ago

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಚುಚ್ಚಮದ್ದುನ್ನು ತಜ್ಞ ವೈದ್ಯರುಗಳಿಂದ ಪಡೆದರು. ವಿಕ್ಟೋರಿಯ ಆಸ್ಪತ್ರೆಯ ಸೂಪರಿಡೆಂಟ್ ಡಾ.ರಮೇಶ್ ಕೃಷ್ಣ ಮತ್ತು ಗೋವಿಂದರಾಜನಗರ ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥಗೌಡ ಉಪಸ್ಥಿತರಿದ್ದರು.

ಚುಚ್ಚುಮದ್ದು ಪಡೆದ ನಂತರ ಮಾತನಾಡಿದ ಸೋಮಣ್ಣ, ನೆಚ್ಚಿನ ಪ್ರಧಾನಿ ನರೇಂದ್ರಮೋದಿರವರು ನೀಡಿದ ಸಂದೇಶದಂತೆ 50 ವರ್ಷ ಮೇಲ್ಟಟ ನಾಗರಿಕರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಭಾರತ ದೇಶದಲ್ಲಿ ಪ್ರತಿಯೊಂದು ಹಳ್ಳಿ, ಹಳ್ಳಿಗಳಲ್ಲಿ ಲಸಿಕೆ ಹಾಕಲಾಗುತ್ತಿದೆ ಎಂದರು.

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಯಾವುದೇ ಆತಂಕಪಡದೇ ಲಸಿಕೆ ಪಡೆದುಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ. ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಇದ್ದರಿಂದ ರೋಗ ಒಬ್ಬರಿಂದ  ಇನ್ನೂಬ್ಬರಿಗೆ ಹರಡುವುದಿಲ್ಲ ಎಂದು ಕಿವಿಮಾತು ಹೇಳಿದರು.

ಕೊರೋನ ವೈರಸ್ ಹರಡದಂತೆ ಮತ್ತು ರೋಗ ನಿರೋಧಕ ಶಕ್ತಿ ಇರುವ ಲಸಿಕೆಯನ್ನು ರಾಜ್ಯದ ಪ್ರತಿಯೊಬ್ಬ ನಾಗರಿಕರು ಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿರವರು ನೀಡಿದ ಸಂದೇಶವನ್ನು ಪಾಲಿಸಬೇಕು ಎಂದು ಕರೆ ನೀಡಿದರು.

Leave a Reply