ಮೈಸೂರು: ಕೊರೊನಾ ಇರುವ ಸಂದರ್ಭದಲ್ಲಿ ಶಾಲೆ ತೆರೆಯುವುದು ಅಪಾಯಕಾರಿ ಎಂಬ ಅರಿವಿದೆ. ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ತಜ್ಞರ ಅಭಿಪ್ರಾಯದ ಪ್ರಕಾರ 1-8ನೇ ತರಗತಿ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳು ಶಾಲೆಗೆ ಬರಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯವಲ್ಲ. ಒಂದು ವೇಳೆ ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟರೆ ಒಂದು ವಾರ ಆ ತರಗತಿಯನ್ನು ರದ್ದುಮಾಡಲಾಗುವುದು. ಒಂದು ವಾರದ ನಂತರ ಸ್ಯಾನಿಟೈಸ್ ಮಾಡಿ ತರಗತಿ ಆರಂಭಿಸಲಾಗುವುದು ಎಂದರು.
ಕೊರೊನಾ ಮಕ್ಕಳ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ. ಪ್ರಾಣಹಾನಿಯಂತಹ ಸಮಸ್ಯೆ ಎದುರಾದು. ಆದ್ದರಿಂದ 1 – 8ನೇ ತರಗತಿಯ ಶಾಲೆಗಳನ್ನೂ ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದರು.
ಶಾಲೆಗಳನ್ನು ತೆರೆಯುವುದರ ಕುರಿತು ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೊರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ. ಅಂತಹ ಶಾಲೆಗಳ ಮಕ್ಕಳಿಗೆ ಪರ್ಯಾಯ ಶಿಕ್ಷಣದ ನೀಡುವ ಕುರಿತು ಹೊಸ ವಿಧಾನ ರೂಪಿಸಲಾಗುವುದು ಎಂದರು.




