ಆರೋಪ ಸುಳ್ಳಾದರೆ ಬಸನಗೌಡ ಪಾಟೀಲ್ ಯತ್ನಾಳ್ ಏನಾಗಲಿದ್ದಾರೆ?: ಎಂ.ಬಿ.ಪಾಟೀಲ್

2 years ago

#BasanagowdaPatilYatnal #allegation #false #MBPatil

ಬೆಂಗಳೂರು: ಧಾರ್ಮಿಕ ಮುಖಂಡ ತನ್ವಿರ್ ಅಸ್ಮಿ ಅವರ ಐ ಎಸ್ ಐ ನಂಟಿನ ಆರೋಪದ ಬಗ್ಗೆ ಎನ್ಐಎ ತನಿಖೆ ನಡೆಸಿ ಅವರ ವಿರುದ್ಧದ ಆರೋಪ ಸಾಬೀತಾದಲ್ಲಿ ಗಡಿಪಾರಿಗೆ ಸಿದ್ದರಿದ್ದಾರೆ, ಆರೋಪ ಸುಳ್ಳಾದರೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ಏನಾಗಲಿದ್ದಾರೆ ಎಂದು ಹೇಳಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಅದರ ಬಳಿಕ ಯತ್ನಾಳ್ ಆರೋಪ ಮಾಡಿ ಸಮಾವೇಶದಲ್ಲಿದ್ದ ವಿಜಯಪುರ ಮೂಲದವರಾದ ತನ್ವೀರ್ ಅಸ್ಮಿಗೆ ಐಸಿಸ್ ಉಗ್ರರ ನಂಟಿದೆ ಎಂದು ಆರೋಪಿಸಿದ್ದರು. ಇದು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಬಸನಗೌಡ ಯತ್ನಾಳ್ ಅವರು ಎನ್ಐಎ ಮೂಲಕ ತನಿಖೆ ಮಾಡಿಸಿ ತಮ್ಮ ಆರೋಪ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.

ಉಗ್ರಗಾಮಿಗಳ ವಿಚಾರ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಸ್ವಯಂ ವಿಚಾರಣೆಗೆ ಧಾವಿಸಲಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಪರ್ಕಗಳಿರುವುದರಿಂದ ಉಗ್ರಗಾಮಿಗಳ ವಿಚಾರವನ್ನು ರಾಜ್ಯದ ಪೊಲೀಸರು ತನಿಖೆ ಮಾಡಲಾಗುವುದಿಲ್ಲ. ಯತ್ನಾಳ್ ಅವರು ಮೊದಲು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎನ್ಐಎ ತನಿಖೆಗೆ ಒತ್ತಾಯಿಸಬೇಕು ಎಂದರು.

Leave a Reply