ಕೇರಳ: ಕೇರಳ, ತಮಿಳುನಾಡು, ಪುದುಚೆರಿ, ಪಶ್ಚಿಮಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಕಣದಲ್ಲಿರುವ ರಾಜಕೀಯ ಪಕ್ಷಗಳು ಪರಸ್ಪರರ ಮೇಲೆ ಆರೋಪ ಮತ್ತು ಪ್ರತ್ಯಾರೋಪದಲ್ಲಿ ನಿರತವಾಗಿವೆ.
ಆದರೆ, ಕೇರಳದಲ್ಲಿ ಮಾತ್ರ ಬಿಜೆಪಿ ನಗೆಪಾಟಲಿಗೆ ಈಡಾಗಿದೆ. ತಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಒಳ್ಳೆಯ ಗುಣಮಟ್ಟದ ಗೋಮಾಂಸವನ್ನು ಕೊಡುತ್ತೇವೆ ಎಂಬ ಭರವಸೆಯನ್ನು ಕೇರಳದ ಬಿಜೆಪಿ ಮುಖಂಡ ಎನ್. ಶ್ರೀಪ್ರಕಾಶ್ ರಾಜ್ಯದ ಜನತೆಗೆ ಕೊಟ್ಟಿದ್ದಾರೆ.
ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಆದರೆ, ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಅನೇಕರು ಪ್ರಶ್ನಿಸಿದ್ದಾರೆ. ಇದರ ನಡುವೆ ಚುನಾವಣೆ ವೇಳೆ, ಗುಣಮಟ್ಟದ ಗೋಮಾಂಸ ಒದಗಿಸುವುದಾಗಿ ಹೇಳಿಕೆ ನೀಡಿ ಶ್ರೀಪ್ರಕಾಶ್ ತಾವು ಪೇಚಿಗೆ ಸಿಲುಕಿಕೊಂಡಿರುವುದಲ್ಲದೆ ತಮ್ಮದೇ ಪಕ್ಷವನ್ನೂ ಕೂಡ ಮುಜುಗರಕ್ಕೆ ಗುರಿಮಾಡಿದ್ದಾರೆ.




