10 ವರ್ಷದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿ: ಮುನಿರತ್ನ

5 years ago

ಬೆಂಗಳೂರು: ರಾಜರಾಜೇಶ್ವರಿಯ ಮತ್ತು ಮತದಾರರ ಆಶೀರ್ವಾದದ ಪುಣ್ಯದ ಫಲದಿಂದ 11 ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಸದಸ್ಯನಾಗಿ 3 ಮೂರು ಬಾರಿ ಶಾಸಕನಾಗಿ, ಇದೀಗ ಕರ್ನಾಟಕ ರಾಜ್ಯದ ಸಚಿವನಾಗಿ ಜನರ ಸೇವೆ ಮಾಡಲು ನೀವು ಆಶೀರ್ವಾದ ಮಾಡಿದ್ದೀರಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ, ಯಶವಂತಪುರ ವಾರ್ಡ್-37ರಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ ಎದುರು ತೋಟಗಾರಿಕೆ, ಯೋಜನೆ ಮತ್ತು ನಿರ್ವಹಣೆ ಹಾಗೂ ದತ್ತಾಂಶ ಸಚಿವರಾಗಿ ನೇಮಕವಾದ ಮುನಿರತ್ನರವರಿಗೆ ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಜಿ.ಕೆ.ವೆಂಕಟೇಶ್, ಯಶವಂತಪುರ ವಾರ್ಡ್ ಬಿ.ಜೆ.ಪಿ. ಕಾರ್ಯಕರ್ತರು ಅದ್ದೂರಿಯಾಗಿ 70 ಅಡಿ ಉದ್ದದ ಕಟೌಟ್ ನಿಲ್ಲಿಸಿ ಮುನಿರತ್ನರಿಂದ ಕೇಕ್ ಕತ್ತರಿಸಿ, ಸಿಹಿ ತಿಂಡಿ ವಿತರಿಸಿದರು. ನಂತರ ಯಶವಂತಪುರ ವಾರ್ಡ್ ಬಿ.ಜೆ.ಪಿ.ಕಾರ್ಯಕರ್ತರಿಂದ ಅದ್ದೂರಿಯಾಗಿ ಸನ್ಮಾನಿಸಿದರು. ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವೇಲು ನಾಯಕರ್ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತಾಡಿದ ಮುನಿರತ್ನ, ರಾಜಕೀಯ ಚುನಾವಣೆ ಬಂದಾಗ ಹತ್ತು ದಿನ ಮಾತ್ರ ಐದು ವರ್ಷ ಜನರ ಸೇವೆ ಮಾಡಬೇಕು ಇದು ನನ್ನ ಉದ್ದೇಶ, ನನ್ನ ಜೀವನದ ಗುರಿ. 50 ವರ್ಷಗಳಿಂದ ರಾಜರಾಜೇಶ್ವರಿನಗರ ಅಭಿವೃದ್ದಿ ಕಾಣದೇ ಹೋಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿಯಾಗುತ್ತಿದೆ ಎಂದರು.

ಯಶವಂತಪುರ ವಾರ್ಡ್ ನನ್ನ ತವರು ಮನೆ ಇದ್ದಂತೆ. ಯಶವಂತಪುರ ವಾರ್ಡ್ ನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಕೋವಿಡ್ ತುರ್ತು ಚಿಕಿತ್ಸೆ ಹೈಟೆಕ್ ಆಸ್ಪತ್ರೆ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಮತ್ತು ಜೆ.ಪಿ.ಪಾರ್ಕ್ ವಾರ್ಡ್-17ರಲ್ಲಿ 2500 ಮಕ್ಕಳಿಗೆ ಪ್ರವೇಶವಕಾಶ ಇರುವ ಅತ್ಯುತ್ತಮ ಶಾಲೆ, ಇದರಲ್ಲಿ ಆನ್ ಲೈನ್ ತರಗತಿಗೆ ಕಂಪ್ಯೂಟರ್ ಆಳವಡಿಸಲಾಗುವುದು ಎಂದರು.

ಜಿ.ಕೆ.ವೆಂಕಟೇಶ್ ಮಾತನಾಡಿ, ಬಡವರ ಪರ ಕಾಳಜಿ, ಅಭಿವೃದ್ದಿಯ ಹರಿಕಾರರು, ನನ್ನ ರಾಜಕೀಯ ಗುರುಗಳಾದ ಮುನಿರತ್ನ ಸದಾ ಅಭಿವೃದ್ದಿ ಪರ ಮತ್ತು ಬಡವರು ಸಮಾಜದಲ್ಲಿ ಮುಂದೆಬರಬೇಕು ಎಂಬ ಚಿಂತನೆ ಮಾಡುವ ಕಾಯಕಯೋಗಿ ಎಂದರು.

ಯಶವಂತಪುರ ವಾರ್ಡ್ ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ್ದಾರೆ. ಸಚಿವ ಮುನಿರತ್ನರವರನ್ನ ಮನೆ ಮಗನಂತೆ ಪ್ರೀತಿಸುತ್ತಾರೆ. ಸಚಿವರಾಗಿ ಇನ್ನೂ ಹೆಚ್ಚು ಜನ ಸೇವೆ ಮಾಡುವಂತಾಗಲಿ ಎಂದು ವಾರ್ಡ್ ನಾಗರಿಕರ ಪರ ಶುಭ ಕೋರುತ್ತೇನೆ ಎಂದರು.

Leave a Reply