ವಿ.ಡಿ.ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಆದೇಶ: SDPI ಹೋರಾಟಕ್ಕೆ ಜಯ

3 years ago

#Order #remove #VDSavarkar #portrait #Victory #SDPI #struggle

ಬೆಳಗಾವಿ: ಬೆಳಗಾವಿ – ಚಿಕ್ಕೋಡಿ ಸರ್ಕಾರಿ ಬಸ್‌ನಲ್ಲಿ ಅಳವಡಿಸಲಾಗಿದ್ದ ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ ಡಿ ಸಾವರ್ಕರ್ ಅವರ ಫೋಟೋವನ್ನು  ವಿವಾದದ ನಂತರ ತೆರವುಗೊಳಿಸಲಾಗಿದೆ.

ಮಾನ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೆ ಸರ್ಕಾರಿ ಬಸ್ಸುಗಳ ಮೇಲೆ ವಿವಾದಾತ್ಮಕ ವ್ಯಕ್ತಿಗಳ ಫೋಟೋ ಹಾಕುವುದು ಎಷ್ಟು ಸರಿ? ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ, ಬ್ರಿಟೀಷರೊಂದಿಗೆ ರಾಜಿ ಮಾಡಿಕೊಂಡ ಸ್ವಯಂ ಘೋಷಿತ “ವೀರ” ಸಾವರ್ಕರ್ ಚಿತ್ರ ಚಿಕ್ಕೋಡಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬಳಸುವುದು ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡುವ ಅವಮಾನವಲ್ಲವೇ? ಎಂದು ಎಸ್ ಡಿಪಿಐ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದರು.

ಸಾರಿಗೆ ಇಲಾಖೆಯ ಪ್ರಕಾರ, ಸಾರಿಗೆ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫೋಟೋ ಹಾಕಲಾಗಿತ್ತು. ನಿನ್ನೆ, ರಾಜ್ಯದ ವಾಯುವ್ಯ ಪ್ರದೇಶದಲ್ಲಿ ಬಸ್‌ಗಳನ್ನು ನಿರ್ವಹಿಸುವ ಎನ್‌ಡಬ್ಲ್ಯೂಕೆಆರ್‌ಟಿಸಿ ಈ ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಎಂದು ಕೂಡ ಹೇಳಿತ್ತು.

ಬಸ್ಸಿನಲ್ಲಿ ಯಾವ ಸಂದರ್ಭಗಳಲ್ಲಿ ಫೋಟೋಗಳನ್ನು ಹಾಕಲಾಗಿದೆ ಎಂಬುದನ್ನು ನಾವು ಪತ್ತೆಹಚ್ಚುತ್ತೇವೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಒಂದೆರಡು ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್ ಸೆಲ್ವನ್ ಪ್ರತಿಕ್ರಿಯೆ ನೀಡಿದ್ದರು.

ಈ ನಡುವೆ, ನಿನ್ನೆ ಸಂಜೆ, ಎಸ್‌ಡಿಪಿಐನಿಂದ ಪ್ರತಿಭಟನೆ  ನಡೆಸಲಾಯಿತು. ನಂತರ, ಚಿತ್ರವನ್ನು ತೆಗೆಯಲು ಸಂಸ್ಥೆ ನಿರ್ಧರಿಸಿತು. ಈ ಎಲ್ಲ ಬೆಳವಣಿಗೆಗಳ ನಡುವೆ ಭಾವಚಿತ್ರ ತೆರವುಗೊಳಿಸಿರುವ ಕ್ರಮ SDPI ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.

Leave a Reply