NEP ರದ್ದುಗೊಳಿಸಿದರೆ ದೊಡ್ಡ ಹೋರಾಟ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ

3 years ago

#fight #big #NEP #cancelled #BasavarajaBommai

ಬೆಂಗಳೂರು: ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊಡ್ಡ ಹೊಡೆತ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಕಾಮಾಲೆ ಕಣ್ಣಿನಿಂದ ನೋಡದೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಹಾಗೂ ಪಾಲಕರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿ ರಚಿಸಲು ಕೇಂದ್ರಕ್ಕೆ 2013ರಲ್ಲಿಯೇ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಕೊಟ್ಟಿದ್ದಾರೆ. ಅದರ ಅಧ್ಯಕ್ಷರು ಕಸ್ತೂರಿ ರಂಗನ್ ಅವರೇ ಇಡೀ ದೇಶದ ಶಿಕ್ಷಣ ನೀತಿ ಜಾರಿಗೆ ಮಾಡಿದ್ದಾರೆ. ಕೇವಲ ರಾಜಕಾರಣ ಮಾಡುವ ಉದ್ದೇಶದಿಂದ ಎನ್‍ಇಪಿ ವಿರೋಧ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷದಲ್ಲಿರುವವರು ತೊಳೆದ ಮುತ್ತುಗಳೇನಲ್ಲ. ಅಲ್ಲಿಯೂ ಕೂಡ ಅನೇಕ ಜನ ಭ್ರಷ್ಟಾಚಾರ ಮಾಡಿ ಜೈಲು ಪಾಲಾಗಿದ್ದಾರೆ ಎಂಬುದನ್ನು ಆ ಪಕ್ಷದ ನಾಯಕರು ಮರೆಯಬಾರದು. ರಾಜ್ಯದಲ್ಲಿ ರಾಜಕಿಯ ಪ್ರೇರಿತ ತನಿಖೆ ನಡೆಯುತ್ತಿವೆ. ಅವರಿಗೆ ಯಾವುದೇ ದಾಖಲೆ ಸಿಗದೇ ಇರುವುದರಿಂದ ಅನಗತ್ಯ ಆರೋಪ ಮಾಡಲು ಈ ತನಿಖೆ ನಡೆಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ತನ್ನನ್ನು ತಾನು ಮಹಾನ್ ಸತ್ಯಹರಿಶ್ಚಂದ್ರರ ಪಕ್ಷ ಎಂದುಕೊಂಡಿದೆ. ಅಲ್ಲಿರುವವರು ಎಷ್ಟು ಜನ ಭ್ರಷ್ಟಾಚಾರ ನಡೆಸಿಲ್ಲ? ಜೈಲಿಗೆ ಹೋಗಿಲ್ಲವೇ ಎಂದು ಪ್ರಶ್ನಿಸಿದರು.

Leave a Reply