ಮೊನ್ನೆ ಗೆಳೆಯನೊಬ್ಬನ ಫೋನ್ ಬಂತು, ಬಲು ಸೋತ ದ್ವನಿಯಲ್ಲಿ “ಶಿವಣ್ಣ ನಿನ್ನಿಂದ ಒಂದು ಹೆಲ್ಪ್ ಆಗಬೇಕು ಅಂದ” ಅದೇನು ಹೇಳೋ ಮಾರಾಯ ಅದರಲ್ಲೇನು ಅಂದಾಗ ಬೆರಗಾಗುವಷ್ಟು ಉತ್ತರ ಭಾರತೀಯರ ನಿರಂತರದ ಮೋಸದ ಜಾಲದ ಬಗ್ಗೆ ತೆರೆದಿಟ್ಟ, ಅವರ ಶ್ರೀಮತಿಯವರಿಗೆ ಸ್ವಲ್ಪ ದಿನದ ಹಿಂದೆ ಟೆಲಿಗ್ರಾಂ ಅಲ್ಲಿ ಒಂದು ಮೆಸ್ಸೇಜ್ ಬರುತ್ತೆ ನೀವು ಇಲ್ಲಿ ಹೂಡಿಕೆ ಮಾಡಿದರೆ ಡಬಲ್ ಲಾಭ ಪಡೆಯಬಹುದು ಎಂದು, ಇವರು ಅದರ ಮೇಲೆ ಇಂಟ್ರೆಸ್ಟ್ ತೋರಿಸಿದ ಮೇಲೆ ಇವರನ್ನ ಒಂದು ಗ್ರೂಪಿಗೆ ಸೇರಿಸುತ್ತಾರೆ, ಅದರಲ್ಲಿ ಸುಮಾರು ಎಂಟತ್ತು ಜನ ಇರ್ತಾರೆ, ಒಂದು ವಾರಗಳ ಕಾಲ ಇವರು ಅದನ್ನ ಮಾನಿಟರ್ ಮಾಡ್ತಾರೆ, ಅಲ್ಲಿ ಉಳಿದ ಜನ ತಮಗೆ ಬಂದ ಲಾಭಗಳನ್ನ Screenshot ಸಮೇತ ಅಲ್ಲಿ ಶೇರ್ ಮಾಡುತ್ತಿರುತ್ತಾರೆ, ಆ ಲಾಭಗಳನ್ನೆಲ್ಲ ನೋಡಿದ ಇವರು ನಾನೇಕೆ ಇದರಲ್ಲಿ ಇನ್ವೆಸ್ಟ್ ಮಾಡಬಾರದು ಎಂದು ಮೊದಲು ಅದಕ್ಕೆ ರಿಜಿಸ್ಟರ್ ಆಗ್ತಾರೆ, ನಂತರ ಒಂದೆರಡು ಸಾವಿರ ಹೂಡಿಕೆ ಮಾಡುತ್ತಾರೆ ನಂತರೆ ಒಂದಕ್ಕೆ ಎರಡರಂತೆ ಮೊದಲು ದುಡ್ಡು ವಾಪಸಾತಿ ಮಾಡುತ್ತಾರೆ, ಹೀಗೆ ನಂಬಿಕೆ ಗಳಿಸಿಕೊಂಡ ಆ ಕಂಪನಿ ಮುಂದೆ ಮಾಡಿದ್ದು ದೊಡ್ಡ ಮೋಸ.
ಇದನ್ನು ನಂಬಿದ ಅವರು ನಂತರ ೫೦ ಸಾವಿರ ಹಣ ಹಾಕ್ತಾರೆ ಅದು ಡಬಲ್ ಆಗಿ ಸ್ಕ್ರೀನ್ ಮೇಲೆ ಒಂದು ಲಕ್ಷ ಅಂತ ತೋರಿಸುತ್ತೆ, ಮತ್ತೆ ಒಂದೆರಡು ಲಕ್ಷ ಹಾಕಿದ ಮೇಲೆ ಅದು ಲಕ್ಷಲಕ್ಷ ಆಗಿ ವೆಬ್ಸೈಟ್ ಸ್ಕ್ರೀನ್ ಮೇಲೆ ತೋರಿಸುತ್ತೆ, ಇವರಿಗೂ ಖುಷಿಯಾಗಿ ಸಾಕಿನ್ನು ಡ್ರಾ ಮಾಡ್ಕೊಂಡರಾಯ್ತು ಅಂತ ಹೋದಾಗ ಆ ಹಣ ಡ್ರಾ ಮಾಡಿಕೊಳ್ಳಲು ಆಗಲ್ಲ, ನೀವು ಇನ್ನು ಒಂದೆರಡು ಲಕ್ಷ ಹಾಕಿದರೆ ಎಲ್ಲ ಸೇರಿ ಡ್ರಾ ಮಾಡಿಕೊಳ್ಳಬಹುದು ಅಂತ ಮತ್ತೊಂದು ಮೆಸೇಜ್ ಬರುತ್ತೆ ಜೊತೆಗೆ ಮತ್ತೊಬ್ಬ ಯಾರೋ ಕಾಲ್ ಮಾಡಿ ಅಮೌಟ್ ನೀವು ಈಗ ಡ್ರಾ ಮಾಡಿಕೊಳ್ಳಬೇಕಾದರೆ ಆರು ಲಕ್ಷಕ್ಕೆ ಇನ್ನಾರು ಲಕ್ಷ ಇನ್ವೆಸ್ಟ್ ಮಾಡಿ ನಂತರ ಎಲ್ಲವನ್ನು ಡ್ರಾ ಮಾಡಿಕೊಳ್ಳಿ ಅಂತ ಹಿಂದಿಯಲ್ಲಿ ಹೇಳ್ತಾನೆ ಇದನ್ನು ನಂಬಿ ಹೆದರಿಕೆಯಲ್ಲಿ ಮತ್ತೊಂದಿಷ್ಟು ಹೂಡಿಕೆ ಮಾಡ್ತಾರೆ ಈಗ ಎಲ್ಲ ಹೂಡಿಕೆ ಹಣ ಸೇರಿ ೧೨ ವರೆ ಲಕ್ಷಕ್ಕಿಂತ ಹೆಚ್ಚು ಹಣ ಇನ್ವೆಸ್ಟ್ ಮಾಡಿರ್ತಾರೆ, ನಂತರದಲ್ಲಿ ಮತ್ತೆ ಡ್ರಾ ಮಾಡಿಕೊಳ್ಳಲು ಹೋದಾಗ ಮತ್ತದೇ ಮೆಸೇಜ್ ನೀವು ಇದರ ಅರ್ಧದಷ್ಟು ಹಣ ಜಮೆ ಮಾಡಿ ನಂತರ ಎಲ್ಲಾ ಹಣ ಡ್ರಾ ಮಾಡಿ ಎಂದು ಮೆಸೇಜ್ ಬಂದಾಗ ಇವರಿಗೆ ಅರಿವಾಗುತ್ತೆ ನಾನು ಮೋಸದ ಜಾಲದಲ್ಲಿ ಬಿದ್ದಿದ್ದೇನೆ ಎಂದು ನಂತರ ಅವರು ನನ್ನ ಗೆಳೆಯನಿಗೆ ವಿಷಯ ತಿಳಿಸಿದಾಗ ಇವನು ಗಾಬರಿಯಾಗಿ ನನಗೆ ಫೋನ್ ಮಾಡಿದ್ದ!.
ನನಗೆ ಕಳೆದ ಆರು ತಿಂಗಳಲ್ಲಿ ನನ್ನ ಆತ್ಮಿಯರ ಗುಂಪಿನಲ್ಲಿ ಸುಮಾರು ನಾಲ್ಕು ಜನ ಇಂತಹ ಮೋಸಕ್ಕೆ ಬಲಿಯಾದದ್ದು ಇವನು ಐದನೆಯವು, ಮೋಸ ಮಾಡಿದವರೆಲ್ಲರೂ ಉತ್ತರ ಭಾರತದ ಮೂಲದವರೇ!, ಹಿಂದಿಯಲ್ಲಿ ಮಾತನಾಡುತ್ತ ಅಮಾಯಕ ಕನ್ನಡ ಜನಗಳನ್ನ ದೋಚುತ್ತಿರುವುದು ಕಳೆದ ಒಂದೂವರೆ ದಶಕದಿಂದ ನಿರಂತರವಾಗಿ ನಡೆದಿದೆ, ಹಲವಾರು ವೇಷಗಳನ್ನ ಹಾಕಿ ನಮಸ್ತೆ ಜಿ ಎಂದು ಬರುವ ಈ ಬೇವರ್ಶಿ Northi ಗಳ ಮೋಸದ ಜಾಲ ಬಲು ವಿಸ್ತಾರವಾದದ್ದು ಇವರಿಗೆ ದಕ್ಷಿಣ ಭಾರತದ ಜನ ಸುಲಭದ ತುತ್ತು, ಜೊತೆಗೆ ವಿದೇಶಿ ಜನಗಳನ್ನು ಬಿಟ್ಟಿಲ್ಲ ಈ ಜನ, ಅಮೇರಿಕಾದ FBI ಅಂತಹ website ಗಳಲ್ಲಿ ನಾರ್ತ್ ಇಂಡಿಯನ್ಸ್ ಮಾಡುವ ಮೋಸದ ಜಾಲದ ಬಗ್ಗೆ ಹಲವಾರು ಬರಹಗಳನ್ನ ಪಬ್ಲಿಶ್ ಮಾಡಿದೆ ಜೊತೆಗೆ ಬಿಹಾರ, ವೆಸ್ಟ್ ಬೆಂಗಾಲ, ಮತ್ತು ಉತ್ತರ ಪ್ರದೇಶಕ್ಕೆ ಬಂದು ಅನೇಕ ಜನರನ್ನ ಅರೆಸ್ಟ್ ಮಾಡಿಸಿದೆ, ಆದರೆ ಕಾನೂನಲ್ಲಿ ಈ ಮಾಹಿತಿ ತಂತ್ರಜ್ನ್ಯಾದ ಕಾನೂನುಗಳಲ್ಲಿ ಯಾವ ರೀತಿ ಬಿಗಿ ಇಲ್ಲದೆ ಇರುವ ಕಾರಣ ಕೆಲವು ದಿನಗಳಲ್ಲಿ ಇವರು ಹೊರ ಬಂದು ಮತ್ತದೇ ಮೋಸದ ದಂಧೆ ಮಾಡುತ್ತಾರೆ, ಒಂದು ಅಮೆರಿಕಾದ ವೆಬ್ಸೈಟ್ ಮಾಹಿತಿ ಪ್ರಕಾರ ನಾರ್ತ್ ಇಂಡಿಯಾದಲ್ಲಿ ಈ ಮೋಸ ಮಾಡುವವರ ಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚಂತೆ.
ನನ್ನ ಗೆಳೆಯನ ಕರೆದುಕೊಂಡು ಬಸವೇಶ್ವರ ನಗರದ ಪೊಲೀಸ್ ಠಾಣೆಯ ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಗೆ ಹೋದಾಗ ನಾವು ಹೇಳುವ ಮೊದಲೇ ಅಲ್ಲಿಯ ಸೈಬರ್ ಕ್ರೈಂ ಸಿಬ್ಬಂದಿ ನೀವು ಈ ರೀತಿಯಾಗಿ ಮೋಸ ಹೋಗಿದ್ದೀರಲ್ವಾ ಅಂತ ಹೇಳಿ ನಮನ್ನ ಆಶ್ಚರ್ಯಗೊಳಿಸಿದರು, ಅವರು ಹೇಳಿದ್ದು ಒಂದರಲ್ಲಿ ಆಶ್ಚರ್ಯ ಏನು ಇಲ್ಲ ಕಳೆದ ಸುಮಾರು ದಿನಗಳಿಂದ ಇಂತಹ ಘಟನೆಗಳು ಸರ್ವೇ ಸಾಮಾನ್ಯ! ಕೋಟಿ ಕೋಟಿ ಹಣ ಕಳೆದುಕೊಂಡವರು ಅನೇಕ ಜನರ ಉದಾಹರಣೆಗಳನ್ನ ನೀಡಿದರು, ಹಣ ಕಳೆದುಕೊಂಡ ಅನೇಕರು ಆತ್ಮಹತ್ಯೆಯನ್ನು ಮಾಡಿಕೊಂಡ ಉದಾಹರಣೆಗಳನ್ನ ನೀಡಿದರು.
ಅವರು ಹೇಳಿದ್ದು ನೋಡಿ ಸರ್ ಅವರನ್ನ ಹಿಡಿಯೋದು ಅಸಾಧ್ಯ ಕಾರಣ ಅವರಿಗೆ ನಮ್ಮ ಸಿಸ್ಟಮ್ ಲೂಪ್ ಹೊಲ್ಸ್ ಎಲ್ಲಾ ಚೆನ್ನಾಗಿ ಗೊತ್ತು ಅವನ್ನ ಬಳಸಿಕೊಂಡೇ ಅವರು ಯಾರ ಕೈಗೂ ಸಿಗದೇ ಎಲ್ಲರು ನೋಡುವಂತೆಯೇ ಕ್ರೈಂ ಮಾಡ್ತಿದ್ದಾರೆ, ಮೋಸ ಹೋಗುವವರು ಇರುವರೆಗೂ ಮೋಸ ಮಾಡುವವರು ಇದ್ದೆ ಇರ್ತಾರೆ ಅಂತ!.
ಆದರೆ ಕೆಳಗಿನ ಒಂದಷ್ಟು ಬರವಸೆಗಳನ್ನ ನೀಡಿದರು.
ನೀವು ಹಣವನ್ನ ಬ್ಯಾಂಕ್ ಅಕೌಂಟ್ ಗಳಿಗೆ net banking ಮೂಲಕ ಹಾಕಿದ್ದಾರೆ ಶೀಘ್ರವೇ ೧೯೩೩ ನಂಬರ್ ಗೆ ಕಾಲ್ ಮಾಡಿ ಟ್ರಾನ್ಸಾಕ್ಷನ್ ಹಿಸ್ಟರಿ ಕೊಟ್ಟು ಆಯಾ ಅಕೌಂಟ್ ಬ್ಲಾಕ್ ಮಾಡಿ ಎಂದು ಕಂಪ್ಲೇಂಟ್ ಕೊಡಿ ಆ ಅಕೌಂಟ್ ಗಳಲ್ಲಿ ಹಣ ಇದ್ದರೆ ಅದನ್ನ ನಾವು ಶೀಜ್ ಮಾಡಬಹುದು, ಆದರೆ ಆ ಅಕೌಂಟ್ಗಳು ಮೋಸ ಮಾಡಿದ ವ್ಯಕ್ತಿಗಳ ಹೆಸರಲ್ಲಿ ಇರುವುದಿಲ್ಲ, ಅಮಾಯಕ ಜನರ ID -Address ಬಳಸಿ ಅಕೌಂಟ್ ಮಾಡಿಸಿರುತ್ತಾರೆ, ತಮ್ಮ ಹೆಸರಲ್ಲಿ ಅಕೌಂಟ್ ಇರುವುದೇ ಆ ವ್ಯಕ್ತಿಗಳಿಗೆ ಗೊತ್ತಿರುವುದಿಲ್ಲ, ಈ ಮೋಸಗಾರರು ಈ ರೀತಿಯ ನೂರಾರು ಅಕೌಂಟ್ ಮಾಡಿ ಬಳ್ಕೆ ಮಾಡಿಕೊಳ್ಳುತ್ತಾರೆ! ಹೀಗಾಗಿ ನಿಜವಾದ ಅಪರಾದಿಗಳನ್ನ ನಾವು ಹಿಡಿಯಲು ಆಗುವುದೇ ಇಲ್ಲ.
ಆನ್ಲೈನ್ ಕರೆಗಳನ್ನ ಮಾಡುವದರಿಂದ ಅಪರಾಧಿಗಳ ಲೊಕೇಶನ್ ಅನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ ಈ ಉತ್ತರ ಭಾರತೀಯರ ಮೋಸದ ಜಾಲವನ್ನ ಇಲ್ಲಿಯ ಪೊಲೀಸರಿಂದ ಹಿಡಿಯಲು ಕಷ್ಟ ಎಂದು ಹೇಳಿದರು.
ಹೀಗಾಗಿ ಗೆಳೆಯರೇ ಯಾವುದೇ ಕಾರಣಕ್ಕೂ ನೀವು ಬೆವರು ಸುರಿಸಿ ದುಡಿದ ದುಡ್ಡನ್ನ ಯಾವುದೇ ಕಾರಣಕ್ಕೂ ಎಲ್ಲಿಯೂ ನಂಬಿಕೆ ಮೇಲೆ ಹಣವನ್ನ ಹಾಕಬೇಡಿ! ಹಿಂದಿಯಲ್ಲಿ ಬರುವ ಕಾಲ್ ಮತ್ತು messege ಗಳನ್ನ ಬ್ಲಾಕ್ ಮಾಡಿ ನಿಮ್ಮ ಹಣ ಉಳಿಸಿಕೊಳ್ಳಿ, ಅನೇಕ ನನ್ನ ಗೆಳೆಯರು ಇಂದಿಗೂ ಹಣವನ್ನ ಕಳೆದುಕೊಂಡು ಬೇಸರದ ಜೀವನವನ್ನ ನಡೆಸುತ್ತಿದ್ದಾರೆ ! ಹೀಗಾಗಿ ಮೋಸ ಹೋಗುವುದು ಬೇಡ ಎಚ್ಚರಿಕೆ ಇಂದಿರೋಣ ಈ ಉತ್ತರ ಭಾರತೀಯರಿಂದ, ಉತ್ತರ ಭಾರತೀಯರೆ ಎಂದು ಯಾಕೆ ಇಲ್ಲಿ ಒತ್ತಿ ಹೇಳುತ್ತಿದ್ದೆನೆಂದರೆ ನಿಮ್ಮ Message history email spam ತೆಗದು ನೋಡಿ ಗೊತ್ತಾಗುತ್ತೆ!
– ಶಿವಾನಂದ ಗುಂಡಾನವರ




