ಚಂದ್ರಯಾನ3: ಇಸ್ರೋ ಸಂಸ್ಥೆಯ ನಡೆ ಖಂಡನೀಯ

3 years ago

#Chandrayaan3 #ISRO #action #condemnable

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್.ಸೋಮನಾಥ ತಿರುಪತಿ ಸಮೀಪದ ಸೂಳ್ಳೂರುಪೇಟದಲ್ಲಿರುವ ಶ್ರೀಚೆಂಗಲಮ್ಮ ಪರಮೇಶ್ವರಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ, ‘ಚಂದ್ರಯಾನ-3’ ಕಾರ್ಯಕ್ರಮ ಯಶಸ್ವಿಗಾಗಿ ಪೂಜೆ ಸಲ್ಲಿಸಿರುವ ಮತ್ತು ಇಸ್ರೋ ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಗುರುವಾರ ತಿರುಮಲಕ್ಕೆ ತೆರಳಿ, ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಚಂದ್ರಯಾನ-3 ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಿದ ನಡೆಗೆ ವಿಚಾರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3ಕ್ಕೆ ಇಸ್ರೋ ಸಂಸ್ಥೆ ಸಜ್ಜಾಗಿರುವುದು ಅಭಿನಂದನೀಯ. ಇದೇ ಸಂದರ್ಭದಲ್ಲಿ ಚಂದ್ರಯಾನದ ಯಶಸ್ವಿಗಾಗಿ ಇಸ್ರೋದ ಕೆಲವು ವಿಜ್ಞಾನಿಗಳು ಚಂದ್ರಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದು ತಿಳಿದುಬಂದಿದೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುವಂತಿದೆ ಎಂದು ವಿಚಾರವಾದಿಗಳು ಖಂಡಿಸಿದ್ದಾರೆ.

ಭಾರತದ ಸಂವಿಧಾನ 51ಎ(ಹೆಚ್) ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಇಸ್ರೋದ ವಿಜ್ಞಾನಿಗಳು ತಾವು ಸತತವಾಗಿ ಹಲವಾರು ವರ್ಷಗಳಿಂದ ಎಲ್ಲ ಎಡರು ತೊಡರುಗಳ ನಡುವೆ ಸಂಶೋಧಿಸಿ, ಪರೀಕ್ಷಿಸಿ ರೂಪಿಸಿರುವ ಯಾನದ ಬಗೆಗೆ ತಮಗೇ ನಂಬಿಕೆ ಇಲ್ಲವೆಂಬುದನ್ನು ಮೂಲಕ ಸಾಬೀತುಗೊಳಿಸಿದ್ದಾರೆ. ಇದರಿಂದ ಆತ್ಮಸ್ಥೆರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತವೆ. ವೈಜ್ಞಾನಿಕ ನಡೆಯ ಬಗೆಗೆ ಈ ರೀತಿಯಾದ ಅನುಮಾನ ಮತ್ತು ಸಂಶಯ ದೃಷ್ಟಿಗೆ ಎಡೆಯಿಲ್ಲದಂತೆ ನಡೆದುಕೊಳ್ಳಬೇಕಾಗಿರುವುದು ವೈಜ್ಞಾನಿಕ ಸಂಸ್ಥೆಗಳ ಆಶಯವಾಗಿರುತ್ತದೆ. ನಿಟ್ಟಿನಲ್ಲಿ ಮೇಲೆ ಖಂಡನಾರ್ಹವಾಗಿದೆ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ಎಸಗಿರುವ ಕೃತ್ಯವು ಖಂಡನಾರ್ಹವಾಗಿದೆ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಅತಾಚುರ್ಯ ಆಗಿರುವುದನ್ನು ಅನೇಕ ಪ್ರಾಜ್ಞರು ಖಂಡಿಸಿದ್ದರೂ ಸಹ ಮತ್ತೊಮ್ಮೆ ಪುನರಾವರ್ತನೆಯಾಗಿರುವುದು ಒಪ್ಪತಕ್ಕ ವಿಚಾರವಲ್ಲ. ಈ ನಡೆಯು ಸಂಸ್ಥೆಯ ಸಂವಿಧಾನವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಇದಕ್ಕೆ ಕಾರಣೀಭೂತರಾದ ವ್ಯಕ್ತಿಗಳಿಗೆ ಸೂಕ್ತ ಸಲಹೆ ನೀಡುವುದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಈ ಪತ್ರಕ್ಕೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ವೆಂಕಟಯ್ಯ ಅಪ್ಪಗೆರೆ, ಸನತ್ ಕುಮಾರ್ ಬೆಳಗಲಿ, ಎಲ್. ಎನ್‌. ಮುಕುಂದರಾಜ್, ಕೆ. ಬಿ. ಮಹದೇವಪ್ಪ, ನಾಗೇಶ್ ಅರಳಕುಪ್ಪೆ, ಡಾ. ಹುಲಿಕುಂಟೆ ಮೂರ್ತಿ, ಹೆಚ್‌.ಕೆ. ವಿವೇಕಾನಂದ ಡಾ.ಹೆಚ್.ಕೆ.ಎಸ್.ಸ್ವಾಮಿ, ಡಿ. ಎಂ. ಮಂಜುನಾಥಸ್ವಾಮಿ, ಕೆ. ಮಹಂತೇಶ್, ಡಾ. ನಾಗೇಶ್‌ ಕೆ.ಎನ್, ಪ್ರಭಾ ಬೆಳವಂಗಲ, ಆಲ್ಲೂರು ಶಿವರಾಜ ಡಾ.ಆರ್.ಎನ್.ರಾಜಾನಾಯಕ್ ಮೊದಲಾದವರು ಸಹಿ ಹಾಕಿದ್ದಾರೆ.

Leave a Reply