25 ಲಕ್ಷ ಮೌಲ್ಯದ 120 ವಿವಿಧ ಕಂಪನಿಗಳ ಮೊಬೈಲ್ ಜಪ್ತಿ

3 years ago

#25lakh #worth #different #companies #mobiles #seized

ಬೆಂಗಳೂರು: ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿ 25 ಲಕ್ಷ ಮೌಲ್ಯದ 120 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಚ್ಚು ಮೊಬೈಲ್ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ರಚಿಸಿದ ವಿಶೇಷ ತಂಡವು ಶಿವಮೊಗ್ಗ  ಭದ್ರಾವತಿ ತಾಲೂಕಿನ ಮೂವರು ಆರೋಪಿಗಳು ಕಳವು ಮಾಡಿದ್ದ ಮೊಬೈಲ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.

ವಿಚಾರಣೆಯಲ್ಲಿ ಆರೋಪಿಗಳು ಬಸ್‍ನಿಲ್ದಾಣ, ದೇವಸ್ಥಾನ ಮತ್ತು ಜನಬಿಡ ಪ್ರದೇಶಗಳಲ್ಲಿ ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳಿಂದ ಸ್ಯಾಮ್‍ಸಂಗ್ ಕಂಪನಿಯ 18, ರಿಯಲ್‍ಮಿ ಕಂಪನಿ 7, ವಿವೋಕಂಪನಿಯ 18 ರೆಡ್‍ಮಿ ಕಂಪನಿಯ 16, ಒಪ್ಪೋ ಕಂಪನಿ 10, ಒನ್‍ಪ್ಲಸ್ ಕಂಪನಿಯ 8, ಪೋಕೋ ಕಂಪನಿಯ 3, ನಿರೋ ಕಂಪನಿಯ 4,  ಗೂಗಲ್, ಟೆಕ್ನೋ ಇನ್‍ಫಿನಿಕ್ಸ್,ಹಾನರ್, ನೋಕಿಯಾ, ಮೊಟೊರೋಲಾ ತಲಾ ಒಂದು ಸೇರಿ 120 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

Leave a Reply