ನಟ ಸುದೀಪ್ ಅವರಿಗೊಂದು ಸಪ್ರೇಮ ಮನವಿ‌

3 years ago

#love #request #actor #Sudeep #election #campaign #natarajkp

ನಟ ಸುದೀಪ್ ಅವರಿಗೊಂದು ಸಪ್ರೇಮ ಮನವಿ‌


ಪ್ರಿಯ ಸುದೀಪ್ ಅವರೆ ,

ಇತ್ತೀಚೆಗೆ ‘ ಕನ್ನಡ್ ‘ ಎಂದು ತಪ್ಪು‌ಉಚ್ಚಾರ ಮಾಡಿದ ಹಿಂದಿ‌ ಪತ್ರಕರ್ತೆಯೊಬ್ಬರ ಉಚ್ಚಾರವನ್ನು ಕನ್ನಡ ಎಂದು ತಿದ್ದಿದ ನಿಮ್ಮ ವಿಡಿಯೋ‌ ನೋಡುತ್ತಿದ್ದೆ ..
ಸುದೀಪ್ ಕನ್ನಡದ ಅಸ್ಮಿತೆಯ ನಿತ್ಯ‌ಪ್ರತಿಮೆಯಂತಿರುವ ವರನಟ ಡಾ ರಾಜ್ ಪರಂಪರೆಯಲ್ಲಿದ್ದಾರೆ ಎಂಬ ಹೆಮ್ಮೆ ಮತ್ತು‌ ಅಭಿಮಾನ ಅವತ್ತು ನನ್ನನ್ನು ಆವರಿಸಿತ್ತು‌… ಆ ರೀತಿ ಹಿಂದಿ ವಾಲಾಗಳೆಂಬ ಪರಕೀಯರನ್ನು ಹೀಗೆ ತಿದ್ದಿದವರೇ ಇರಲಿಲ್ಲವೇನೋ ..

ದೇವೇಗೌಡ್ , ದೀಪಿಕಾ ಪಡುಕೋಣ್ , ರಶ್ಮಿಕಾ ಮಂದಾನ.. ಈ ತರದ ಉಚ್ಚಾರಗಳು ಅಪ್ರಶ್ನವಾಗಿ ಚಲಾವಣೆಯಲ್ಲಿರುತ್ತಿದ್ದವು .. ಈಗಲೂ ಪರಿಸ್ತಿತಿ ಹೀಗೇ ಇದೆ .,

ಇಂತಹ ಆತ್ಮ ಸಮ್ಮಾನ ಜಾಗೃತವಿರುವ ನಟ ಸುದೀಪ್ ಅವರನ್ನು ಕನ್ನಡ ಪರಂಪರೆಗೆ ಪರಕೀಯವಾಗಿರುವ. ಹಿಂದಿ ಮತ್ತು ಸಂಸ್ಕೃತ ವಾದಿಯಾದ ರಾಜ್ಯ ಬಿಜೆಪಿ ತನ್ನ ಕೆಡ್ಡಾಕ್ಕೆ ಕೆಡವಿಕೊಂಡಿದೆ …‌ ಇದು ಅತ್ಯಂತ ವಿಷಾದಕರ , ಅಸಹನೀಯ ವಿದ್ಯಮಾನವಾಗಿದೆ

ಈ ಹಿಂದೆ ನಿಮ್ಮ ಸಹ ನಟರಾದ ಯಶ್ ಮತ್ತು ದರ್ಶನ್ ರನ್ನೂ ನಂತರ ಈಚೆಗೆ ಮಾಜಿ‌ ನಟಿ ಸುಮಲತಾ ಅವರನ್ನೂ ಬಿಜೆಪಿ ಕಬ್ಜಾ‌ಮಾಡಿಕೊಂಡು ಪಕ್ಷ ಮತ್ತು ನಾಯಕತ್ವವನ್ನು ಸಮರ್ತಿಸಲು ತನ್ನ ತುತ್ತೂರಿ ಚಾನಲ್ ಗಳಲ್ಲಿ ವಕ್ತಾರೆಯಾಗಿ ಕೂರಿಸಿತ್ತು ..
ಇದೀಗ ನಿಮ್ಮ ಸೇರ್ಪಡೆ ತನ್ನ ಬತ್ತಳಿಕೆಗೆ ಸೇರಿದ ಹೊಸ ಬಾಣ ಎಂಬಂತೆ ಬಿಜೆಪಿ ಬೀಗುತ್ತಿದೆ ‌‌.. ಅದು ನಿಮಗೆ ಗೊತ್ತಿಲ್ಲದೆ ಇಲ್ಲ‌.. ಇದು ನಿಮಗೆ ಹೆಮ್ಮೆಯ ವಿಷಯವಾದರೆ ಅದು‌ ವಿಷಾದಕರ ಸಂಗತಿಯಾಗಿದೆ

ಕರ್ನಾಟಕ ದ ಒಬ್ಬ ಜಾಗೃತ ನಾಗರಿಕರಾಗಿ ಕಳೆದ ಮೂರು ವರ್ಷಗಳಿಂದಲೂ ಒಂದಾದಮೇಲೊಂದರಂತೆ ಬಿಜೆಪಿಯ ದುರಾಡಳಿತದ ಉತ್ಪಾತಗಳ ನೆನಪು ನಿಮಗೂ ಇದೆಯೆಂದು ತಿಳಿಯುತ್ತೇನೆ …

ನಾಡೋಜ‌ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪಟ್ಯ ಪುಸ್ತಕ ಪರಿಷ್ಕರಣಾ ತಜ್ಙ ಸಮಿತಿ ಅತ್ಯಂತ ಎಚ್ಚರದಿಂದ ರೂಪಿಸಿದ ಶಾಲಾ ಪಟ್ಯ ಪುಸ್ತಕ ಗಳನ್ನು ಬಾಳೆಯ ತೋಟಕ್ಕೆ ಆನೆಯ ಹಿಂಡು ನುಗ್ಗಿದಂತೆ ಬಿಜೆಪಿ ಸರ್ಕಾರ ನಿಯೋಜಿಸಿದ ಐವರು ಅನರ್ಹರ ತಂಡ ದ್ವಂಸಗೊಳಿಸಿತು .. ಈ ವಿದ್ವಂಸಕ
ಪಟ್ಯಪುಸ್ತಕ ಪರಿಷ್ಕರಣೆ ಯ ಮೂಲಕ ಕರ್ನಾಟಕದ. ಪ್ರಾಥಮಿಕ ದಿಂದ ಹಿಡಿದು ಪದವಿ ಶಿಕ್ಷಣದ ವರೆಗೆ ಶಿಕ್ಷಣವನ್ನು ಹಾಳುಗೆಡವಿದ ; ಕೋಮು ದ್ವೇಷ ಪ್ರಚೋದನಾ ಬಾಷಣಗಳ ಮೂಲಕ ಹಲವು ಅಮಾಯಕರ ಸಾವು ನೋವಿಗೆ ಕಾರಣವಾದ ; ಕೋವಿಡ್ ನಿರ್ವಹಣೆಯಲ್ಲಿ ತೋರಿದ ಅದಕ್ಷತೆ ಮತ್ತು‌ ಬ್ರಹ್ಮಾಂಡ ಬ್ರಷ್ಟಾಚಾರ ದಲ್ಲಿ ಕೋಟ್ಯಾಂತರ ದುಡ್ಡು ತಿಂದು ಸಾವಿರ ಸಾವಿರ ಸಂಕ್ಯೆಯ ಕನ್ನಡಿಗರ ಸಾವಿಗೆ ಕಾರಣವಾದ ; ಕೋವಿಡ್ ಅಂಧಯುಗದಲ್ಲಿ ಆತುರಾತುರವಾಗಿ ನೂತನ ಶಿಕ್ಷಣ ನೀತಿ ( NEP 2020 ) ಯನ್ನು ಜಾರಿಗೆ ತರಲು ನಿರ್ದರಿಸಿದ ; ಅದೇ ಕಾಲದಲ್ಲಿ ಭೂ ಸುದಾರಣಾ ಕಾಯ್ದೆಗೆ ತಿದ್ದುಪಡಿ ತಂದ ; ಜಿಎಸ್ಟಿ ತೆರಿಗೆಯಲ್ಲಿ ಕರ್ನಾಟಕದ ಪಾಲು ಕೇಳಲು ಅಸಮರ್ಥವಾದ ; ಅಕ್ರಮವಾಗಿ ಕೊಂಡು ತಂದ ಹದಿನೇಳು ಜನ ಶಾಸಕರ ಬಲದ ಮೇಲೆ ಪ್ರಜಾಪ್ರಭುತ್ವ ವಿರೋಧಿ ಅಕ್ರಮ ಸರ್ಕಾರ ನಡೆಸಿದ ; ಶೇಕಡಾ ನಲವತ್ತು ಪರ್ಸೆಂಟ್ ಲಂಚಕ್ಕೆ ಪೀಡಿಸಿ ಒಂದು ಕಡೆ ಕಂಟ್ರಾಕ್ಟರ್ ಗಳ ಅತ್ಮಹತ್ಯೆಗೆ , ಮತ್ತೊಂದು ಕಡೆ ಕಳಪೆ ಕಾಮಗಾರಿಗಳಿಗೆ ಕಾರಣವಾದ ; ಹಲವು ಸಾವಿರ ಉದ್ಯೋಗಗಳನ್ನು ಬರ್ತಿ‌ಮಾಡದೆ ಅಡಳಿತದಲ್ಲಿ ಅರಾಜಕತೆ ಸೃಷ್ಟಿಸಿದ ; ಹಿಂದುತ್ವವಾದಿ ಸಂಗಟನೆಗಳಿಗೆ ಬಲಿಯಾದ ಗೌರಿ ಲಂಕೇಶ್ ಮತ್ತು ಪ್ರೊ ಕಲ್ಬುರ್ಗಿಯವರಂತಹ ಚಿಂತಕರನ್ನು ಬುದ್ದಿಜೀವಿಗಳ ಹತ್ಯೆಯ ಸಂಚುಕೋರರನ್ನು ಆರೋಪಿಗಳನ್ನು ಶಿಕ್ಷಿಸುವಲ್ಲಿ‌ ಹಿಂದೆಬಿದ್ದ ; ಕನ್ನಡ ವಿಶ್ವ ವಿದ್ಯಾಲಯವನ್ನು ನಿಷ್ಕ್ರಿಯಗೊಳಿಸಿದ ; ಅತುರಾತುರವಾಗಿ ಮೀಸಲಾತಿ ಯ ತಳಹದಿಯನ್ನೇ ತನಗೆ ಚುನಾವಣೆಯಲ್ಲಿ ನೆರವಾಗುವಂತೆ ಇಷ್ಟಬಂದಂತೆ ಕಿತ್ತು ಹರಡಿದ ; ಇನ್ನೂ ಇನ್ನೂ ಹತ್ತು ಹಲವು ಪಾತಕಗಳನ್ನು ಮಾಡುತ್ತ ಚುನಾವಣೆಯನ್ನು ಎದುರಿಸಲು ಮುಖವಿಲ್ಲದ ಬಿಜೆಪಿ ಸಿನಿಮಾ ನಟರನ್ನು ಎಡತಾಕುತ್ತಿರುವುದನ್ನು ಅರಿಯದ ಪ್ರಾಜ್ಙ ನಟರಾದ ನೀವು ಬಿಜೆಪಿ ಪರ ಪ್ರಚಾರಕ್ಕಿಳಿಯುವುದಾಗಿ ಗೋಶಿಸಿದ್ದೀರಿ .

ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಗುಂಪಿನಲ್ಲಿ ಕೂತು ಪಕ್ಷ ಹೇಳಿದಲ್ಲಿ ಪ್ರಚಾರಕ್ಕೆ ಬರುತ್ತೇನೆ , ಬಿಟ್ಟರೆ ಪಕ್ಷ ಕ್ಕೆ ಸೇರುವುದಿಲ್ಲ‌ ಎಂದು ನೀವು ಹೇಳಿದ್ದು ನನ್ನ‌ ಪ್ರಕಾರ ಅಪಕ್ವ ಹೇಳಿಕೆ ಅಷ್ಟೇ ಅಲ್ಲ. ಹೊಣೆಗೇಡಿ ಹೇಳಿಕೆ .‌

ಹೇಗೆ ಮತ್ತು ಏಕೆಂದರೆ , ಕರ್ನಾಟಕ ರಾಜ್ಯ ವಿದಾನ ಮಂಡಲದಲ್ಲಿ ೧೫ ಸ್ಥಾನಗಳು ಎಸ್ಟಿ ಸಮುದಾಯಕ್ಕೆ ಮೀಸಲಾಗಿವೆ… ಇದರಲ್ಲಿ ಹತ್ತಿರ ಹತ್ತಿರ ಶೇಕಡಾ ಎಂಬತ್ತರಷ್ಟು ಸಂಕ್ಯಾ ಪ್ರಮಾಣ ನಾಯಕ ಅಥವಾ ಬೇಡ ಸಮುದಾಯವೇ ಇರುವುದರಿಂದ ಬಹುಪಾಲು ಎಲ್ಲ. ಉಮೇದುವಾರರೂ ನಾಯಕ ಜನಾಂಗಕ್ಕೇ ಸೇರಿರುತ್ತಾದ ಕಾರಣ ,ನಾಯಕ ಸಮುದಾಯದಲ್ಲಿ ನೀವು ಹೆಚ್ಚು ಜನಪ್ರಿಯತೆಯನ್ನೂ , ಗೌರವವನ್ನೂ ಗಳಿಸಿರುವ ಕಾರಣ , ನೀವು ಬಿಜೆಪಿ ಪರವಾಗಿ ಪ್ರಚಾರಕ್ಕಿಳಿದರೆ ಅದು ನಾಯಕ ಸಮುದಾಯದ ಮತದಾರರ ರಾಜಕೀಯ ಸಾರಾಸಾರ ವಿವೇಕ ವನ್ನು ಹಾಳುಗೆಡವಿ ಅವರನ್ನು ಫ್ಯಾಸಿಷ್ಟ್ ಪಕ್ಷಕ್ಕೆ ಮತನೀಡುವಂತೆ ಮಾಡುತ್ತದೆ‌ ಅರೆಸ್ಸೆಸ್ ಮತ್ತದರ ಪರಿವಾರ ಅನಾಯಾಸವಾಗಿ ಚುನಾವಣೆ ಗೆಲ್ಲುವ ತನ್ನ ಕುತಂತ್ರಕ್ಕೆ ನಿಮ್ಮನ್ನು ಬಳಸಿಕೊಳ್ಲುತ್ತಿದೆ

ಹೀಗಾಗಿ , ಸುದೀಪ್ ಅವರೆ , ಬಿಜೆಪಿಗೆ ನೀವು ನೀಡುವ ಬೆಂಬಲ ನಾಯಕ ಜನಾಂಗದ ಅಮಾಯಕ ಓಟುದಾರರನ್ನು ದಿಕ್ಕುತಪ್ಪಿಸುತ್ತದೆ ಮತ್ತು ಅವರ ರಾಜಕೀಯ ಆಯ್ಕೆಯ ನಿರ್ದಾರದ ಮೇಲೆ ದುಷ್ಪರಿಣಾಮ ಬೀರುತ್ತದೆ…ಇದನ್ನು ನೀವು ‌ಅರ್ಥಮಾಡಿಕೊಂಡರೆ ಒಳ್ಳೆಯ ದು‌…

ಪ್ರೇಮದಂತೆ , ರಾಜಕೀಯವೂ ಅತ್ಯಂತ ವೈಯಕ್ತಿಕವಾದದ್ದು ಮತ್ತು ಪವಿತ್ರವಾದದ್ದು ಎಂದು ಹಿರಿಯರು ಹೇಳುತ್ತಾರೆ ‌‌‌ಅದನ್ನು ಅಗ್ಗದ ಆಮಿಷಗಳಿಂದ ಅಪವಿತ್ರಗೊಳಿಸಬಾರದು ..
ಅಥವಾ ಹೊಣೆಯರಿತ ರಾಜಕೀಯ ಪಕ್ಷಗಳೂ ಸಹ ಜನತೆಯ
ಅಭಿಮಾನದ ಮೂರ್ತಿಗಳನ್ನು ನಿಲ್ಲಿಸಿ ಜನತೆಯ ವಿವೇಚನಾ ಪ್ರಜ್ಙೆಯನ್ನು ವಿಚಲಿತಗೊಳಿಸಬಾರದು ಅಥವಾ ಜನತೆಯ ಅಬಿಮಾನದ ಮೂರ್ತಿಯಾದವನು ಜನತೆ ತನ್ನ ಮೇಲಿಟ್ಟಿರುವ ಗೌರವಾಭಿಮಾನವನ್ನು ಅವರ ರಾಜಕೀಯ ನಿರ್ದಾರದಂತಹ ಜೀವನ್ಮರಣದ ನಿರ್ದಾರ ತೆಗೆದುಕೊಳ್ಳುವಾಗ ಪ್ರಭಾವಿಸುವಂತಾಗಬಾರದು .. ಯಾಕೆಂದರೆ ರಾಜಕೀಯ ಆಯ್ಕೆ ಎನ್ನುವುದು ಜನ ಸಮುದಾಯಗಳ ಜೀವನ್ಮರಣದ ಪ್ರಶ್ನೆಯಾಗಿರುತ್ತದೆ‌.. ಒಳಿತು ಕೆಡುಕಿನ ‌ಮಾಪನ ಮತ್ತು ಅಯ್ಕೆಯ ಲೌಕಿಕ ಮತ್ತು ಆಧ್ಯಾತ್ಮಿಕ ಪ್ರಶ್ನೆಯಾಗಿರುತ್ತದೆ ‌..

ಅದಕ್ಕೆಯೆ ವರನಟ ಡಾ ರಾಜಕುಮಾರ್ ಅವರು ಬಂದುಗಳಾದ ಬಂಗಾರಪ್ಪನವರ ರಾಜಕೀಯದ ಬೆಂಬಲಕ್ಜೆ ಬರಲಿಲ್ಲ. ಬಂಗಾರಪ್ಪನವರಿಗೂ ಇದರಿಂದ. ರಾಜ್ ಅವರ ಮೇಲಿದ್ದ ಗೌರವಾದರಗಳು ಕಡಮೆಯಾಗಲಿಲ್ಲ‌..
ಪುನೀತ್ ರಾಜ್ ಕುಮಾರ್ ಅವರೂ ಸಹ ತಮ್ಮ ಅತ್ತಿಗೆಯವರ ರಾಜಕಾರಣದ ಸಾರ್ವಜನಿಕ ಬೆಂಬಲಕ್ಕೆ ಮುಂದಾಗಲಿಲ್ಲ‌..

ಪ್ರಿಯ ಸುದೀಪ್ ಅವರೆ , ಈ ಸತ್ಪರಂಪರೆ ಯನ್ನು ನೋಡಿ ನಿಮ್ಮ ನಿರ್ದಾರ ಬದಲಿಸುತ್ತೀರೆಂದು ಬಾವಿಸುತ್ತೇನೆ‌‌.. ..

ಮರೆತ ಮತ್ತೊಂದು ವಿಚಾರ : ಈ ಮನವಿಯನ್ನು ಈ ಭಾಷೆಯಲ್ಲಿ ನಟ ದರ್ಶನ್ ಗಾಗಲಿ ಅಥವಾ ಯಶ್ ಗಾಗಲಿ ಅಷ್ಟೇ ಏಕೆ ನಟಿ ಸುಮಲತಾ ಅವರಿಗಾಗಲಿ ಮಾಡಬೇಕು ಅನ್ನಿಸಲಿಲ್ಲ . ನೀವು ಕನ್ನಡ ಬಾಷೆ ಮತ್ತು ಜನಪದದ ನಡೆನುಡಿ ಜೊತೆಗೆ ಅವಿನಾಭಾವವಾಗಿ ಗುರುತಿಸಿಕೊಂಡ ಕಾರಣವಾಗಿಯೋ ಏನೋ , ನಿಮ್ಮ‌ಜೊತೆಗೆ ಸ್ವಲ್ಪ ಮಾತಾಡಬೇಕೆನ್ನಿಸಿತು‌..

ನಮಸ್ಕಾರ

  • ನಟರಾಜ. ಕೆ ಪಿ

Leave a Reply