ಕಂಡವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಆಳ ಅಳೆವ ಮನಸ್ಥಿತಿಯ ವ್ಯಕ್ತಿಯೊಬ್ಬ ಶಾಸಕನಾಗಲು ಅರ್ಹನೇ?: ಕುಸುಮ ಹನುಮಂತರಾಯಪ್ಪ

3 years ago

ಜಾಲಹಳ್ಳಿ:  ಖಾತಾನಗರಕ್ಕೆ ಯಾರಾದರೂ ಬಂದರೆ “ಹೊಡೆದು ಕಳಿಸಿರಿ” ಎಂದು ಕ್ಷೇತ್ರದ ಶಾಸಕ ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳಿನಲ್ಲಿ ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ.

ಕನ್ನಡ ನೆಲದಲ್ಲಿ ನಿಂತು ತಮಿಳು-ಕನ್ನಡ ಮಾತನಾಡುವವರ ಮಧ್ಯೆ ತಮಿಳಿನಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ “ಹಿಂಸಿಸಿ, ಮುಂದಿನದು ನಾನು ನೋಡ್ಕೊಂತೀನಿ” ಎಂಬ ಬಹಿರಂಗ ಪ್ರಚೋದನೆಯಿಂದ ಯಾರಿಗಾದರೂ ಪ್ರಾಣಹಾನಿಯಾದರೆ ಯಾರು ಹೊಣೆ? ತನ್ನ ಬೆಂಬಲಿಗರ ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆ ಇಲ್ಲವೇ?

ತನ್ನ ಬೆಂಬಲಿಗರಿಗೆ ಹಿಂಸಾಚಾರ ಮಾಡಿ ಎಂದು ಕರೆ ಕೊಡುವ ಶಾಸಕ ತನ್ನ ಮನೆಯ ಮಕ್ಕಳಿಗೂ ಇದನ್ನೇ ಹೇಳಿ ಕಳುಹಿಸುತ್ತಾರೆಯೇ? ಕಂಡವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಆಳ ಅಳೆವ ಮನಸ್ಥಿತಿಯ ವ್ಯಕ್ತಿಯೊಬ್ಬ ಶಾಸಕನಾಗಲು ಅರ್ಹನೇ? ಸಮಾಜದ ಸ್ವಾಸ್ಥ್ಯ ಹಾಳುಗೆಡುವುವ ವಿಕೃತ ಮನಸ್ಸುಳ್ಳ ಜನಪ್ರತಿನಿಧಿಗಳ ನಡುವೆ ಜನರು ಸಾಮಾನ್ಯ ಜೀವನ‌ ನಡೆಸಲು ಸಾಧ್ಯವೇ?

ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ BENGALURU CITY POLICE ಕಮೀಷನರ್ ಅವರಿಗೆ ದೂರು ನೀಡಲಾಗಿದ್ದು, ಅವಶ್ಯಕ ಮುಂಜಾಗ್ರತಾ ಕ್ರಮಗಳಿಂದ ಶಾಂತಿಯುತ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ಕೋರಲಾಗಿದೆ.

-ಕುಸುಮ ಹನುಮಂತರಾಯಪ್ಪ, ಕಾಂಗ್ರೆಸ್ ಅಭ್ಯರ್ಥಿ

Leave a Reply