ತಾಕತ್ತು, ದಮ್ಮಿದ್ದರೆ ಖಾಸಗಿ, ಕಾರ್ಪೋರೇಟ್ ಕಂಪನಿಗಳಲ್ಲಿ ಮೀಸಲಾತಿ ಅನ್ವಯಗೊಳಿಸಿ

3 years ago

ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ, ದಮ್ಮಿದ್ದರೆ ಖಾಸಗಿ ಕ್ಷೇತ್ರದಲ್ಲಿ “ಕಾರ್ಪೋರೇಟ ಕಂಪನಿಗಳಲ್ಲಿ” ಮೀಸಲಾತಿ ಅನ್ವಯಗೊಳಿಸಲಿ

ಮುಸ್ಲಿಂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಿತ್ತುಕೊಂಡಿರುವುದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ.
ಸರ್ಕಾರದ ಈ ಕ್ರಮವನ್ನು CPIML RI ರಾಜ್ಯ ಸಮಿತಿ ಖಂಡಿಸುತ್ತದೆ.

ಹಸಿವು,ಬಡತನ,ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಅರಾಜಕತೆ ಮೀತಿ ಮೀರಿದಾಗ, ಜನಾಂಗೀಯ ಕಲಹಗಳ ಕಿಚ್ಚು ಹಚ್ಚಿ ಅಧಿಕಾರದಲ್ಲಿ ಮುಂದುವರಿಯುವ ಪರಂಪರೆ ಆಳುವ ವರ್ಗಗಳು ಇತಿಹಾಸದೂದ್ದಕ್ಕೂ ನಡೆಸಿವೆ.

ಬಿಜೆಪಿ ನೇತೃತ್ವದ ಸರ್ಕಾರ ಅದೆ ಅಸ್ತ್ರವನ್ನು ಉಪಯೋಗಿಸಿಕೊಂಡಿದೆ ಮತ್ತು ಉಪಯೋಗಿಸಿಕೊಳ್ಳುತ್ತಲೆ ಸಾಗಿದೆ.

2019 ರಲ್ಲಿ ಪುಲ್ವಾಮ ದುರ್ಘಟನೆಯನ್ನು ಬಳಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಜಯ ಗಳಿಸಿದ್ದು ಸಾಮಾನ್ಯ ಜನರಿಗೂ ಅರ್ಥವಾಗಿದೆ.

ಮುಖ್ಯ ಮಂತ್ರಿ ಬೊಮ್ಮಾಯಿ ಸರ್ಕಾದ ಎಲ್ಲಾ ಅಸ್ತ್ರಗಳು ಮುಗಿದಿರಬೇಕು. ಹಾಗಾಗಿಯೇ ಕೊನೆಯ ಅಸ್ತ್ರವಾಗಿ ಮೀಸಲಾತಿ ಅಸ್ತ್ರವನ್ನು ಉಪಯೋಗಿಸಿಕೊಂಡಿರಬಹುದು.

ಖಾಸಗೀಕರಣದಿಂದ ದೇಶದ ಸಂಪತ್ತೆಲ್ಲಾ ಕಾರ್ಪೋರೇಟ ಕಂಪನಿಗಳ ವಶವಾಗಿದೆ. ಹೊಸ ರೀತಿಯ ಮೀಸಲಾತಿಯಿಂದ ಜನರಿಗೆ ಯಾವ ಪ್ರಯೋಜನವಿಲ್ಲ.

ಬೊಮ್ಮಾಯಿವರಿಗೆ
ದಮ್ಮದ್ದರೆ, ತಾಕತ್ತಿದ್ದರೆ, ಖಾಸಗಿ ಕ್ಷೇತ್ರದಲ್ಲಿ (ವಿದೇಶಿ ಮತ್ತು ಸ್ವದೇಶಿ ಕಾರ್ಪೋರೇಟ್ ಕಂಪನಿಗಳಲ್ಲಿ) ಮೀಸಲಾತಿ ಕೊಡಿಸುವ ಕಾನೂನ ಜಾರಿ ಮಾಡಲಿ ನೋಡೋಣ?.

ಮುಸ್ಲಿಮರ 4 ರಷ್ಟು ಮೀಸಲಾತಿ ಕಿತ್ತಿಕೊಂಡು, ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ತಲಾ ಎರಡರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ.

ಸರ್ಕಾರದ ಕುತಂತ್ರ ರಾಜಕೀಯ ನೀತಿಯು ಒಕ್ಕಲಿಗ-ಲಿಂಗಾಯತರನ್ನು, ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ರಾಜಕೀಯ ಮಾಡಲಾಗಿದೆ.

ಮುಸ್ಲಿಮ ಜನಾಂಗ ಆರ್ಥಿಕವಾಗಿ ಹಿಂದುಳಿದ ಕಾರಣದಿಂದ ಮೀಸಲಾತಿ ಕೊಡಲಾಗಿದೆ ಹೊರತು, ಧರ್ಮದ ಆಧಾರದಲ್ಲಿ ಅಲ್ಲ. ಈ ವಾಸ್ತವವನ್ನು ಮರೆ ಮಾಚಿ ಜನರಲ್ಲಿ ದಾರ್ಮಿಕ ಉನ್ಮಾದವನ್ನು ಕೆರಳಿಸಲಾಗುತ್ತಿದೆ.

*ಸದಾಶಿವ ವರದಿಯನ್ನು ಎಥ ಪ್ರಕಾರ ಸ್ವೀಕಾರ ಮಾಡದೆ, ಹೊಸ ವ್ಯಾಖ್ಯಾನವನ್ನು ಸೃಷ್ಟಿಸಿ* ಅಸ್ಪೃಶ್ಯರಿಗೆ 6,5.5,1 ಹಾಗೂ ಸ್ಪೃಶ್ಯ ಜಾತಿಗೆ 4.5 ಮೀಸಲಾತಿ ಘೋಷೆಣೆ ಮಾಡಿದ್ದರಿಂದ ಕಾನೂನ ತೊಡಕುಗಳು ಉಂಟಾಗುವ ಸಾಧ್ಯತೆ ಇದೆ.

ಪರಿಶಿಷ್ಟ ಪಂಗಡದ ಜನಾಂಗಕ್ಕೆ ನಿಗದಿ ಮಾಡಿರುವ 7 ರಷ್ಟು ಮೀಸಲಾತಿ ಸೇರಿದಂತೆ ಅನೇಕ ಹಿಂದುಳಿದ ಜಾತಿ ಜನಾಂಗದವರಿಗೆ ಘೋಷಿಸಿರುವ ಮೀಸಲಾತಿಗೆ ಸಂವಿಧಾನಿಕ ತಿದ್ದುಪಡಿ ಮಾಡಲೆಬೇಕು.

EWS ಗೆ ಮೀಸಲಾತಿಗೆ, ರಾತ್ರೋ ರಾತ್ರಿ ಪಾರ್ಲಿಮೆಂಟ್ ಒಪ್ಪಿಗೆ ಕೊಟ್ಟಂತೆ, ಹಿಂದುಳಿದ ಹಾಗೂ ಕೆಳ ಜಾತಿ ಜನರ ಮೀಸಲಾತಿಗೆ ಪಾರ್ಲಿಮೆಂಟಿನಲ್ಲಿ ಸುಲಭವಾಗಿ ಒಪ್ಪಿಗೆ ಸಿಗುವ ಸಾಧ್ಯತೆ ಇಲ್ಲ.

ಏಕಂದರೆ, ಆಂಧ್ರಪ್ರದೇಶ ಸರ್ಕಾರ ಮಾಲ ಮಾದಿಗ ಜನರಿಗೆ ನೀಡಿದ್ದ ಜನ ಸಂಖ್ಯೆ ಆಧಾರಿತ ಮೀಸಲಾತಿಯ ಪ್ರಕರಣ ಹತ್ತಾರು ವರ್ಷಗಳಿಂದ ಸುಪ್ರೀಂ ಕೋರ್ಟಿನಲ್ಲಿ ದೂಳು ತಿನ್ನುತ್ತಿದೆ.

ಮೋದಿ ಸರ್ಕಾರ EWS ಮೀಸಲಾತಿ ಕೊಡುವ ಸಂದರ್ಭದಲ್ಲಿ, ಆಂಧ್ರಪ್ರದೇಶದ ಮಾಲ ಮಾದಿಗ ಜನಾಂಗದ ಜನಸಂಖ್ಯೆಯ ಆಧಾರಿತ ಮೀಸಲಾತಿಯ ಪ್ರಕರಣದ, ಕಾಯ್ದೆಗೆ ತಿದ್ದುಪಡಿ ತಂದಿದ್ದರೆ ಬಿಜೆಪಿಯನ್ನು ನಂಬಬಹುದಾಗಿತ್ತು.

ಈ ಪ್ರಶ್ನೆ ದೇಶದ ಪ್ರತಿಯೊಬ್ಬರನ್ನು ಕಾಡುತ್ತಿದೆ.

ಮಹಾರಾಷ್ಟ್ರ ದ ಮರಾಠಿಯ ಜನಾಂಗಕ್ಕೆ ಮತ್ತು ರಾಜಸ್ತಾನ ಇತರೆ ರಾಜ್ಯಗಳ ಜಾಟ್ ಸಮುದಾಯಕ್ಕೆ ನೀಡಿದ್ದ ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ಹೊಡ್ಡಿದೆ.

ಒಟ್ಟಾರೆ ಬೊಮ್ಮಾಯಿ ಸರ್ಕಾರ ಘೋಷಿಸಿರುವ ಮೀಸಲಾತಿಯ ಗೋಜಲು ಪ್ರಕರಣ ಕೂಡ ಕಾನೂನು ಕುಣಿಕೆಗೆ ಸಿಲುಕುವ ಸಾದ್ಯತೆ ಇದೆ.

ಸರ್ಕಾರದ ಕೋಮುವಾದಿ ಕಲಹ ಹಾಗೂ ಜನಾಂಗೀಯ ಕಿಚ್ಚು ಹಚ್ಚಿ ಚುನಾವಣೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮತ್ತು ಕ್ರಿಮಿನ್ ರಾಜಕೀಯದ, ವಂಚನೆಯ ತಂತ್ರಗಾರಿಕೆಯ ವಿರುದ್ಧ ರಾಜಿರಹಿತವಾಗಿ ಹೋರಾಡಬೇಕಾಗಿದೆ.

ಮುಸ್ಲಿಮ್ ಅಲ್ಪಸಂಖ್ಯಾತರು ಸೇರಿದಂತೆ ದೇಶದ ಯಾವುದೆ ದುರ್ಬಲ ಹಾಗೂ ದುಡಿಯುವ ವರ್ಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ, ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಹಾಗೂ ಜಾತ್ಯಾತೀತ ನಾಗರಿಕರ ಕರ್ತವ್ಯವಾಗಿದೆ.

CPIML RI KARNATAKA ರಾಜ್ಯ ಸಮಿತಿಯು, ಜನಾಂಗೀಯ ಕಲಹದ ಕಿಚ್ಚು ಹಚ್ಚುವ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮತ್ತು ಕೋಮುವಾದಿ ರಾಜಕೀಯ ವಂಚನೆಯ ವಿರುದ್ಧ ಹೋರಾಡಲು ಕರೆ ಕೊಡುತ್ತದೆ.

– ಡಿ.ಹೆಚ್.ಪೂಜಾರ, ರಾಜ್ಯ ಕಾರ್ಯದರ್ಶಿ, CPIML RI. KARNATAKA

Leave a Reply