40 ಲಕ್ಷ ಲಂಚ ಪಡೆಯುವ ವೇಳೆ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಸೆರೆ

3 years ago

ಬೆಂಗಳೂರು: ಕೆ.ಎಸ್.ಡಿ.ಎಲ್.ಗೆ ರಾಸಾಯನಿಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ 80 ಲಕ್ಷ ಲಂಚಕ್ಕೆ ಒಪ್ಪಂದವಾಗಿ, 40 ಲಕ್ಷ ರೂ. ಲಂಚ ಪಡೆಯುವ ವೇಳೆ ಬಿಜೆಪಿಯ ಚನ್ನಗಿರಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಇದನ್ನು ಬೆಂಗಳೂರಿನಲ್ಲಿ ಲೋಕಾಯುಕ್ತ ನಡೆದಿರುವ ಪೊಲೀಸರಿಂದ ಅತಿ ದೊಡ್ಡ ಕಾರ್ಯಾಚರಣೆ ಎನ್ನಲಾಗಿದ್ದು, 40 ಲಕ್ಷ ಲಂಚ ಪಡೆಯುವಾಗ ಬಂಧಿಸಲಾಗಿದೆ. ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಅಧ್ಯಕ್ಷರ ಪರವಾಗಿ ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದಾರೆ.

ಮಾಡಾಳ್ ವಿರುಪಾಕ್ಷಪ್ಪ ಚನ್ನಗಿರಿಯ ಶಾಸಕರಾಗಿದ್ದು, ಕೆ.ಎಸ್.ಡಿ.ಎಲ್.ನ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ಕಚ್ಚಾ ವಸ್ತುಗಳ ಟೆಂಡರ್ ಡೀಲ್  ಗಾಗಿ ಲಂಚ ಬೇಡಿಕೆ ಇಡಲಾಗಿದ್ದು, ಮಾಡಾಳು ವೀರುಪಾಕ್ಷಪ್ಪ ಮಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್.ಐ.ಆರ್ ದಾಖಲಿಸಲಾಗಿದ್ದು ಪ್ರಶಾಂತ್ ಮಾಡಾಳ್ ಮತ್ತು ವಿರುಪಾಕ್ಷಪ್ಪ ಮಾಡಾಳ್ ವಿಚಾರಣೆಗೆ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿರುವ ಕೆಪಿಸಿಸಿ, 40% ಕಮಿಷನ್ನಿಗೆ ದಾಖಲೆ ಕೊಡಿ ಎನ್ನುತ್ತಿದ್ದ Basavaraj Bommai ಅವರೇ, ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ? ನಿಮ್ಮದು #40PercentSarkara ಎನ್ನಲು ಇನ್ನೇನು ಬೇಕು BJP Karnataka? ಎಂದು ಪ್ರಶ್ನಿಸಿದೆ.

Leave a Reply