ಸಿಲೆಂಡರ್ ಬೆಲೆ ಹೆಚ್ಚಳ:ಕೇಂದ್ರ ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ

3 years ago

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ  ಸರ್ಕಾರ ನಿರಂತರವಾಗಿ ಅಡುಗೆ ಅನಿಲ ದರವನ್ನು ಏರುಸುತ್ತಲೇ ಇದೆ. ದೇಶದ ಜನರಿಗೆ ಅಚ್ಛೇದಿನ್ ಎಂಬ ಆಸೆಯನ್ನು ಹುಟ್ಟಿಸಿ ಜನರನ್ನ ಮೋಸಗೊಳಿಸುತ್ತಿರುವ ದೇಶದ ಪ್ರಥಮ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಏರಿಸುತ್ತಿರುವ  ಮೋದಿ ಸರ್ಕಾರ ಬೆಲೆಯನ್ನು ಇಳಿಸುವ ಒಂದು ಅಂಶದ ಕಾರ್ಯಕ್ರಮವನ್ನು ಇಲ್ಲಿವರೆಗೂ ಸಹ ರೂಪಿಸಿಲ್ಲ. ಕಾಂಗ್ರೆಸ್ ಸರ್ಕಾರದ ಯುಪಿಎ  ಅವಧಿಯಲ್ಲಿ 450 ಇದ್ದ ಅಡುಗೆ ಅನಿಲ ಸಿಲೆಂಡರ್ ಇಂದು 1105 ಆಗಿದೆ. ವಾಣಿಜ್ಯ ಅನಿಲ ಸಿಲೆಂಡರ್ ಬೆಲೆ ಒಂದೇ ದಿನ ಇಂದು 350ರೂ ಏರಿಕೆ ಆಗಿದೆ.
ಇದರಿಂದ ಜನಸಾಮಾನ್ಯರ ಬದುಕು ಸಾಗಿಸುವುದು  ಅತ್ಯಂತ ಕಷ್ಟಕರವಾಗಿದೆ. ನರೇಂದ್ರ ಮೋದಿ ಸರ್ಕಾರ ದೇಶದಿಂದ ತೊಲಗದೆ ಹೋದರೆ ಜನರ ಬದುಕು ಅತ್ಯಂತ  ಸಂಕಷ್ಟದಲ್ಲಿ ಮುಳುಗಿ  ಹೋಗುತ್ತದೆ.ಜನರ ಸಮಸ್ಯೆಯನ್ನ  ಅರಿಯದ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವವನ್ನು ಹಿಂಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೂಡಲೇ ಏರಿಸಿರುವ ಬೆಲೆಯನ್ನು ಇಳಿಸಬೇಕು. ದೇಶದ ಜನರಿಗೆ ಅಚ್ಚೆ ದಿನ್ ಹೆಸರಿನಲ್ಲಿ   ಮೋಸ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರ ತೊಲಗಬೇಕೆಂದು ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್, ಸ್ಮೃತಿ ಇರಾನಿ ರವರ ಮುಖವಾಡ ಧರಿಸಿ ವಿನೂತನ  ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ್, ರವಿಶೇಖರ್, ಪ್ರಕಾಶ್,ಬಿ. ಮಂಜುನಾಥ್,ಉಮೇಶ್, ಚಂದ್ರಶೇಖರ್, ಕೆ ಟಿ ನವೀನ್, ಪ್ರಶಾಂತ್, ಅನಿಲ್ ಕುಮಾರ್, ಶ್ರೀಮತಿ ಆಶಾ ರಾಜು, ಶ್ರೀಮತಿ. ಶಾಯಿನ್. ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಎಸ್.ಮನೋಹರ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಬೆಂಗಳೂರು.

Leave a Reply