ಭಾರತೀಯ ಸೇನೆಯ 75ನೇ ಸೇನಾ ದಿನ

4 years ago

ಬೆಂಗಳೂರು: ಭಾರತೀಯ ಸೇನೆಯ 75ನೇ ಸೇನಾ ದಿನದ ಪ್ರಯುಕ್ತ ನಗರದಲ್ಲಿ ವೀರಯೋಧರ ದೇಶಭಕ್ತಿ ವಿಜೃಂಭಿಸಿದೆ.

ರಾಷ್ಟ್ರ ರಾಜಧಾನಿಯ ಹೊರಗೆ ಇದೇ ಮೊದಲ ಬಾರಿಗೆ ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಮೈನವಿರೇಳಿಸುವ ಫಥಸಂಚಲನ ನಡೆದಿದ್ದು ಬೆಂಗಳೂರಿನ ಜನರು ಪುಳಕಿತಗೊಂಡಿದ್ದಾರೆ.

ಹಲಸೂರು ಬಳಿಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಬೆಳಿಗ್ಗೆ ಗೌರವ ನಮನ ಸಲ್ಲಿಸುವ ಮೂಲಕ ಸೇನಾ ದಿನ ಆಚರಣೆ ಶುರುವಾಯಿತು. ನಂತರ ಸೇನೆಯ 8 ರೆಜಿಮೆಂಟ್ ಗಳು ನಡೆಸಿಕೊಟ್ಟ ಪರೇಡ್‍ಯನ್ನು ಸಾರ್ವಜನಿಕರು ವೀಕ್ಷಿಸಿ, ಹರ್ಷೋದ್ಘಾರ ಮಾಡಿದರು.

ಐದನೇ ರೆಜಿಮೆಂಟ್ ಬ್ಯಾಂಡ್‍ರೊಮಾಂಚನ ಮೂಡಿಸಿತು.ಅಶ್ವಾರೋಹಿ ತುಕಡಿ ಈ ಬಾರಿಯ ಪರೇಡ್ ನ ವಿಶೇಷ ಆಕರ್ಷಣೆಯಾಗಿತ್ತು. ಇದೇ ವೇಳೆ ವಿವಿಧ ಕಾರ್ಯಾಚರಣೆಗಳಲ್ಲಿ ವೀರ ಸೈನಿಕರು ತೋರಿದ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿ ಜನರಲ್ ಮನೋಜ್ ಪಾಂಡೆ ಸಾಧಕ ಸೈನಿಕರಿಗೆ ಶೌರ್ಯ ಪದಕಗಳನ್ನು ಗೌರವಿಸಿದರು.

ಧ್ರುವ್ ಮತ್ತು ರುದ್ರ ಹೆಲಿಕಾಪ್ಟಗಳು ಆಕರ್ಷಕ ಕಸರತ್ತುಗಳನ್ನು ಪ್ರದರ್ಶಿಸಿದವು. ವಜ್ರ ಸ್ವಯಂಚಾಲಿತ ಗನ್‍ಗಳು ರಾಕೆಟ್ ಗಳು, ಟಿ-90 ಟ್ಯಾಂಕರ್‍ಗಳು, ಬಿಎಂಪಿ-2 ಇನ್‍ಫೆಂಟ್ರಿ ಯುದ್ಧ ವಾಹನಗಳು, ತಂಗುಸ್ಕಾ ವಾಯುರಕ್ಷಣಾ ವ್ಯವಸ್ಥೆ, 155 ಎಂಎಂ ಬೋಫೋರ್ಸ್ ಗನ್, ಸ್ವಾತಿ ರಾಡಾರ್ ಸೇರಿದಂತೆ ಹಲವು ಅತ್ಯಾಧುನಿಕ ಯುದ್ಧೋಪಕರಗಳನ್ನು  ಪ್ರದರ್ಶಿಸಲಾಯಿತು

ಎಎಸ್‍ಸಿ ಸೆಂಟರ್ ಅಂಡ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸೇನಾದಿನದ ಪ್ರಯುಕ್ತ ರೂಪಿಸಿರುವ ವಿಶೇಷ ಲಾಂಛನವನ್ನು ಬಿಡುಗಡೆ ಮಾಡಿದರು.

ಈ ವೇಳೆ ಸೈನಿಕರು ಟಾರ್ನೆಡೊ ಮೋಟಾರ್ ಸೈಕಲ್ ಇತರ ಕೌಶಲಗಳನ್ನು ಪ್ರದರ್ಶಿಸಿದರು. ಪ್ಯಾರಾ ಮೋಟಾರ್ ಫ್ಲೈಯಿಂಗ್, ಟೆಂಟ್ ಪೆಗಿಂಗ್, ಡೇರ್ ಡೆವಿಲ್ ಜಂಪ್, ಟೇಕ್ವಾಂಡೋ ಸೇರಿದಂತೆ ಹಲವು ಸಮರ ಕಲೆಗಳನ್ನು ಸೈನಿಕರು ಪ್ರದರ್ಶಿಸಿದರು.

Leave a Reply