ದೊಡ್ಡವರ ಮಾತು ಕೇಳಿದೆ, ನೋವು ಮಾಡಿಕೊಂಡೆ
ನನ್ನ ಈ ಪರಿಸ್ಥಿತಿಗೆ ಕಾರಣರಾದವರ ಹತ್ತಿರ ವರಿಷ್ಠರು ಚರ್ಚೆ ಮಾಡಿ ಬಗೆಹರಿಸಬೇಕು
ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ತೊಂದರೆಯಾಗಿಲ್ಲ
ಕಾಂಗ್ರೆಸ್ ಪಕ್ಷದ ನಾಯಕರನ್ನ ಭೇಟಿ ಮಾಡಿಲ್ಲ ಮತ್ತು ನಾನು ಲೋಕಸಭೆಗೆ ಟಿಕೇಟು ಕೇಳಿಲ್ಲ
ಬೆಂಗಳೂರು: ವಿಜಯನಗರದ ವಿ.ಸೋಮಣ್ಣರವರ ಕಾರ್ಯಾಲಯದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮಾಜಿ ಸಚಿವರಾದ ವಿ.ಸೋಮಣ್ಣ, ಶಿವನಗೌಡ ನಾಯಕ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಇದೇ ವೇಳೆ ಮಾತಾಡಿದ ವಿ.ಸೋಮಣ್ಣ, ನಾಡಿನ ಜನರಿಗೆ ಹೊಸವರ್ಷದ ಶುಭಾಶಯಗಳು. ಯುಗದ ಕವಿ, ಜಗದ ಕವಿ, ಮನುಜ ಮತ ವಿಶ್ವಪಥ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಕುವೆಂಪುರವರು. ಹಿಂದಿನ ತಪ್ಪು ಮರೆತು, ಜೀವನದಲ್ಲಿ ಹೊಸ ಚಿಂತನೆಯಲ್ಲಿ ಸಾಗೋಣ. ಸೂರ್ಯ ಚಂದ್ರ ಇರುವರಿಗೂ ಕುವೆಂಪು ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಕುವೆಂಪುರವರ ಸ್ಮರಣೆಯಲ್ಲಿ ರಸ್ತೆ ನಿರ್ಮಾಣ ಮಾಡಲಿದೆ ಎಂದರು.
ಬದ್ಧತೆ, ನಡುವಳಿಕೆ ಜೀವನದಲ್ಲಿ ಬಹಳ ಮುಖ್ಯ. ಜೀವನದಲ್ಲಿ ಬದ್ಧತೆಯಿಂದ ನಡೆದುಕೊಂಡಾಗ ನೋವು ಆಗುವುದು ಸಹಜ ಅದರೆ ಅದರ ಮಾರ್ಗ ಬಿಡಬಾರದು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿರವರ ಮಾರ್ಗದರ್ಶನದಲ್ಲಿ 45 ವರ್ಷಗಳಿಂದ ಸಾಮಾಜಿಕ ಜೀವನದಲ್ಲಿ ದುಡಿಯುತ್ತಿದ್ದೇನೆ. ಕುವೆಂಪುರವರ ದೂರದೃಷ್ಟಿ ಚಿಂತನೆಗಳನ್ನು ಇಡೀ ವಿಶ್ವವೇವೆ ಮೆಚ್ಚಿಕೊಂಡಿದೆ ಎಂದರು.
ರಾಜಕೀಯದಲ್ಲಿ ಅನಾನುಕೂಲಕತೆ ಆಗುವುದು ಸಹಜ, ನಾವು ಮಾಡಿರುವ ಅಭಿವೃದ್ಧಿ ಕೆಲಸ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನಿಂತಿದೆ. ಪ್ರಧಾನಿ ನರೇಂದ್ರಮೋದಿ ಅವರ ಆಡಳಿತದಲ್ಲಿ ಭವ್ಯ ಭಾರತ ನಿರ್ಮಾಣವಾಗಲಿದೆ. 140 ಕೋಟಿ ಭಾರತೀಯರನ್ನ ಒಟ್ಟಾಗಿ ತೆಗೆದುಕೊಂಡು ಹೋಗಲು ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರಮೋದಿರವರ ಪ್ರಧಾನಿಯಾಗಲಿದ್ದಾರೆ. ರಾಮಜನ್ಮ ಭೂಮಿ ಆಗಬಾರದು ಎಂದು ಹೋರಾಟ ಮಾಡಿದ್ದ ವ್ಯಕ್ತಿಯೆ ಪ್ರಧಾನಿ ನರೇಂದ್ರ ಮೋದಿರವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ರಾಜಕೀಯ ನಿಂತ ನೀರಲ್ಲ, ದೊಡ್ಡವರ ಮಾತು ಕೇಳಿದೆ, ನೋವು ಮಾಡಿಕೊಂಡೆ. ನನ್ನ ಈ ಪರಿಸ್ಥಿತಿಗೆ ಕಾರಣರಾದವರ ಹತ್ತಿರ ವರಿಷ್ಠರು ಚರ್ಚೆ ಮಾಡಿ ಬಗೆಹರಿಸಬೇಕು ಮತ್ತು ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರನ್ನ ಭೇಟಿ ಮಾಡಿಲ್ಲ ಮತ್ತು ನಾನು ಲೋಕಸಭೆಗೆ ಟಿಕೇಟು ಕೇಳಿಲ್ಲ ಎಂದು ಇದೇ ವೇಳೆ ಸ್ಪಷ್ಟೀಕರಣ ನೀಡಿದರು.
ಜೊತೆಗೆ, ಬಡವರಿಗೆ, ಸಾಮಾನ್ಯರಿಗೆ ಸ್ಪಂದಿಸಿದ್ದೇನೆ. ನಾನು ಮಾಡಿದ ತಪ್ಪಿಗೆ ಕಾರ್ಯಕರ್ತರು ನೋವು ಆನುಭವಿಸುತ್ತಿದ್ದಾರೆ ಎಂದರು.
ಸೋಮಣ್ಣ ಪ್ರತಿಷ್ಠಾನದ ಕೋಶಾಧ್ಯಕ್ಷರಾದ ಡಾ.ನವೀನ್ ಸೋಮಣ್ಣ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಾಸೇಗೌಡ, ರೂಪಲಿಂಗೇಶ್ವರ್, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.




