ಮಾದರಿ ಕ್ರೀಡಾಂಗಣ, ಅತಿ ಶೀಘ್ರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ: ಎಸ್.ಸುರೇಶ್ ಕುಮಾರ್

4 years ago

ಶ್ರೀ ರಾಮಮಂದಿರ ಆಟದ ಮೈದಾನ ಪ್ರಗತಿ ಪರಿಶೀಲನೆ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್ನನಲ್ಲಿರುವ ಶ್ರೀ ರಾಮಮಂದಿರ ಆಟದ ಮೈದಾನ 6 ಕೋಟಿ ವೆಚ್ಚದಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಸ್ಥಳಕ್ಕೆ ಮಾಜಿ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ಎಸ್.ಸುರೇಶ್ ಕುಮಾರ್, ಶ್ರೀ ರಾಮಮಂದಿರ ಆಟದ ಮೈದಾನ ಐತಿಹಾಸಿಕ, ಇತಿಹಾಸ ಪ್ರಸಿದ್ದಿ ಇದೆ. ರಾಷ್ಟ್ರ ನಾಯಕರು, ಸಾಮಾಜಿಕ ಹೋರಾಟಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಕಂಡ ಶ್ರೀ ರಾಮಮಂದಿರ ಆಟದ ಮೈದಾನವನ್ನು ಸಾರ್ವಜನಿಕರ ಉಪಯೋಗಕ್ಕೆ ಮಾದರಿ ಕ್ರೀಡಾಂಗಣ ಮಾಡಲು ಚಾಲನೆ ನೀಡಲಾಗಿದೆ ಎಂದರು.
ಕ್ರೀಡಾಂಗಣದಲ್ಲಿ ಸಾರ್ವಜನಿಕರು ಪಂದ್ಯ ನೋಡಲು ಆಸನ ವ್ಯವಸ್ಥೆ, ಬಿಸಿಲು, ಮಳೆಯಿಂದ ರಕ್ಷಣೆಗೆ ಟೆನ್ನಿಲ್ ರೂಫ್ ಮತ್ತು ಮಳೆ ನೀರು ಸಾಗಲು ಒಳಚಂರಡಿ ವ್ಯವಸ್ಥೆ ಮತ್ತು ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಂಗಣವನ್ನು ಸರ್ವರೀತಿಯಲ್ಲಿ ಆಧುನೀಕರಣಗೊಳಿಸಿ ನಾಲ್ಕು ತಿಂಗಳಲ್ಲಿ ಲೋಕರ್ಪಣೆ ಮಾಡಲಾಗುವುದು ಎಂದು ಹೇಳಿದರು.

Leave a Reply