ಚಾರ್ಜ್ ಗೆ ಹಾಕಿದ್ದ ಮೊಬೈಲ್ ಸ್ಫೋಟ: ಮಗು ಬಲಿ

4 years ago

ಲಖ್ನೋ: ಸೋಲಾರ್ ಪ್ಯಾನೆಲ್ ಮೂಲಕ ಮೊಬೈಲ್ ಚಾರ್ಜ್ ಮಾಡುತ್ತಿದ್ದ ವೇಳೆ ಬ್ಯಾಟರಿ ಸ್ಫೋಟಿಸಿ ಮಗುವೊಂದು ಬಲಿಯಾದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
8 ತಿಗಂಗಳ ನೇಹಾ ಬಲಿಯಾದ ಹಸುಳೆ. ತಾಯಿ ಮಗುವನ್ನು ಮಂಚದ ಮೇಲೆ ಮಲಗಿಸಿ ಬಟ್ಟೆ ತೊಳೆಯಲು ತರೆಳಿದ್ದರು. ಈ ವೇಳೆಯಲ್ಲಿ ಮೊಬೈಲ್ನ್ನು ಅನ್ನು ಚಾರ್ಜ್ ಮಾಡಲು ಹಾಕಿದ್ದರು. ಚಾರ್ಜ್ ಮಾಡುವ ವೇಳೆ ಲಾವಾ ಮೊಬೈಲ್ ಕೆಲ ಸಮಯದ ನಂತರ ಸ್ಫೋಟವಾಗಿದೆ. ಶಬ್ದ ಹಾಗೂ ಮಗುವಿನ ಅಳುವಿನ ಸದ್ದು ಕೇಳಿ ಓಡಿ ಬಂದ ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದ್ದಾರೆ.
ಮೊಬೈಲ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ನೇಹಾಳ ಬೆನ್ನು, ಕೈ ಸಂಪೂರ್ಣವಾಗಿ ಸುಟ್ಟಿದೆ. ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಮಗು ಕಾಲವಶವಾಗಿದೆ.

Leave a Reply