ಬೆಂಗಳೂರು: ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹಣವಿಲ್ಲದಿದ್ದರಿಂದ ಪರಿತಪಿಸಿದ ಮೊಮ್ಮಗ ಹಣಕ್ಕಾಗಿ ತನ್ನ ಅಜ್ಜಿ ಮನೆಗೆ ಕನ್ನ ಹಾಕಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಶ್ರೀರಾಂಪುರದ ಓಕಳೀಪುರಂನ ನಿವಾಸಿ ಯಶವಂತ್(21)ಬಂಧಿತ ಆರೋಪಿ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಬಂಧಿತನಿಂದ 108 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳು ಸೇರಿ 14.50 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.
ಕಂಠೀರವನಗರದ ಜಯಮ್ಮ ಅವರು ಕಳೆದ ಜ.1 ರಂದು ಮಧ್ಯಾಹ್ನ ಮನೆಯಲ್ಲಿ ಒಂಟಿಯಾಗಿರುವಾಗ ಅವರು ಮಗಳ ಮಗ ಬಂದಿದ್ದ. ಆಗ ಅಜ್ಜಿ ಮೊಮ್ಮಗನನ್ನು ಮನೆಯಲ್ಲಿ ಬಿಟ್ಟು ಪೂಜೆಗೆ ಹೂ ತರೋಣವೆಂದು ಜಯಮ್ಮ ಅಂಗಡಿಗೆ ಹೋಗಿದ್ದರು. ಅವರು ಹೂವು ತೆಗೆದುಕೊಂಡು ಮನಗೆ ವಾಪಸ್ ಬಂದು ನೋಡಿದಾಗ ಮೊಮ್ಮಗ ಯಶವಂತ್ ಮನೆಯಲ್ಲಿರಲಿಲ್ಲ.
ನಂತರ ಆತನಿಗೆ ಪೋನ್ ಕರೆ ಮಾಡಲಾಗಿ ಫೋನನ್ನು ಸ್ವೀಟ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ಅಜ್ಜಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ನೋಡಲಾಗಿ, ಅವುಗಳು ನಾಪತ್ತೆ ಆಗಿದ್ದವು.
ಮನೆಗೆ ಬಂದಿದ್ದ ಮೊಮ್ಮಗನೇ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಅನುಮಾನ ವ್ಯಕ್ತಪಡಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
ಪ್ರಕರಣದ ತನಿಖೆಯನ್ನು ಕೈಗೊಂಡ ಇನ್ಸ್‌ಪೆಕ್ಟರ್ ಗಣಪತಿ ಆರ್.ಎಲ್ ಮೊಮ್ಮಗನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಚಿನ್ನಾಭರಣಗಳನ್ನು ಆತನ ಬಳಿಯೇ ಇಟ್ಟುಕೊಂಡಿದ್ದು, ಉಳಿದ ಚಿನ್ನ ಬೆಳ್ಳಿಯ ವಸ್ತುಗಳನ್ನು ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು, ಅಂಗಡಿಯಿಂದ 108 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿ.ಎಸ್.ನೇಮಗೌಡ ಹೇಳಿದರು.
ಆರೋಪಿ ಪತ್ನಿ ಗರ್ಭಿಣಿಯಾಗಿದ್ದು ಖರ್ಚಿಗೆ ಹಣ ಇಲ್ಲದಿದ್ದರಿಂದ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ ಎಂದರು.




