ಬೆಂಗಳೂರು: ರಾಜಧಾನಿ ಮಹಾನಗರ ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ರಸ್ತೆಯಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ವಾಹನದಲ್ಲಿನ 7.11 ಕೋಟಿ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ತೀವ್ರ ಆತಂಕ ಮೂಡಿಸಿದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರು ಪೊಲೀಸರು, ಘಟನೆ ನಡೆದ 46 ಗಂಟೆಗಳಲ್ಲೇ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಲ್ಲಿಯವರೆಗೆ ಐವರನ್ನು ಬಂಧಿಸಿ 6.3 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಕೂಡ ಶಾಮೀಲಾಗಿದ್ದು, ಆತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ದರೋಡೆ ಪ್ರಕರಣ ದಾಖಲಾದ ಕೂಡಲೇ ದರೋಡೆಕೋರರ ಬೆನ್ನಟ್ಟಿದ್ದ ಪೊಲೀಸರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಪತ್ತೆಹಚ್ಚಿದ್ದರು. ಈ ಕಾರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ತಂದು ಪರಿಶೀಲನೆ ನಡೆಸಿದಾಗ ಯುಪಿ ನೋಂದಣಿಯ ನಂಬರ್ ಪ್ಲೇಟ್ ಅಳವಡಿಸಿ ಗ್ಯಾಂಗ್ ಪರಾರಿಯಾಗಿರುವುದು ಪತ್ತೆಯಾಯಿತು.
ದರೋಡೆಕೋರರಿಗೆ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರನ್ನು ಎಂಜಿನ್ನ ಚಾರ್ಸಿ ನಂಬರ್ ಆಧರಿಸಿ ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಷ್ಟು ಮಾಹಿತಿ ಬೆಳಕಿಗೆ ಬಂದು ಕಾರ್ಯಾಚರಣೆ ತೀವ್ರಗೊಳಿಸಲಾಯಿತು. ಇದಲ್ಲದೇ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪನಾಯ್ಕ್, ಕೇರಳ ಮೂಲದ ಝೇವಿಯರ್ ಇಬ್ಬರನ್ನು ಬಂಧಿಸಲಾಗಿತ್ತು.
ದರೋಡೆ ಗ್ಯಾಂಗ್ ನಲ್ಲಿ ಪೇದೆ ಅಣ್ಣಪ್ಪ ಮಾತ್ರವಲ್ಲ, ಬದಲಾಗಿ ಸಿಎಂಎಸ್ ಮಾಜಿ ಉದ್ಯೋಗಿಯೂ ಕೃತ್ಯಕ್ಕೆ ಸಾಥ್ ನೀಡಿದ್ದ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಸಿಎಂಎಸ್ನಲ್ಲಿ ಹಿಂದೆ ಕೆಲಸಮಾಡಿದ್ದ ಝೇವಿಯರ್ ನನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಒಂದು ವರ್ಷದ ಹಿಂದೆ ಸಿಎಂಎಸ್ನಿಂದ ಕೆಲಸ ಬಿಟ್ಟಿದ್ದ ಎಂಬುದು ಗೊತ್ತಾಗಿದೆ.
ಬಾಣಸವಾಡಿಯಲ್ಲಿ ಕ್ರೈಂ ಬೀಟ್ ಮಾಡುತ್ತಿದ್ದ ಪೇದೆ ಅಣ್ಣಪ್ಪನನ್ನು ಹೊಯ್ಸಳಕ್ಕೆ ವರ್ಗಾಯಿಸಲಾಗಿತ್ತು. ಮಾಡಲು ಕೆಲಸವಿಲ್ಲದೆ ಅಣ್ಣಪ್ಪ ಮತ್ತು ಝೇವಿಯರ್ ಇಬ್ಬರೂ ಪ್ರತಿದಿನ ಸೇರಿ ಮಾತನಾಡುತ್ತಿದ್ದರು. ಈ ವೇಳೆ ಸಿಎಂಎಎಸ್ನ ಹಣ ರವಾನೆಯ ಎಲ್ಲಾ ವಿಚಾರವನ್ನು ಅಣ್ಣಪ್ಪ ಬಳಿ ಝೇವಿಯರ್ ಹೇಳಿಕೊಂಡಿದ್ದ. ಹಣ ದರೋಡೆಗೆ ಆರೋಪಿಗಳು ಯೋಚಿಸಿದ್ದು, ಸಿಎಂಎಸ್ ಸಂಚು ನಂದು, ಎಸ್ಕೇಪ್ ಪ್ಲ್ಯಾನ್ ನಿಂದು ಎಂದು ಝೇವಿಯರ್ ಅಣ್ಣಪ್ಪಗೆ ತಿಳಿಸಿದ್ದ ಎನ್ನಲಾಗಿದೆ.
ರೂಪಿಸಿದ್ದ ಸಂಚಿನಂತೆ ಹಣ ಸಾಗಿಸುತ್ತಿದ್ದ ವಾಹನ ತಡೆದು 7 ಕೋಟಿ 11 ಲಕ್ಷ ಹಣವನ್ನು ಗ್ಯಾಂಗ್ ದೋಚಿ ಪರಾರಿಯಾಗಿತ್ತು. ಆದರೆ ದರೋಡೆ ಸಂದರ್ಭ ಪ್ರಕರಣದ ಮಾಸ್ಟರ್ ಮೈಂಡ್ಗಳಾದ ಝೇವಿಯರ್ ಮತ್ತು ಅಣ್ಣಪ್ಪ ಇಬ್ಬರೂ ಸ್ಥಳಕ್ಕೆ ಹೋಗಿರಲಿಲ್ಲ. ಬದಲಾಗಿ ದರೋಡೆ ಹೇಗೆ ಮಾಡಬೇಕು, ಹೇಗೆ ಪರಾರಿಯಾಗಬೇಕು ಎನ್ನುವ ಪಕ್ಕಾ ರೂಟ್ ಪ್ಲ್ಯಾನ್ ಮಾಡಿಕೊಟ್ಟು ಕಾದು ಕುಳಿತಿದ್ದರು ಎಂಬುದು ಪೊಲೀಸರ ತನಿಖೆವೇಳೆ ಗೊತ್ತಾಗಿದೆ.
ದರೋಡೆ ಕೃತ್ಯ ನಗರವಲ್ಲದೇ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿತ್ತು ಬಾಣಸವಾಡಿಯ ಕಲ್ಯಾಣ ನಗರದ ದರೋಡೆ ಗ್ಯಾಂಗ್ ನ ಇಬ್ಬರು ಸೇರಿ ಇಲ್ಲಿಯವರೆಗೆ ಬಂಧಿತರ ಸಂಖ್ಯೆ ಐದಕ್ಕೇರಿದಂತಾಗಿದೆ.



