ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸಿ ಹೊರಡಿಸಿದ್ದ ಆದೇಶ’. ರಾತ್ರೋರಾತ್ರಿ ಯೂಟರ್ನ್ ಹೊಡೆದ ಭ್ರಷ್ಟ ರಕ್ಷಕ ಬಿಜೆಪಿ ಸರ್ಕಾರಕ್ಕೆ ಚಾಟಿಯೇಟು ಬಿದ್ದಿದೆ ಕಾಂಗ್ರೆಸ್ ಎಂದು ಟೀಕಿಸಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಗೆ ಚಾಟಿ ಬಿಸಿರುವ ರಾಜ್ಯ ಕಾಂಗ್ರೆಸ್ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ತಜ್ಞರ ಸಲಹೆ ಪಡೆಯದೇ ಮನಸಿಗೆ ತೋಚಿದಂತೆ ಆದೇಶ ಮಾಡುವುದು, ಸಾರ್ವಜನಿಕರಿಂದ ಇದಕ್ಕೆ ವಿರೋಧ ವ್ಯಕ್ತ ಆಗುತ್ತಿದ್ದಂತೆ ಅದನ್ನು ಹಿಂದಕ್ಕೆ ಪಡೆಯುವುದು BJP Karnataka ಸರ್ಕಾರಕ್ಕೆ ಅಭ್ಯಾಸವಾಗಿದೆ. ಇದಕ್ಕೆ ಹೊಸ ಸೇರ್ಪಡೆ ‘ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸಿ ಹೊರಡಿಸಿದ್ದ ಆದೇಶ’. ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಭ್ರಷ್ಟ ರಕ್ಷಕ ಬಿಜೆಪಿ ಸರ್ಕಾರಕ್ಕೆ ಚಾಟಿಯೇಟು ಬಿದ್ದಿದೆ. ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಟೀಕಿಸಿದೆ.
ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯಲು ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧಗಳೇ ಬರಬೇಕೆ? ಇಂತಹ ವಿಚಾರದಲ್ಲಿ ಸಾಮಾನ್ಯ ತಿಳುವಳಿಕೆಯೂ ಇಲ್ಲದಿದ್ದರೆ ಹೇಗೆ? ಎಂದು ವ್ಯಂಗ್ಯ ವಾಡಿದೆ.
ರಾಜ್ಯ ಬಿಜೆಪಿ ಸರ್ಕಾರ ‘ಮದ್ಯ’ ರಾತ್ರಿ’ ಕೆಲಸಗಳನ್ನು ನಿಲ್ಲಿಸಬೇಕು ಹಾಗೂ ಹಿಂದಿ ಭಾಷೆ ಮೇಲಿನ ಪ್ರೇಮದ ಉತ್ತುಂಗದಲ್ಲಿ ಕನ್ನಡ ಭಾಷೆಯ ಕೊಲೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದೆ.




