ವಾಣಿವಿಲಾಸ ಸಾಗರದಲ್ಲಿ ನವೆಂಬರ್ ನಿಂದ ಬೋಟಿಂಗ್ ಆರಂಭಿಸಲಾಗುವುದು: ಹೆಚ್.ಕೆ.ಪಾಟೀಲ್

10 months ago

ಬೆಂಗಳೂರು: ಭಾರತದ ಭೂಪಟದ ರೀತಿಯಲ್ಲಿರುವ ಹಿರಿಯೂರಿನ ವಾಣಿವಿಲಾಸ ಸಾಗರದಲ್ಲಿ ಬರುವ ನವೆಂಬರ್ ನಿಂದ ಬೋಟಿಂಗ್ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಖಾತೆ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ವಾಣಿವಿಲಾಸ ಸಾಗರದಲ್ಲಿ ಕಯಾಕಿಂಗ್, ಜೆಟ್ ಸ್ಕೀ, ಬನಾನ ರೈಡ್ ಮುಂತಾದ ಚಟುವಟಿಕೆಗಳನ್ನು ನಡೆಸಲು ಜಲಸಂಪನ್ಮೂಲ ಇಲಾಖೆಯಿಂದ ನಿರಪೇಕ್ಷಣಾ ಪತ್ರದ ನಿರೀಕ್ಷೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಮೂಲಕ ಚಿತ್ರದುರ್ಗದ ಮಾರಿ ಕಣಿವೆ ಎಂದು ಕರೆಯಲಾಗುವ ವಾಣಿ ವಿಲಾಸ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ತರುವ ಸೂಚನೆ ಸಿಕ್ಕಿದೆ. ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚಾಲನೆ ಸಿಕ್ಕಂತಾಗಿದೆ.

Leave a Reply