ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ದೇಶದ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ಒಂದು ತಿಂಗಳ ಸಂಬಳವನ್ನು ದೇಶದ ಸೈನಿಕರ ನಿಧಿಗೆ ಅರ್ಪಿಸಿ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಭಾರತ ದೇಶಕ್ಕೆ ಬೇಕಾದಂತಹ ಆರ್ಥಿಕ ಶಕ್ತಿಯನ್ನು ತುಂಬುವ ಸಲುವಾಗಿ ದೇಶದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಒಂದು ದಿನದ ಸಂಬಳವನ್ನು ಅದೇ ರೀತಿ ದೇಶದ ವಿವಿಧ ಹಂತದಲ್ಲಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ಕೂಡಲೇ ಭಾರತ ದೇಶದ ಸೈನಿಕರ ನಿಧಿಗೆ ಅರ್ಪಿಸಬೇಕೆಂದು ಅನ್ಯರಿಗೆ ಈ ಮೂಲಕ ಮಾದರಿಯಾಗಬೇಕೆಂದು ಅವರಲ್ಲಿ ಕೋರುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




