ಹೈದರಾಬಾದ್: ಬೀದರ್ನಲ್ಲಿ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಿಡಿಯುವ ವೇಳೆ ಮತ್ತೆ ಗುಂಡು ಹಾರಿಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಬೀದರ್ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್ ಸಿಬ್ಬಂದಿ ತೆರಳಿದ್ದಾಗ, ದರೋಡೆಕೋರರು ಗುಂಡು ಹಾರಿಸಿ ಒಬ್ಬನನ್ನು ಕೊಂದು ಹಣದ ಸಮೇತ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬೆನ್ನುಬಿದ್ದಿದ್ದ ಪೊಲೀಸರು, ಸುಳಿವು ಆಧರಿಸಿ ಹೈದರಾಬಾದ್ನಲ್ಲಿ ಶೋಧ ನಡೆಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿಯೂ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್ ಟ್ರಾವೆಲ್ ಮ್ಯಾನೇಜರ್ ಗಾಯಗೊಂಡಿದ್ದಾರೆ.
ರಾಯಪುರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದ ದರೋಡೆಕೋರರು: ಬೀದರ್ನಲ್ಲಿ ಹಣ ದೋಚಿಕೊಂಡು ಬಂದಿದ್ದ ಆರೋಪಿಗಳು ಹೈದರಾಬಾದ್ ಮೂಲಕ ಛತ್ತೀಸ್ಗಢದ ರಾಯಪುರಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಮೂವರು ದುಷ್ಕರ್ಮಿಗಳು ಖಾಸಗಿ ಬಸ್ ಟ್ರಾವೆಲ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ 7.30 ಕ್ಕೆ ಬಸ್ ಹೊರಡಬೇಕಿತ್ತು. ಅದಕ್ಕೂ ಮೊದಲು ಆರೋಪಿಗಳನ್ನು ಟ್ರಾವೆಲ್ ಏಜೆನ್ಸಿ ಅವರನ್ನು ಪಿಕಪ್ ಮಾಡಿದ್ದಾರೆ.
ಈ ವೇಳೆ ಆರೋಪಿಗಳ ಲಗೇಜ್ ಅನ್ನು ಬಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡುಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನಿಸಿದಾಗ ಅವರಿಗೇ ಸ್ವಲ್ಪ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ಅದೇ ಪಿಕಪ್ ವ್ಯಾನ್ನಲ್ಲಿ ಇದ್ದ ಕರ್ನಾಟಕ ಪೊಲೀಸರು ಇದನ್ನ ಗಮನಿಸಿದ್ದಾರೆ.
ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್: ಪೊಲೀಸರು ಎಂದು ತಿಳಿದ ತಕ್ಷಣವೇ ಆರೋಪಿಗಳು ತಮ್ಮ ಬ್ಯಾಗ್ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್ ಹೊಕ್ಕಿದೆ. ಸ್ಥಳದಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ. ಪೊಲೀಸರು ಹರಸಾಹಪಟ್ಟು ಒಬ್ಬನನ್ನು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅಹಮ್ಮದ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಮತ್ತೊಂದು ಕಡೆ ಮಾಹಿತಿ ಪಡೆದು ನಗರದ ಪೂರ್ವ ವಲಯ ಡಿಸಿಪಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ತಪ್ಪಿಸಿಕೊಂಡವರ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ದುಷ್ಕರ್ಮಿಗಳಿಂದ ಲೂಟಿ ಮಾಡಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಅಫ್ಜಲ್ಗಂಜ್ ಪೊಲೀಸರ ವಶದಲ್ಲಿದ್ದು ಆತನನ್ನು ಬೀದರ್ ಪೊಲೀಸರು ಕಸ್ಟಡಿಗೆ ನೀಡಲು ಕೋರಲಿದ್ದಾರೆ.




