ಸುಳ್ಳಿನ ಮೆರವಣಿಗಾಗಿ ಸತ್ಯದ ಕೊಲೆ ಮಾಡಿ ಸಮಾಧಿ ಮಾಡುವ ಪ್ರಯತ್ನ “ಭ್ರಷ್ಟ ಜನತಾ ಪಾರ್ಟಿ“ಯವರದ್ದು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕೂಸನ್ನು ಚಿವುಟುವುದೂ ಬಿಜೆಪಿಯವರೇ, ತೊಟ್ಟಿಲು ತೂಗುವುದೂ ಬಿಜೆಪಿಯವರೇ, ಬಿಜೆಪಿಯವರ ಈ ಕಳ್ಳಾಟ ವಕ್ಫ್ ವಿಚಾರದಲ್ಲಿ ಬಟಾಬಯಲಾಗಿದೆ.
ಅಂದಹಾಗೆ, ಬಿಜೆಪಿಗರು ನಡೆಸುತ್ತಿರುವುದು ರೈತರ ಪರವಾದ ಹೋರಾಟವಲ್ಲ, ವಿಜಯೇಂದ್ರ ಹಠಾವೋ ಹೋರಾಟ! ಈ ಸತ್ಯ ಜಗನ್ನಾಥ ಭವನದ ಪ್ರತಿ ಕಿಟಕಿ ಬಾಗಿಲುಗಳಿಗೂ ತಿಳಿದಿದೆ!
* 2018 – 2023ರ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆ ನಡೆಸಿ ವಕ್ಫ್ ಆಸ್ತಿ ಗುರುತಿಸಿ, ತೆರವುಗೊಳಿಸಲು ಸೂಚನೆ ನೀಡಿದ್ದು ಏಕೆ?
* 2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರ್ಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ?
* ಹಿಂದಿನ ಬಿಜೆಪಿ ಸರ್ಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ?
* ಹಿಂದಿನ ಬಿಜೆಪಿ ಸರ್ಕಾರ 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ?
* ರೈತರ ಹೆಸರಲ್ಲಿರುವ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಕುಮಾರ್ ಬಂಗಾರಪ್ಪ ಸಮಿತಿ ಸೂಚಿಸಿದ್ದು ಏಕೆ?
* ರಾಜ್ಯದಾದ್ಯಂತ ತಾಲೂಕುವಾರು ವಕ್ಫ್ ಆಸ್ತಿಗಳನ್ನು ಪರಿಶೀಲಿಸಿ ಭೂಮಿ ಸಾಫ್ಟ್ ವೇರ್ ನಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಸೂಚಿಸಿದ್ದು ಏಕೆ?
* ಬಿಜೆಪಿ ಸರ್ಕಾರದ ಅವಧಿಯ ಕುಮಾರ್ ಬಂಗಾರಪ್ಪ ಸಮಿತಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯನ್ನು ವಕ್ಫ್ ಆಸ್ತಿ ಎಂದು ನೀಡಿದ್ದ ವರದಿಯನ್ನು ಸದನದಲ್ಲಿ ಅಂಗೀಕರಿಸಲಾಗಿತ್ತು, ಆಗ ಬಿಜೆಪಿಯವರ ಪ್ರಜ್ಞೆ ಎಲ್ಲಿ ಉದುರಿ ಬಿದ್ದಿತ್ತು?
ಈ ಎಲ್ಲಾ ಪ್ರಶ್ನೆಗಳಿಗೆ
ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂದಿದ್ದ ಬೊಮ್ಮಾಯಿಯವರು ಉತ್ತರಿಸುತ್ತಾರೋ?
ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪನವರು ಉತ್ತರಿಸುತ್ತಾರೋ?
ಅಥವಾ ವಕ್ಫ್ ವಿಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಹೊರಡುತ್ತಿರುವ ಬಿಜೆಪಿಯ A ಟೀಮ್, B ಟೀಮ್ ನಾಯಕರು ಜನತೆಗೆ ಈ ಸತ್ಯಗಳನ್ನು ತಿಳಿಸಿ ಬರುತ್ತಾರೆಯೇ?
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ




