ಉಮರ್ ಖಾಲಿದ್…ಮತ್ತೆ ತಾರೀಕ್…
ಒಬ್ಬ ನ್ಯಾಯಾಧೀಶ ರಜೆಯ ಮೇಲಿದ್ದರಿಂದ ಕೋರ್ಟು ವಿಚಾರಣೆಯನ್ನು ಮುಂದೂಡಿತು
ನಿನ್ನೆ (ಅಕ್ಟೊಬರ್ 7)ಎರಡು ತಿಂಗಳ ನಂತರ ಮತ್ತೆ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್.. ಇನ್ನಿತರರ ಜಾಮೀನು ಅರ್ಜಿ ದೆಹಲಿ ಹೈಕೋರ್ಟಿನ ದ್ವಿಸದಸ್ಯ ಪೀಠದ ಮುಂದೆ ಬಂದಿತ್ತು….
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಒಬ್ಬ ನ್ಯಾಯಾಧೀಶ (ನ್ಯಾ. ನವೀನ್ ಚಾವಲಾ) ಅವರು ರಜೆಯ ಮೇಲಿದ್ದರಿಂದ ಕೋರ್ಟು ವಿಚಾರಣೆಯನ್ನು ಮುಂದೂಡಿತು…
ಯಾವತ್ತಿಗೆ… 50 ದಿನಗಳ ನಂತರ ನವಂಬರ್ 25 ಕ್ಕೆ….!
ನಿನ್ನೆ ಈ ಹೊಸ ಪೀಠದ ಮುಂದೆ ಮತ್ತೊಮ್ಮೆ ಹೊಸದಾಗಿ ಜಾಮೀನು ವಿಚಾರಣೆ ನಿಗದಿಯಾಗಿತ್ತು… ಏಕೆಂದರೆ ಇವರ ಹಳೆಯ ಜಾಮೀನು ಅರ್ಜಿಯನ್ನು ನ್ಯಾ. ಸುರೇಶ್ ಕುಮಾರ್ ಕೈಟ್ ಪೀಠ ಸಂಪೂರ್ಣವಾಗಿ ವಿಚಾರಣೆ ನಡೆಸಿತ್ತು… ಆದರೆ ಅದರ ಬಗ್ಗೆ ತೀರ್ಪು ಕೊಡುವ ಮುಂಚೆ ಅವರನ್ನು ಮಧ್ಯಪ್ರದೇಶದ ಮುಖ್ಯ ನ್ಯಾಯಾಧೀಶರಾನ್ನಾಗಿ ವರ್ಗಾವಣೆ ಮಾಡಲಾಯಿತು…
ಹೀಗಾಗಿ ಈಗ ಹೊಸ ಪೀಠದ ಮುಂದೆ ಹೊಸ ವಿಚಾರಣೆ… ಅದು ಮುಂದೂಡಿಕೆ…
ಉಮರ್ ಮತ್ತಿತರರು ಈಗಾಗಲೇ ಜಾಮೀನು ಇಲ್ಲದೆ, ವಿಚಾರಣೆ ಇಲ್ಲದೆ ಜೈಲಿನಲ್ಲಿ ನಾಲ್ಕು ವರ್ಷ ಕಳೆದಿದ್ದಾರೆ..
ನಾಲ್ಕು ವರ್ಷಗಳಲ್ಲಿ ಮೂರು ಹೊಸ ವಿಚಾರಣೆ… 25 ಕ್ಕೂ ಹೆಚ್ಚು ಬಾರಿ ಮುಂದೂಡಿಕೆ…
ಆದರೂ ಸುಪ್ರೀಂ ಕೋರ್ಟು ಒಬ್ಬ ಆರೋಪಿಯನ್ನು ಒಂದು ದಿನವೂ ವಿನಾ ಕಾರಣ ಜೈಲಿನಲ್ಲಿ ಇಟ್ಟುಕೊಳ್ಳಬಾರದು ಏಕೆಂದರೆ bail is law, jail is exception ಅಂತೆಲ್ಲ ಉದ್ದುದ್ದ ಮಾತಾಡುತ್ತೆ….
ಆದರೆ ಯುವರ್ ಆನರ್….
ಉಮರ್ ಖಾಲಿದ್ ಮತ್ತಿತರರು ಹಾಗೂ ಭೀಮ ಕೊರೆಗಾವ್ ನಂತ ಆಳುವ ವರ್ಗದ ದ್ರೋಹಗಳನ್ನು ಬಯಲು ಮಾಡಿದವರ ಪ್ರಕರಣಗಳಲ್ಲಿ…
ಭಾರತದ ಸಂವಿಧಾನ ಕ್ಕೆ ವಿರೋಧವಾಗಿ
Forever jail-Never bail ಆಗುತ್ತಿರುವುದು ಕಾಣುತ್ತಿಲ್ಲವೇ….? ಈ ಮಾನವ ಹಕ್ಕು ಉಲ್ಲಂಘನೆಯಲ್ಲಿ ನ್ಯಾಯಾಂಗ ವೂ ಪಾಲುದಾರಾರಾಗುತ್ತಿಲ್ಲವೇ….?
ಜಸ್ಟ್ ಆಸ್ಕಿಂಗ್
– ಶಿವಸುಂದರ್, ಸಾಮಾಜಿಕ ಹೋರಾಟಗಾರರು



